Advertisement
ಖಾಸಗಿ ಸ್ವಾಯತ್ತೆಯ ಬೋರ್‌ವೆಲ್‌ನಿಂದ ಟ್ಯಾಂಕರ್ ಮೂಲಕ ನೀರನ್ನು ಸಂಗ್ರಹಿಸಿ ಪಂ. ವ್ಯಾಪ್ತಿಯ 890 ಮನೆಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿ ಒಟ್ಟು 3019 ಜನ ವಾಸ ಮಾಡುತ್ತಿದ್ದಾರೆ. ಕೆಲವೆಡೆ ಬಾವಿಗಳಿದ್ದು ಅದರಲ್ಲಿನ ನೀರನ್ನು ತೀರಾ ಅಗತ್ಯವಿರುವ ಮಂದಿಗೆ ಒದಗಿಸಲಾಗುತ್ತಿದೆ.
ಪಂ. ನಿಂದ ನೀರು ಒದಗಿಸಲಾಗುತ್ತಿದ್ದರು, ಇಲ್ಲಿನ ಜನತೆ ಆತಂಕದಲ್ಲಿಯೇ ದಿನ ಕಳೆಯುವಂತಾಗಿದೆ. ನಿತ್ಯ ಬಳಕೆಯ ನೀರಿಗೂ ಬವಣೆ ಪಡುತ್ತಿದ್ದಾರೆ. ಸಮರ್ಪಕ ಮಳೆ ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುವಂತಿದ್ದು ಜನತೆ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕೃಷಿಕರ ಬವಣೆ
ತೀವ್ರ ಜಲ ûಾಮದಿಂದ ಕೃಷಿ ಭೂಮಿ ಬರಡಾಗುತ್ತಿದೆ. ಇದರಿಂದ ಆತಂಕಕ್ಕೆ ಒಳಗಾಗಿರುವ ಇಲ್ಲಿನ ಕೃಷಿಕರು ಮುಂದಿನ ಒಂದು ವಾರದೊಳಗೆ ಮಳೆ ಬಾರದಿದ್ದಲ್ಲಿ ಬೀಜ ಬಿತ್ತನೆ, ಇತರ ಕೃಷಿ ಚಟುವಟಿಕೆಗಳನ್ನು ನಿಭಾಯಿಸುವ ಬಗ್ಗೆ ಚಿಂತಿಸುತ್ತಿದ್ದಾರೆ.