Advertisement

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

10:22 AM Jul 27, 2024 | Team Udayavani |

ಚಿತ್ತಾಪುರ: ಪಟ್ಟಣದ ಹೊರ ವಲಯದ ದಿಗ್ಗಾಂವ ಸಂಪರ್ಕಿಸುವ ರಸ್ತೆ ಬಳಿ ಯುವಕನೊಬ್ಬನ ಶವ ಪತ್ತೆಯಾಗಿದೆ.

Advertisement

ಪಟ್ಟಣದ ನಾಸರಜಂಗ್ ಬಡಾವಣೆಯ ಶರೀಫ್ ನಿಜಾಮುದ್ದಿನ್ (22) ಕೊಲೆಯಾದ ಯುವಕ.

ಶರೀಫ್ ಓರಿಯಂಟ್ ಸಿಮೆಂಟ್ ಕಂಪನಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಜು. 25ರ ಗುರುವಾರ ಮಧ್ಯಾಹ್ನ 2 ಗಂಟೆಗೆ ಮನೆಯಿಂದ ಹೋದವನು ರಾತ್ರಿ 9 ಗಂಟೆಯಾದರೂ ಮರಳಿ ಬಾರದಿದ್ದಾಗ ಕುಟುಂಬದವರು ಹುಡುಕಾಟ ಶುರು ಮಾಡಿದ್ದು, ರಾತ್ರಿ 11 ಗಂಟೆಗೆ ಕೆಸಿಎಲ್ ಕಂಪನಿ ಬಳಿಯ ಕಾಲೊನಿಯೊಂದರ ಪಕ್ಕದಲ್ಲಿ ಶರೀಫ್ ಮೃತದೇಹ ಪತ್ತೆಯಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್‌ಐ ಶ್ರೀಶೈಲ್ ಅಂಬಾಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತನ ತಂದೆ ನಿಜಾಮುದ್ದಿನ್ ಮಗನ ಸಾವಿನ ಬಗ್ಗೆ ಸಂಶಯ ಇದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next