Advertisement

ಜಾನಪದ ಸಂಸ್ಕೃತಿ ತಾಯಿ ಬೇರು

09:50 AM Aug 25, 2019 | Naveen |

ಚಿತ್ತಾಪುರ: ಜಾನಪದ ಕ್ಷೇತ್ರವು ಎಲ್ಲ ಸಾಹಿತ್ಯ, ಸಂಸ್ಕೃತಿಗೂ ತಾಯಿ ಬೇರು ಎಂದು ಕನ್ನಡ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಎಂ.ಬಿ. ನಿಂಗಪ್ಪ ಹೇಳಿದರು.

Advertisement

ಪಟ್ಟಣದ ಆರ್‌.ಕೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್‌ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಬುಡಕಟ್ಟು ಮತ್ತು ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವನ ಬುದ್ಧಿ, ಮನಸ್ಸು ವಿಕಾಸವಾದಂತೆಲ್ಲ ಜಾನಪದ ಕಲೆಗಳು ಹೊರಹೊಮ್ಮಿದವು. ಜಾನಪದವು ಜನ ಸಮುದಾಯದ ಸಾಮಾಜಿಕ ಜೀವನದ ಸಂಕೇತ. ರಾಷ್ಟ್ರೀಯ ಸಂಸ್ಕೃತಿಯ ತಾಯಿ ಬೇರು ಎಂದು ಹೇಳಿದರು.

ಜಾನಪದ ಕ್ಷೇತ್ರವು ಮನುಷ್ಯನ ಜೀವನ ಮತ್ತು ಸಂಸ್ಕೃತಿ ಪ್ರತಿಬಿಂಬಿಸುವ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಮನುಷ್ಯನ ವೈವಿಧ್ಯಮಯ ಬದುಕಿನ ಗುಣಲಕ್ಷಣಗಳನ್ನು ಪದಗಳ ಮೂಲಕ ಕಟ್ಟಿಕೊಡುತ್ತದೆ. ಮಾನವ ಸಂಸ್ಕೃತಿಯ ಆರಂಭದಿಂದಲೇ ಆರಂಭವಾದ ಜಾನಪದ ಮಾನವ ಕುಲ ಉಳಿದಿರುವವರೆಗೂ ಉಳಿಯುತ್ತದೆ ಎಂದರು. ಪ್ರಾಚಾರ್ಯ ಡಾ| ವಿಜಯಕುಮಾರ ಸಾಲಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಸಾಹಿತ್ಯದ ಮೂಲ ಹಳ್ಳಿಗಳಿಂದ ಕೂಡಿದ್ದು, ಇಂದಿಗೂ ಜಾನಪದ ಸೊಗಡು ಜೀವಂತಿಕೆ ಹಳ್ಳಿಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಹೇಳಿದರು.

ಪ್ರಾಧ್ಯಪಕ ಡಾ| ಬಿ.ಕೆ. ಪಂಡಿತ ವಿಶ್ವ ಜಾನಪದ ದಿನಾಚರಣೆ, ಪ್ರೊ| ಮಲ್ಲಪ್ಪ ಮಾನೇಗಾರ ವಿಶ್ವ ಬುಡಕಟ್ಟು ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕಾಶಿನಾಥ ಗುತ್ತೇದಾರ, ಕನ್ನಡ ಜಾನಪದ ಪರಿಷತ್‌ ಅಧ್ಯಕ್ಷ ಚನ್ನವೀರ ಕಣ್ಣಗಿ, ಜಿಲ್ಲಾ ಕಾರ್ಯದರ್ಶಿ ಎಚ್.ಬಿ. ಪಾಟೀಲ, ಬುಡ್ಗ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಮಾರುತಿ ಎಂ. ಮಾತನಾಡಿದರು.

Advertisement

ಇದೇ ವೇಳೆ ಜಾನಪದ ಕಲಾವಿದರಾದ ಗುರುಲಿಂಗಯ್ಯಸ್ವಾಮಿ ಮುತ್ತಗಾ, ಶಂಕ್ರಮ್ಮ ರಾಮತೀರ್ಥ, ದುಂಡಪ್ಪ ಗುಡ್ಲಾ ಕೊಲ್ಲೂರ, ಬಸವರಾಜ ಅವಂಟಿ ದಿಗ್ಗಾಂವ ಅವರನ್ನು ಸನ್ಮಾನಿಸಲಾಯಿತು. ಪ್ರಾಧ್ಯಾಪಕರಾದ ಎ.ಜಿ. ಖಾನ್‌, ಡಾ| ಸಾವಿತ್ರಿ ಕುಲಕರ್ಣಿ, ಡಾ| ಸಾವಿತ್ರಿ ದೇಸಾಯಿ, ಡಾ| ನುಜಹತ್‌ ಪರವೀನ್‌, ಪೂಜಾ ಹೊನಗುಂಟಿ, ವಿನಯ ಕಣ್ಣೂರ್‌, ಕಜಾಪ ಪದಾಧಿಕಾರಿಗಳಾದ ಜಗದೇವ ಕುಂಬಾರ, ರಾಜೇಂದ್ರ ಕೊಲ್ಲೂರ, ಬಸವರಾಜ ಹೊಟ್ಟಿ ಇತರರು ಇದ್ದರು. ಮಲ್ಲಪ್ಪ ಪ್ರಾರ್ಥಿಸಿದರು, ಡಾ| ಅನೀಲ ಮಂಡೋಲಕರ್‌ ಸ್ವಾಗತಿಸಿದರು, ಡಾ| ಶರಣಪ್ಪ ದಿಗ್ಗಾಂವ ನಿರೂಪಿಸಿದರು, ಮರೇಪ್ಪ ಮೇತ್ರೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next