Advertisement

ಆಸಕ್ತಿಗೆ ಅನುಗುಣವಾಗಿ ಕೋರ್ಸ್‌ ಆಯ್ದುಕೊಳ್ಳಿ

09:58 AM Mar 12, 2020 | mahesh |

ಪಿಯುಸಿ ಪರೀಕ್ಷೆ ಆರಂಭವಾಗಿದೆ, ಎಸೆಸೆಲ್ಸಿ ಪರೀಕ್ಷೆ ಇನ್ನೆನೊ ಆರಂಭವಾಗಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಟೆನ್ಶನ್‌ ಜತೆಗೆ ಮುಂದೇನು? ಎನ್ನುವ ಗೊಂದಲವೂ ಇದೆ. ಆದರೆ ಗೊಂದಲದ ಬದಲು ಆಯ್ಕೆಯ ಕುರಿತು ಎಚ್ಚರವಿರುವುದು ಅಗತ್ಯ. ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಕೋರ್ಸ್‌ ಗಳನ್ನುಆಯ್ಕೆ ಮಾಡುವುದರಿಂದ ಮುಂದೆ ಸುಲಭವಾಗಿ ಕೋರ್ಸ್‌ಗಲ್ಲಿ ಮುಂದುವರೆಯಬಹುದು.

Advertisement

1. ಆಯ್ಕೆ ಆಸಕ್ತಿಗೆ ಅನುಗುಣವಾಗಿರಲಿ
ಕೋರ್ಸ್‌ ಆಯ್ಕೆ ಮಾಡುವ ಮುನ್ನ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಯಾವುದು, ತಮ್ಮ ಆಸಕ್ತಿಗೆ ಹೊಂದಿಕೆಯಾಗುವ ಕೋರ್ಸ್‌ ಯಾವುದು ಎನ್ನುವುದನ್ನು ತಿಳಿದುಕೊಳ್ಳಬೇಕು.

2. ಒತ್ತಾಯಕ್ಕೆ ಆಯ್ಕೆ ಮಾಡಿಕೊಳ್ಳಬೇಡಿ
ಕೋರ್ಸ್‌ ಆಯ್ಕೆ ಮಾಡುವಾಗ ಸ್ನೇಹಿತರು ಆಯ್ಕೆ ಮಾಡಿದರು ಎಂಬ ಕಾರಣಕ್ಕೋ ಅಥವಾ ಪೋಷಕರ ಒತ್ತಾಯಕ್ಕೋ ಆಯ್ಕೆ ಮಾಡುವುದರಿಂದ ಮುಂದೆ ಅದರಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಆದ್ದರಿಂದ ನಿಮ್ಮ ಆಸಕ್ತಿಗೆ ಮಹತ್ವ ನೀಡಿ.

3. ಮಾಹಿತಿ ಸಂಗ್ರಹಿಸಿ
ಪ್ರತಿಯೊಂದು ಕೋರ್ಸ್‌ ಕುರಿತಾದ ಮಾಹಿತಿ ಸಂಗ್ರಹಿಸಿಕೊಳ್ಳಿ. ಮಾಹಿತಿ ದೊರೆತರೆ ಯಾವ ಕೋರ್ಸ್‌ ಉತ್ತಮ, ಯಾವ ಕೋರ್ಸ್‌ ತಮ್ಮ ಆಸಕ್ತಿಗೆ ಪೂರಕವಾಗಿದೆ ಎನ್ನುವ ಎಲ್ಲ ಮಾಹಿತಿಗಳು ದೊರೆಯಲು ಸಾಧ್ಯ.

4. ಗುರಿಗೆ ಪೂರಕವಾದ ಕೋರ್ಸ್‌ ಆಯ್ಕೆ ಮಾಡಿ
ನಿಮ್ಮ ಗುರಿ ಯಾವುದು ಅದಕ್ಕೆ ಪೂರಕವಾದ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕು. ಗುರಿ ಒಂದಿದ್ದು, ಕೋರ್ಸ್‌ ಆಯ್ಕೆ ಇನ್ನೊಂದಿದ್ದರೆ ಗುರಿ ಸಾಧನೆ ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಗುರಿಗೆ ಪೂರಕವಾದ ಕೋರ್ಸ್‌ ಆಯ್ಕೆ ಮಾಡಿಕೊಳ್ಳಿ.

Advertisement

5. ಆಯ್ಕೆ ಮಾಡುವ ಕೋರ್ಸ್‌ನ ಸ್ಕೋಪ್‌ ತಿಳಿದುಕೊಳ್ಳಿ
ನಿಮ್ಮ ಆಯ್ಕೆಯ ಕೋರ್ಸ್‌ನ ಸ್ಕೋಪ್‌ ಎಷ್ಟಿದೆ ಎನ್ನುವುದನ್ನು ತಿಳಿಯುವುದು ಉತ್ತಮ. ಆಯ್ಕೆ ಮಾಡುವ ಕೋರ್ಸ್‌ ಇವತ್ತಿಗೆ ಪ್ರಸ್ತುತವೋ ಎನ್ನುವುದನ್ನೂ ತಿಳಿದುಕೊಳ್ಳುವುದು ಉತ್ತಮ.

6. ಯಾವ ಕಾಲೇಜು ಉತ್ತಮ
ನೀವು ಆಯ್ಕೆ ಮಾಡುವ ಕೋರ್ಸ್‌ ಯಾವ ಕಾಲೇಜಿನಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಯಾವ ಕಾಲೇಜು ಉತ್ತಮ, ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದನ್ನು ತಿಳಿದುಕೊಳ್ಳುವುದರಿಂದ ಉತ್ತಮ ಆಯ್ಕೆ ಸಾಧ್ಯ.

ಆಯ್ಕೆ ಸರಿಯಿಲ್ಲದೆ ಅದೆಷ್ಟೋ ವಿದ್ಯಾರ್ಥಿಗಳ ಕನಸು ಕಮರಿರುವುದೂ ಇದೆ. ವಿದ್ಯಾರ್ಥಿಗಳ ಈ ಹಂತದ ಆಯ್ಕೆ ಉತ್ತಮವಾಗಿದ್ದರೆ, ಸರಿ ಇದ್ದರೆ ಮುಂದೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರೀಕ್ಷಿಸಬಹುದು.

ಕೋರ್ಸ್‌ ಆಯ್ಕೆಗೆ ಮುನ್ನ….
ಕೋರ್ಸ್‌ ಆಯ್ಕೆಗೂ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ಹಲವು ವಿಷಯಗಳನ್ನು ತಿಳಿದುಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next