ಚಿತ್ತಾಪುರ: ಅಕ್ರಮ ಜಾನುವಾರು ಸಾಗಾಣೆ ಪ್ರಕರಣ ಸಂಬಂಧಿಸಿ ನಡೆದ ಕಲ್ಲು ತೂರಾಟ ಹಾಗೂ ಜೀಪ್‌ಗೆ ಬೆಂಕಿ ಹಚ್ಚಿರುವ ಪ್ರಕರಣವನ್ನು ಬೇಧಿಸಿದ ಪೊಲೀಸರು ಎರಡು ಪ್ರತ್ಯೇಕ ಪ್ರಕರಣದಲ್ಲಿ ಶೀಘ್ರ ಕಾರ್ಯಾಚರಣೆ ನಡೆಸಿ 16 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ರವಿವಾರ ಮಧ್ಯರಾತ್ರಿ ಪೊಲೀಸ್ ಠಾಣೆ ಹತ್ತಿರ ಕರ್ತವ್ಯನಿರತ ಪೊಲೀಸರ ಮೇಲೆ ಕಲ್ಲು ತೋರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಜಹೀರಮಿಯ್ಯ ಮಹೇಬೂಬ ಅಲಿ, ಶೇಖ್ ಫಾರೋಖ್ ಅಬ್ದುಲ್ ಅಜೀಜ್, ಬಾಬಾ ಲಾಲಅಹ್ಮದ್, ಮಹ್ಮದ ರೀಯಾಜ್ ಜಾನಿಮಿಯ್ಯ, ಮಹ್ಮದ್ ಫಯಾಜ್ ಜಾನಿಮಿಯ್ಯ, ವಾಸೀಂ ಅಕ್ರಮ ಅಬ್ದುಲ್ ಅಜೀಜ್‌ಶೇಖ, ಸೈಯದ್ ಬಶೀರ ಮಹೇಬೂಬಅಲಿ, ಮಹ್ಮದ್ ಅತೀಕ್ ಅಬ್ದುಲ್ ರಹೀಮ, ವಾಸೀಂ ಆಕ್ರಮ ಮಹ್ಮದ ಹುಸೇನ್‌ಸಾಬ, ಶೇಖ ಅಬ್ದುಲ್ ಮಾಜೀದ ಅಬ್ದುಲ್ ಹಮೀದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಜೀಪ್‌ಗೆ ಬೆಂಕಿ ಹಚ್ಚಿದ ಪ್ರಕರಣ: ಸೋಮವಾರ ಮಧ್ಯರಾತ್ರಿ ಪಟ್ಟಣದಲ್ಲಿ ಇಸ್ಮಾಯಿಲ್ ಎಂಬುವರ ಜೀಪ್‌ಗೆ ಬೆಂಕಿ ಹಚ್ಚಿ ಸುಟ್ಟಿರುವ ಆರೋಪಿಗಳಾದ ಸುರೇಶ ಶಂಕರ, ಸತೀಶ ಬಸವರಾಜ, ಸಿದ್ಧರಾಜ ಮಲ್ಲೇಶಪ್ಪ, ಶ್ರೀಧರ ಸೂರ್ಯಕಾಂತ ಬಾಳಿ, ವಿನೋದ ತಿಮ್ಮಯ್ಯ ಜೇವರ್ಗಿ, ಆನಂದ ವಿಜಯಕುಮಾರ ರೆಡ್ಡಿ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಪಥ ಸಂಚಲನ: ಪಟ್ಟಣದಲ್ಲಿ ಅಕ್ರಮ ಜಾನುವಾರು ಸಾಗಾಣೆ ಪ್ರಕರಣ ಸಂಬಂಧಿಸಿ ನಡೆದ ಕಲ್ಲು ತೋರಾಟ ಹಾಗೂ ಜೀಪ್‌ಗೆ ಬೆಂಕಿ ಹಚ್ಚಿರುವ ಪ್ರಕರಣದಿಂದಾಗಿ ಪಟ್ಟಣದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಬುಧವಾರ ಪೊಲೀಸರಿಂದ ಪಥ ಸಂಚಲನ ನಡೆಯಿತು.
ಎಸ್ಪಿ ಯಡಾ ಮಾರ್ಟಿನ್ ನೇತೃತ್ವದಲ್ಲಿ ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಎಎಸ್ಪಿ ಅಕ್ಷಯ ಹಾಕೆ, ಡಿವೈಎಸ್ಪಿ ಕೆ. ಬಸವರಾಜ, ಸಿಪಿಐ ಪಂಚಾಕ್ಷರಿ ಸಾಲಿಮಠ, ಸೇಡಂ ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐಗಳಾದ ನಟರಾಜ ಲಾಡೆ, ಜಗದೇವಪ್ಪ ಪಾಳಾ ಹಾಗೂ ಕೆಎಸ್‌ಆರ್‌ಪಿ, ಡಿಆರ್ ಹಾಗೂ ಪೊಲೀಸ್ ಸಿಬ್ಬಂದಿ ಪಥ ಸಂಚಲನ ನಡೆಸಿದರು.
ವಜ್ರ ವಾಹನ, ಅಶ್ರುವಾಯು ವಾಹನ, ಹೈವೆ ಪೆಟ್ರೋಲಿಂಗ್ ವಾಹನ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ವಾಹನಗಳು ಪಥ ಸಂಚಲನದಲ್ಲಿ ಇದ್ದವು.