Advertisement

ಸೆ.22ರಂದು ಚಿಟ್ಟಾಣಿ ಸ್ಮೃತಿಭವನ ಲೋಕಾರ್ಪಣೆ; ನೆರವಿಗೆ ಮನವಿ

12:19 PM Aug 02, 2018 | |

ಹೊನ್ನಾವರ: ಪದ್ಮಶ್ರೀ ಚಿಟ್ಟಾಣಿ ಯಕ್ಷಕಲಾ ಕೇಂದ್ರದ ಮೊದಲ ಹಂತ “ಚಿಟ್ಟಾಣಿ ಸ್ಮೃತಿಭವನ’ವನ್ನು ರಾಮಚಂದ್ರ ಹೆಗಡೆಯವರು ನಿಧನರಾಗಿ ವರ್ಷ ತುಂಬುವ ಸೆಪ್ಟೆಂಬರ್‌ 22ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ರಾಮಚಂದ್ರ ಹೆಗಡೆಯವರ ಧರ್ಮಪತ್ನಿ ಸುಶೀಲಾ ರಾಮಚಂದ್ರ ಹೆಗಡೆ ಮತ್ತು ಮಕ್ಕಳು ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕೈದು ವರ್ಷಗಳ ಹಿಂದೆ ರಾಘವೇಶ್ವರ ಶ್ರೀಗಳು ಅಡಿಗಲ್ಲು ಸಮಾರಂಭ ನೆರವೇರಿಸಿದ್ದರು. ಕಾರಣಾಂತರಗಳಿಂದ ಅಲ್ಲಿ ನಿರ್ಮಾಣ ಕಾರ್ಯ ಆರಂಭವಾಗಲೇ ಇಲ್ಲ. ನಿಧನದ 6 ತಿಂಗಳ ಮೊದಲು ಸ್ವತಃ ಚಿಟ್ಟಾಣಿಯವರು ತನ್ನ ಜೀವಿತಾವಧಿಯಲ್ಲಿ ಗಳಿಸಿದ ಪದಕ, ಪ್ರಶಸ್ತಿ, ನೆನಪಿನ ಕಾಣಿಕೆಗಳನ್ನು ಸಿಡಿ ಮತ್ತು ವೇಷಭೂಷಣಗಳನ್ನು ಸಂಗ್ರಹಿಸಿಡಲು ಮನೆಯ ಅಂಗಳದಲ್ಲಿ ಕಟ್ಟಡ ನಿರ್ಮಿಸಲು ಇಚ್ಚೆಪಟ್ಟು ರಾಘವೇಶ್ವರ ಶ್ರೀಗಳ ಮಂತ್ರಾಕ್ಷತೆ ಪಡೆದು ಆರಂಭಿಸಿದ್ದರು. ಕಂಬಗಳು ಮೇಲೇಳುತ್ತಿರುವಾಗಲೇ ಅವರು ವಿಧಿ ವಶರಾದರು. ಅವರ ಇಚ್ಚೆಯಂತೆ ಕಟ್ಟಡ ಕಾರ್ಯವನ್ನು ನನ್ನ ಅಧ್ಯಕ್ಷತೆಯಲ್ಲಿ ಮಕ್ಕಳು ಟ್ರಸ್ಟ್‌ ರಚಿಸಿಕೊಂಡು ಮುಂದುವರಿಸಿದ್ದಾರೆ. ಆರ್‌.ವಿ. ದೇಶಪಾಂಡೆಯವರು, ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರು, ಕೆನರಾ ಬ್ಯಾಂಕ್‌, ಮಾಜಿ ಶಾಸಕ ಮಂಕಾಳ ವೈದ್ಯ ಮೊದಲಾದವರು ಸುಮಾರು 20ಲಕ್ಷ ರೂಪಾಯಿ ನೀಡಿ ಈ ಕಾರ್ಯಕ್ಕೆ ನೆರವಾಗಿದ್ದಾರೆ.

ಹೆಚ್ಚಿನ ನೆರವು ಕೊಡುವುದಾಗಿ ಹೇಳಿದ್ದಾರೆ. 1ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯೆ ಮೊದಲ ಹಂತ ವಸ್ತು ಸಂಗ್ರಹಾಲಯವನ್ನು ಅವರ ಮೊದಲ ಪುಣ್ಯತಿಥಿ ಸೆಪ್ಟೆಂಬರ್‌ 22, 23 ಬರಲಿದ್ದು ಈ ಮುಹೂರ್ತದಲ್ಲಿ ಅವರ ಅಮೂಲ್ಯ ವಸ್ತುಗಳನ್ನು ನೂತನ ಕಟ್ಟಡದಲ್ಲಿಟ್ಟು ಸಾಂಕೇತಿಕ ಉದ್ಘಾಟಿಸಲಾಗುವುದು. ಮಹಡಿಯ ಮೇಲೆ ಯಕ್ಷಗಾನ ಅಧ್ಯಯನಕ್ಕೆ, ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡುವ ಆಸೆ ಇದೆ. ಆದ್ದರಿಂದ ಚಿಟ್ಟಾಣಿಯವರ ಅಭಿಮಾನಿಗಳು ಸಹಕಾರ ನೀಡಬೇಕು ಎಂದು ಅವರು ಹೇಳಿದ್ದಾರೆ. ಚಿಟ್ಟಾಣಿಯವರ ಮಕ್ಕಳಾದ ನರಸಿಂಹ, ನಾರಾಯಣ, ಮಗಳು ಲಲಿತಾ, ಅಳಿಯ ಗಣಪತಿ ಹೆಗಡೆ, ಅಭಿಮಾನಿ ಡಾ| ಜಿ.ಎ.ಹೆಗಡೆ ಸೋಂದಾ ಇದ್ದರು.

ನೆರವಿಗೆ ಮನವಿ
ಸಹಾಯ ಮಾಡಬಯಸುವವರುಶ್ರೀಮತಿ ಸುಶೀಲಾ ರಾಮಚಂದ್ರ ಹೆಗಡೆ ಚಿಟ್ಟಾಣಿ, ಅಧ್ಯಕ್ಷರು, ಪದ್ಮಶ್ರೀ ಚಿಟ್ಟಾಣಿ ಯಕ್ಷಕಲಾ ಕೇಂದ್ರ ಟ್ರಸ್ಟ್‌ (ರಿ.), ಗುಡೇಕೇರಿ, ಹೇರಂಗಡಿ, ತಾ| ಹೊನ್ನಾವರ ಈ ವಿಳಾಸಕ್ಕೆ ಅಥವಾ ಹೊನ್ನಾವರ ಕೆನರಾ ಬ್ಯಾಂಕ್‌ ಶಾಖೆ ಉಳಿತಾಯ ಖಾತೆ ನಂಬರ್‌ 1067101039835  MDTA ನಂಬರ್‌ :AKS@0001067 ಜಮಾ ಮಾಡಿ ತಿಳಿಸಬಹುದು. 9482932306 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next