ಚೆನ್ನೈ: ಚಿಯಾನ್ ವಿಕ್ರಮ್ (Chiyaan Vikram) ಅವರ ಬಹುನಿರೀಕ್ಷಿತ ʼತಂಗಲಾನ್ʼ (Thangalaan) ಗುರುವಾರ(ಆ.15ರಂದು) ವರ್ಲ್ಡ್ ವೈಡ್ ರಿಲೀಸ್ ಆಗಿದೆ.
ಮಾರ್ನಿಂಗ್ ಶೋನಿಂದಲೇ ಪ್ರೇಕ್ಷಕರು ಸಿನಿಮಾ ನೋಡಲು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಕೆಲ ಸಿನಿಮಾ ಮಂದಿರದ ಮುಂದೆ ನೋಡಲು ಸಿಕ್ಕಿತು. ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರು ಟ್ವಿಟರ್(ಎಕ್ಸ್) ನಲ್ಲಿ ತನ್ನ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ʼಕೆಜಿಎಫ್ʼ ಪೂರ್ವಜರ ಕಥೆ ಇದಾಗಿದ್ದು, ಚಿನ್ನದ ಹುಡುಕಾಟ ಹಾಗೂ ಕಾಡು ಜನಾಂಗದ ಅಳಿವು – ಉಳಿವಿನ ಹೋರಾಟದ ಕಥೆಯನ್ನು ರೋಚಕವಾಗಿ ಸಿನಿಮಾದಲ್ಲಿ ತೋರಿಸಲಾಗಿದೆ.
ಹೇಗಿದೆ ಸಿನಿಮಾ, ಸಿನಿಮಾ ನೋಡಿದವರು ಏನಂತಾರೆ ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ..
ಇಲ್ಲಿದೆ ಟ್ವಿಟರ್ ರಿವ್ಯೂ..
1
st ಹಾಗೂ 2nd ಹಾಫ್ ಅದ್ಭುತವಾಗಿದೆ. ವಿಕ್ರಮ್ – ಮಾಳವಿಕಾ ಚೆನ್ನಾಗಿ ಅಭಿನಯಿಸಿದ್ದಾರೆ. ಬಿಜಿಎಂ, ಮೇಕಿಂಗ್ ಚೆನ್ನಾಗಿದೆ. 1
st ಹಾಫ್ ನಲ್ಲಿನ ಕೆಲ ಡೈಲಾಗ್ಸ್ ಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಯಿತು. ಭಾವನಾತ್ಮಕವಾಗಿ ಸಿನಿಮಾ ಕನೆಕ್ಟ್” ಆಗುತ್ತದೆ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಸಿನಿಮಾ ಚೆನ್ನಾಗಿದೆ. ಸಿನಿಮಾದಲ್ಲಿನ ವಿಕ್ರಮ್, ಪಾರ್ವತಿ ಹಾಗೂ ಮಾಳವಿಕ ಅವರ ಅಭಿನಯವೂ ಉತ್ತಮವಾಗಿದೆ. ಜಿವಿ ಪ್ರಕಾಶ್ ಅವರ ಮ್ಯೂಸಿಕ್ ಹಾಗೂ ಬಿಜಿಎಂ ತುಂಬಾ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಸೆಕೆಂಡ್ ಹಾಫ್ ಸ್ವಲ್ಪ ಲ್ಯಾಗ್ ಆಗಿದೆ ಆದರೂ ಡಿಸೆಂಟ್ ಆಗಿದೆ ಎಂದು ಪ್ರೇಕ್ಷಕರೊಬ್ಬರು ಬರೆದುಕೊಂಡಿದ್ದಾರೆ.
2024ರಲ್ಲಿ ಇದುವರೆಗೆ ಕಾಲಿವುಡ್‌ನಲ್ಲಿ ಬಂದ ಉತ್ತಮ ಸಿನಿಮಾ ಇದು. ವಿಕ್ರಮ್ ಅವರ ಅಭಿನಯ ಪ್ರಶಸ್ತಿಗೆ ಅರ್ಹವಾಗಿದೆ. ಜಿವಿ ಪ್ರಕಾಶ್ ಮ್ಯೂಸಿಕ್ ಗಮನ ಸೆಳೆಯುತ್ತದೆ. ದ್ವಿತೀಯಾರ್ಧವು ಚೆನ್ನಾಗಿ ಕೆಲಸ ಮಾಡಿದೆ ಎಂದು ಒಬ್ಬರು ಹೇಳಿದ್ದಾರೆ.
ನಿರ್ದೇಶಕ ಪಾ ರಂಜಿತ್ ಸಿನಿಮೀಯ, ಸಾಕ್ಷ್ಯಚಿತ್ರ , ರಾಜಕೀಯ ಕ್ಯಾಂಪೇನ್ ಹೀಗೆ ಮೂರು ಥೀಮ್‌ಗಳನ್ನು ಒಂದೇ ಸಿನಿಮಾದಲ್ಲಿ ಬೆರೆಸಲು ಪ್ರಯತ್ನಿಸಿದ್ದಾರೆ. ಇದು ಕೆಲಸ ಮಾಡಲಿಲ್ಲ ಮತ್ತು ಚಿತ್ರದ ಉದ್ದಕ್ಕೂ ನಮ್ಮನ್ನು ಇದು ಗೊಂದಲದ ಸ್ಥಿತಿಯಲ್ಲಿ ಇರಿಸುತ್ತದೆ. ಚಿಯಾನ್ ವಿಕ್ರಮ್ ಒಬ್ಬರೇ ರಕ್ಷಕ ಮತ್ತು ಎಂದಿನಂತೆ ಅವರು ತನ್ನ ಪಾತ್ರದಲ್ಲಿ ಬದುಕಿದ್ದಾರೆ ಎಂದು ಸಿನಿಮಾ ನೋಡಿ ಒಬ್ಬರು ಬರೆದುಕೊಂಡಿದ್ದಾರೆ.
ಟ್ವಿಸ್ಟ್ ಸಂಪೂರ್ಣವಾಗಿ ಅನಿರೀಕ್ಷಿತವಾಗಿತ್ತು. ಸಿನಿಮಾದಲ್ಲಿ ರೋಮಾಂಚಕವಾಗಿಸುವ ದೃಶ್ಯಗಳಿವೆ. ಚಿತ್ರಕಥೆ ಚೆನ್ನಾಗಿದೆ. ವಿಕ್ರಮ್ ಅಭಿನಯ ನೆಕ್ಸ್ಟ್ ಲೆವೆಲ್ ಎಂದು ನೆಟ್ಟಿರೊಬ್ಬರು ಹೇಳಿದ್ದಾರೆ.
ಮತ್ತೊಬ್ಬರು, “ನಿಮ್ಮ ಹಣವನ್ನು ವ್ಯರ್ಥ ಮಾಡಬೇಡಿ! ಒಂದು ಪದದಲ್ಲಿ ವಿಮರ್ಶೆ ಮಾಡಬೇಕೆಂದರೆ ಇದೊಂದು ಪ್ಲಾಫ್ ಸಿನಿಮಾವೆಂದು” ಹೇಳಿದ್ದಾರೆ.
ವಿಕ್ರಮ್ ಜತೆಗೆ ಸಿನಿಮಾದಲ್ಲಿ ಪಾರ್ವತಿ ತಿರುವೋತ್ತು, ಮಾಳವಿಕಾ ಮೋಹನನ್ ಮತ್ತು ಪಶುಪತಿ ಮುಂತಾದವರು ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.