Advertisement
ಹಿಂದುಳಿದ ಜಿಲ್ಲೆಯಲ್ಲಿ ಅಧಿಕಾರಿಗಳು ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿರಬಹುದು ಎಂಬುದನ್ನು ಇವರು ಸಾಧಿಸಿ ತೋರಿಸಿದ್ದಾರೆ. ಜಿಲ್ಲಾಧಿಕಾರಿಯಾಗಿ ಆಗಮಿಸಿದ ನಂತರ ಕಳೆದ ಫೆಬ್ರವರಿ 19 ರಂದು ಜಿಲ್ಲೆಯ ಗಡಿ ಭಾಗವಾದ ಹೊಳಲ್ಕೆರೆ ತಾಲೂಕಿನ ಕುಗ್ರಾಮ ಕಾಳಘಟ್ಟ ಲಂಬಾಣಿಹಟ್ಟಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಆ ಕುಗ್ರಾಮದ ಜನರ ಸಮಸ್ಯೆ ಆಲಿಸಿ ಪರಿಹಾರವನ್ನೂ ಕಲ್ಪಿಸಿದರು. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಿಂದ ಕಾಳಘಟ್ಟ ಲಂಬಾಣಿಹಟ್ಟಿಯ ಚಿತ್ರಣವೇ ಬದಲಾಯಿತು. ಇದರಿಂದ ಖುಷಿಯಾದ ಗ್ರಾಮಸ್ಥರು, ಜಿಲ್ಲಾಧಿಕಾರಿಗಳ ಹೆಸರನ್ನೇ ಗ್ರಾಮಕ್ಕೆ ಇಟ್ಟು ಕೃತಜ್ಞತೆ ಅರ್ಪಿಸಿದ್ದಾರೆ. ಜುಲೈ 1 ರಂದು ಗ್ರಾಮದ ನಾಮಕರಣ ಸಮಾರಂಭವೂ ನಡೆದಿದೆ.
Related Articles
Advertisement
ಏನೇನು ಅಭಿವೃದ್ಧಿ ಕಾರ್ಯ?: ಕಾಳಘಟ್ಟದಿಂದ ಕಾಳಘಟ್ಟ ಲಂಬಾಣಿಹಟ್ಟಿಗೆ 1.10 ಕೋಟಿ ರೂ. ವೆಚ್ಚದಲ್ಲಿ 2.2 ಕಿಮೀ ಸಂಪರ್ಕ ರಸ್ತೆ, ಸಾಸಲು ಗ್ರಾಮದಿಂದ ಕಾಳಘಟ್ಟ ಲಂಬಾಣಿಹಟ್ಟಿಗೆ 1.10 ಕೋಟಿ ರೂ. ವೆಚ್ಚದಲ್ಲಿ 2.2 ಕಿಮೀ ಕೂಡು ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ 10 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, 5 ಲಕ್ಷ ರೂ. ವೆಚ್ಚದಲ್ಲಿ ಶಾಂತಿಸಾಗರದಿಂದ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಪೈಪ್‌ಲೈನ್ ಇತರೆ ಕಾಮಗಾರಿಗೆ 15 ಲಕ್ಷ ರೂ. ಮಂಜೂರು ಮಾಡಲಾಗಿದೆ. 13 ಜನರಿಗೆ ಸಂಧ್ಯಾ ಸುರಕ್ಷಾ ಯೋಜನೆ ಸೌಲಭ್ಯ ಕಲ್ಪಿಸಲಾಗಿದೆ. 29 ಜನರಿಗೆ ವೃದ್ಧಾಪ್ಯ ವೇತನ, ಇಬ್ಬರಿಗೆ ಮನಸ್ವಿನಿ, ಆರು ಫಲಾನುಭವಿಗಳಿಗೆ ವಿಧವಾ ವೇತನ ಮಂಜೂರಾಗಿದೆ. 340 ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಹೆಲ್ತ್ ಕಾರ್ಡ್ ವಿತರಣೆ, 28 ಫಲಾನುಭವಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಒದಗಿಸಲಾಗಿದೆ.