Advertisement

ವಿಕ್ರಂ ಅಭಿನಯದ ‘ಕೋಬ್ರಾ’ ಫರ್ಸ್ಟ್ ಲುಕ್ ರಿಲೀಸ್ ; ಸಪ್ತ ಅವತಾರದಲ್ಲಿ ಸೇತು!

10:09 AM Feb 29, 2020 | Hari Prasad |

ಚೆನ್ನೈ: ಅದು ‘ಸೇತು’ ಇರಬಹುದು, ‘ಪಿತಾಮಗನ್’ ಇರಬಹುದು ಇಲ್ಲ ‘ಕಾಶಿ’ ಚಿತ್ರವಿರಬಹುದು, ‘ಅನ್ನಿಯನ್’ ಇರಬಹುದು ಅಥವಾ ಇತ್ತೀಚಿನ ‘ಐ’ ಚಿತ್ರ ಇರಬಹುದು – ನಟ ಚಿಯಾನ್ ವಿಕ್ರಂ ಅಂದರೆ ಅಲ್ಲಿ ಪ್ರಯೋಗಶೀಲತೆ ಪಕ್ಕಾ ಎನ್ನುವುದು ಚಿತ್ರಪ್ರೇಮಿಗಳ ಲೆಕ್ಕಾಚಾರ.

Advertisement

ಇದಕ್ಕೆ ಪೂರಕವೆಂಬಂತೆ ವಿಕ್ರಂ ಅಭಿನಯದ ಹೊಸ ಚಿತ್ರ ‘ಕೋಬ್ರಾ’ದಲ್ಲೂ ಚಿಯಾನ್ ವಿಕ್ರಂ ತನ್ನ ಅಭಿಮಾನಿಗಳನ್ನು ನಿರಾಶೆಪಡಿಸಿಲ್ಲ. ಇಂದು ‘ಕೋಬ್ರಾ’ ಚಿತ್ರದ ಫರ್ಸ್ಟ್ ಲುಕ್ ಪೋಸ್ಟರನ್ನು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ‘ಸೆವೆನ್ ಸ್ಕ್ರೀನ್ ಸ್ಟುಡಿಯೋಸ್’ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಿಲೀಸ್ ಮಾಡಿದ್ದು, ಈ ಫೊಸ್ಟರ್ ನಲ್ಲಿ ವಿಕ್ರಂ ಏಳು ಗೆಟಪ್ ಗಳಲ್ಲಿ ಮಿಂಚಿದ್ದಾರೆ. ಇದರೊಂದಿಗೆ ‘ಕೋಬ್ರಾ’ ಚಿತ್ರದ ಕುರಿತಾಗಿ ಚಿಯಾನ್ ಅಭುಮಾನಿಗಳೂ ಸೇರಿದಂತೆ ಚಿತ್ರರಸಿಕರ ಕುತೂಹಲ ನೂರ್ಮಡಿಗೊಂಡಿದೆ.


‘ಕಾಯುವಿಕೆ ಮುಕ್ತಾಯಗೊಂಡಿದೆ #Cobra ಬಂದಿದ್ದಾನೆ, #CobraFirstLook ಎಂದು ಹ್ಯಾಷ್ ಟ್ಯಾಗ್ ರಚಿಸಿ ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ಸೆವೆನ್ ಸ್ಕ್ರೀನ್ ಸ್ಟುಡಿಯೋ ಈ ಫೊಸ್ಟರನ್ನು ಬಿಡುಗಡೆ ಮಾಡಿದ್ದಾರೆ.

ದೊಡ್ಡದಾದ ಕನ್ನಡಿಯೊಂದರ ಮುಂದೆ ಬೆನ್ನು ಹಾಕಿ ನಿಂತಿರುವ ವಿಕ್ರಂ ಅವರ ಎರಡೂ ಬದಿಯಲ್ಲಿ ನಮಗೆ ಮುಖ ಮಾಡಿ ನಿಂಡಿರುವಂತೆ ಉಳಿದ ಆರು ಪಾತ್ರಗಳು ಕಾಣಿಸುತ್ತವೆ. ಅದರಲ್ಲಿ ಓರ್ವ ಶ್ರೀಮಂತ, ಸಾಮಾನ್ಯ ಶ್ರೀಮಂತ, ಪ್ರಾಯದ ವ್ಯಕ್ತಿ, ಕಡುಕಪ್ಪು ಬಣ್ಣದ ವ್ಯಕ್ತಿ ಹಾಗೂ ಬೇರೆ ಬೇರೆ ವರ್ಗಕ್ಕೆ ಸೇರಿರುವ ಮೂವರು ವ್ಯಕ್ತಿಗಳ ಸಹಿತ ಒಬ್ಬನೇ ನಟನ ಒಟ್ಟು ಏಳು ಪಾತ್ರಗಳು ಈ ಪೋಸ್ಟರ್ ನಲ್ಲಿ ಪ್ರತಿಬಿಂಬಿತವಾಗಿವೆ.

ಅಜಯ್ ಜ್ಞಾನಮುತ್ತು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಕ್ರಿಕೆಟಿನ ಇರ್ಫಾನ್ ಪಠಾಣ್ ಅವರು ಈ ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಕೆ.ಜಿ.ಎಫ್. ನಾಯಕಿ ಶ್ರೀನಿಧಿ ಶೆಟ್ಟಿ ಅವರು ವಿಕ್ರಂ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿ ದೇರಿದಂತೆ ಒಟ್ಟು ಮೂರು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರ ಮೇ ತಿಂಗಳಿನಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next