ಬೆಂಗಳೂರು: ಪ್ರಸಕ್ತ ಸಾಲಿನಿಂದ ಪದವಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮಾಡಲಾಗುತ್ತಿದ್ದು, ವಿಷಯದ ಆಯ್ಕೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿರುವ ಗೊಂದಲದ ಕುರಿತು ರಾಜ್ಯ ಸರ್ಕಾರ ಮತ್ತೂಮ್ಮೆ ಸ್ಪಷ್ಟೀಕರಣ ನೀಡಿದ್ದು, ಕನ್ನಡ ಬಾರದ ವಿದ್ಯಾರ್ಥಿಗಳು ಒಂದು ಸೆಮಿಸ್ಟರ್‌ನಲ್ಲಿ ಮಾತ್ರ ಕನ್ನಡ ಕಲಿಕೆ ಕಡ್ಡಾಯ, ಉಳಿದಂತೆ ಮೂರು ಸೆಮಿಸ್ಟರ್‌ನಲ್ಲಿ ಯಾವ ಭಾಷೆ ಬೇಕಾದರೂ ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ.
ವಿದ್ಯಾರ್ಥಿಗಳು ಬಿ.ಎ ಅಥವಾ ಬಿ.ಎಸ್ಸಿಗೆ ಆಯಾ ಕಾಲೇಜುಗಳಲ್ಲಿ ಲಭ್ಯವಿರುವ ಎರಡು ವಿಷಯಗಳನ್ನುಆಯ್ಕೆ ಮಾಡಿಕೊಳ್ಳಬೇಕು. ನಂತರ ಮೂರನೇ ವರ್ಷದ ಆರಂಭದಲ್ಲಿ ಈ ಎರಡು ವಿಷಯಗಳಲ್ಲಿ ಒಂದನ್ನು ಮೇಜರ್ ಆಗಿ ಮತ್ತು ಇನ್ನೊಂದನ್ನು ಮೈನರ್ ಆಗಿ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬಹುದಾಗಿದೆ. 3ನೇ ವರ್ಷದಲ್ಲಿ ಅಧ್ಯಯನ ಮಾಡಿದ ಮೇಜರ್ ವಿಷಯದ ಆಧಾರದಲ್ಲಿ ನಾಲ್ಕನೇ ವರ್ಷದಲ್ಲಿ ಅಧ್ಯಯನ ಮಾಡಿ ಆನರ್ಸ್ ಪದವಿ ಪಡೆಯಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:- ಅಂದು ಸಿಂಗರ್ ಆಗಿ ಯು.ಕೆಯಲ್ಲಿ ಮೆರಗು; ಇಂದು ಬರ್ಗರ್ ಸ್ಟಾಲಿನಲ್ಲೇ ಬದುಕು
ಹಾಗೆಯೇ ವಿದ್ಯಾರ್ಥಿಯು ಮೊದಲ ವರ್ಷದ ಆರಂಭದಲ್ಲಿ ಕೋರ್ ವಿಷಯದ ಜತೆಗೆ ಒಂದು ಮುಕ್ತ ಆಯ್ಕೆ(ಒಪನ್ ಇಲೆಕ್ಟೀವ್) ವಿಷಯ ಆಯ್ಕೆ ಮಾಡಿ ಕೊಳ್ಳಬೇಕು. ವಿದ್ಯಾರ್ಥಿ ಮೊದಲ ವರ್ಷ ಆಯ್ಕೆ ಮಾಡಿ ಕೊಂಡ ಮುಕ್ತ ಆಯ್ಕೆ ವಿಷಯದಲ್ಲಿಯೇ ಮುಂದುವರಿ ಯಬಹುದು ಅಥವಾ ಪ್ರತಿ ಸೆಮಿಸ್ಟರ್‌ನಲ್ಲಿ ಈ ವಿಷಯದ ಬದಲಾವಣೆಗೆ ಅವಕಾಶವಿದೆ ಎಂದು ತಿಳಿಸಿದೆ.
ಪದವಿಯ ಮೊದಲ 2 ವರ್ಷಗಳ ನಾಲ್ಕು ಸೆಮಿಸ್ಟರ್‌ಗಳಲ್ಲಿ 2 ಭಾಷೆಗಳನ್ನು ವಿದ್ಯಾರ್ಥಿ ಗಳು ಕಲಿಯಬಹು ದಾಗಿದೆ. ಈ ಎರಡು ಭಾಷೆಯಲ್ಲಿ ಕನ್ನಡ ನಾಲ್ಕು ಸೆಮಿಸ್ಟರ್‌ನಲ್ಲಿ ಕಡ್ಡಾಯವಾಗಿ ಕಲಿಯಬೇಕು. ಕನ್ನಡದ ಜತೆಗೆ ವಿದ್ಯಾರ್ಥಿ ತನ್ನ ಆಯ್ಕೆಯ ಇನ್ನೊಂದು ಭಾಷೆ ಕಲಿಯಬಹುದಾಗಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.