Advertisement
ತಾಲೂಕಿನಲ್ಲಿ ಎರಡು ಪುರಸಭೆಗಳಿವೆ. ಶಹಾಬಾದನಲ್ಲಿ ನಗರಸಭೆಯಿದೆ. ನಾಲ್ಕು ಬೃಹತ್ ಕೈಗಾರಿಗೆ ಘಟಕಗಳನ್ನು ಒಳಗೊಂಡಿದ್ದು, ಅತಿ ಹೆಚ್ಚಿನ ಆದಾಯ ಬರುವ ಕೇಂದ್ರ ಸ್ಥಾನವಾಗಿದೆ. ಭೌಗೋಳಿಕವಾಗಿ ಮೂರು ತಾಲೂಕುಗಳನ್ನು ಒಂದುಗೂಡಿಸಿ ಕಂದಾಯ ಉಪ ವಿಭಾಗ ಮಾಡುವುದರಿಂದ ರೈತರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಎಲ್ಲ ಇಲಾಖೆಗಳ ಕಟ್ಟಡಗಳ ಸೌಲಭ್ಯಗಳು ಚಿತ್ತಾಪುರದಲ್ಲಿವೆ. ಇದನ್ನು ರಾಜ್ಯ ಸರ್ಕಾರ ಪರಿಗಣಿಸಬೇಕೆಂದು ಆಗ್ರಹಿಸಿದರು.
Related Articles
Advertisement
ಮಾಜಿ ಶಾಸಕ ವಾಲ್ಮೀಕಿ ನಾಯಕ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಚಿತ್ತಾಪುರದ ಶಾಸಕರು ಸಚಿವರಾಗಿದ್ದಾರೆ. ಅವರ ತಂದೆ ಸಂಸದರಾಗಿದ್ದಾರೆ. ಅವರು ಪ್ರಭಾವ ಬೀರಿ ಕಂದಾಯ ಉಪವಿಭಾಗ, ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಈಡೇರಿಸುವಂತೆ ಮಾಡಬೇಕು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಅವಂಟಿ, ಜಿಪಂ ಮಾಜಿ ಸದಸ್ಯ ಮಾಪಣ್ಣ ಗಂಜಗೀರಿ, ಜೆಸ್ಕಾಂ ನಿರ್ದೇಶಕ ಮುಕ್ತಾರ ಪಟೇಲ್, ಮರೇಪ್ಪ ಹಳ್ಳಿ, ಬಸವರಾಜ ಬೆಣ್ಣೂರಕರ್, ಬಸವರಾಜ ಚಿಮ್ಮನಳ್ಳಿ ಮಾತನಾಡಿದರು.
ಚಿತ್ತಾಪುರ ಬಂದ್ ಕರೆಗೆ ವಿವಿಧ ಸಂಘಟನೆ, ತಾಲೂಕಿನ ಸಾರ್ವಜನಿಕರು, ರೈತರು, ಕಾಲೇಜು ವಿದ್ಯಾರ್ಥಿಗಳು, ಚುನಾಯಿತ ಪ್ರತಿನಿ ಗಳು, ವ್ಯಾಪಾರಸ್ಥರು, ಸಂಘ ಸಂಸ್ಥೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಚಿತ್ತಾಪುರ ಸ್ವಯಂ ಪ್ರೇರಿತವಾಗಿ ಬಂದ್‌ಗೆ ಕರೆ ಕೊಟ್ಟಿದ್ದರಿಂದ ಪಟ್ಟಣದ ಅಂಗಡಿ ಮುಂಗಟ್ಟು, ತರಕಾರಿ, ಪೇಟ್ರೋಲ್ ಬಂಕ್ ಗಳು ಬಂದ್ ಆಗಿದ್ದರಿಂದ ಬಿಕೋ ಎನ್ನುತ್ತಿದ್ದವು.
ಪಟ್ಟಣದ ಲಾಡಿಜಿಗ್ ಕ್ರಾಸ್‌ಯಿಂದ ಪ್ರಾರಂಭವಾದ ಮೆರವಣಿಗೆಯು ಬಸವೇಶ್ವರ ಚೌಕ್, ಅಂಬೇಡ್ಕರ್ ವೃತ್ತ, ಭುವನೇಶ್ವರಿ ಚೌಕ್, ನಾಗಾವಿ ಚೌಕ್ ಸೇರಿದಂತೆ ಪ್ರಮುಖ ಬೀದಿಗಳ ಮೂಲಕ ತಹಶೀಲ್ ಕಚೇರಿಗೆ ತಲುಪಿತು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ಮಲ್ಲೇಶಾ ತಂಗಾ ಅವರಿಗೆ ಸಲ್ಲಿಸಿದರು.
ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಮೂದ್ ಸಾಹೇಬ್, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವ್ಹಾಣ, ಬಿಜೆಪಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೂರ್, ಜಿಪಂ ಮಾಜಿ ಅಧ್ಯಕ್ಷ ರಮೇಶ ಮರಗೋಳ, ಜಿಪಂ ಸದಸ್ಯರಾದ ಶಿವರುದ್ರ ಭೀಣಿ, ಅಶೋಕ ಸಗರ್, ಪುರಸಭೆ ಉಪಾಧ್ಯಕ್ಷ ಮಹ್ಮದ್ ರಸೂಲ್ ಮುಸ್ತಫಾ, ಮುಖಂಡರಾದ ಲಿಂಗರೆಡ್ಡಿಗೌಡ ಭಾಸರೆಡ್ಡಿ, ಮಲ್ಲಪ್ಪ ಹೊಸ್ಮನಿ ಇಂಗನಕಲ್, ವೀರಣ್ಣಗೌಡ ಪರಸರೆಡ್ಡಿ, ಚಂದ್ರಶೇಖರ ಕಾಶಿ, ನಾಗರಾಜ ಭಂಕಲಗಿ, ಶೀಲಾ ಕಾಶಿ, ವಿನೋದ್ ಗುತ್ತೇದಾರ, ಇಸ್ಮಾಯಿಲ್ ಪಟೇಲ್ ಕಮರವಾಡಿ, ರವಿಂದ್ರ ಸಜ್ಜನಶೆಟ್ಟಿ, ಶಂಕರ್ ಚವ್ಹಾಣ, ಗೋಪಾಲ ರಾಠೊಡ, ಮಹೇಶ ಕಾಶಿ, ನರಹರಿ ಕುಲಕರ್ಣಿ, ಪ್ರಕಾಶ ಕಮಕನೂರ್, ದೇವಿಂದ್ರ ಅಣಕಲ್, ಇಬ್ರಾಹಿಂ ಪಟೇಲ್, ಶೇಖ ಬಬ್ಲು ಶಿವಾಜಿ ಕಾಶಿ, ಅಣ್ಣರಾವ ಮೂಡಬೂಳ, ಅಶ್ವಥ ರಾಠೊಡ, ಶಾಂತಪ್ಪ ಚಾಳಿಕಾರ್, ದೇವಿಂದ್ರಪ್ಪ ಕರದಾಳ, ಮಲ್ಲಿಕಾರ್ಜು ಕಾಳಗಿ, ದೀಲಿಪ ಕಾಶಿ ಇದ್ದರು.