Advertisement

ಸರಳ ಜೀವನ ಶೈಲಿ ಅಳವಡಿಸಿಕೊಳ್ಳಿ

12:35 PM Jul 28, 2019 | Naveen |

ಚಿತ್ರದುರ್ಗ: ಸರಳ ರೀತಿಯಲ್ಲಿ ಬದುಕು ಕಟ್ಟಿಕೊಳ್ಳುವುದು, ಆದರ್ಶಮಯ ಜೀವನ ಮಾಡುವತ್ತ ಯುವ ಸಮೂಹ ಚಿಂತನೆ ಮಾಡಬೇಕು ಎಂದು ಯುವ ಸಮಾಲೋಚಕ ಹಾಗೂ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಡಿ. ಶ್ರೀಕುಮಾರ್‌ ಹೇಳಿದರು.

Advertisement

ನಗರದ ಎಸ್‌ಎಲ್ವಿ ಪಿಯು ಕಾಲೇಜಿನಲ್ಲಿ ಶ್ರೀ ಸಿರಿಸಂಪಿಗೆ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಸಂಸ್ಥೆ ಚಿತ್ರದುರ್ಗ ಹಾಗೂ ಜನ ಆರೋಗ್ಯ ಕೇಂದ್ರ ನಿಮ್ಹಾನ್ಸ್‌ ಬೆಂಗಳೂರು ಇವುಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ‘ಯುವ ಸ್ಪಂದನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರಳ ರೀತಿಯ ಜೀವನ ಶೈಲಿಯೇ ಉತ್ತಮ ಆರೋಗ್ಯದ ಗುಟ್ಟು ಎಂದರು. ಇಂದಿನ ಯುವಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳನ್ನು ಉದಾಹರಣೆಗಳೊಂದಿಗೆ ವಿವರಿಸಿದರು.

ಜನ ಆರೋಗ್ಯ ಕೇಂದ್ರದ ಯುವ ಸ್ಪಂದನ ಕ್ಷೇತ್ರ ಸಂಪರ್ಕಾಧಿಕಾರಿ ಅಮೃತ್‌ಕುಮಾರ್‌ ಮಾತನಾಡಿ, ಇಂದಿನ ದಿನಗಳಲ್ಲಿ ಯುವಜನರು ಅನುಭವಿಸುತ್ತಿರುವ ತಲೆಮಾರುಗಳ ನಡುವಿನ ಹೊಂದಾಣಿಕೆ, ಸುರಕ್ಷತೆ, ಭಾವನಾತ್ಮಕ ಹತೋಟಿ, ಲಿಂಗ ಮತ್ತು ಲೈಂಗಿಕತೆ, ಆರೋಗ್ಯ, ಜೀವನ ಶೈಲಿ ಮತ್ತು ವರ್ತನೆ, ಶಿಕ್ಷಣ ಮತ್ತು ಪಠ್ಯ ವಿಷಯ, ವ್ಯಕ್ತಿತ್ವ ಬೆಳವಣಿಗೆ ಉದ್ಯೋಗ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಗೊಂದಲದಲ್ಲಿದ್ದರೆ ಯುವ ಸ್ಪಂದನ ಕೇಂದ್ರವನ್ನು ಸಂಪರ್ಕಿಸಬಹುದು ಎಂದರು.

ಜೀವನದಲ್ಲಿ ಭರವಸೆ ಕಳೆದುಕೊಂಡು ವೈಫಲ್ಯದ ಭಯದಿಂದ, ಪರೀಕ್ಷೆಯ ಆತಂಕದಿಂದ ಖನ್ನತೆಗೆ ಬಲಿಯಾಗುತ್ತಿದ್ದಾರೆ. ಈ ವಯಸ್ಸಿನಲ್ಲಿ ಆಗುವ ಸಮಸ್ಯಗಳಿಗೆ ಮಾರ್ಗದರ್ಶನ ಬಹಳ ಮುಖ್ಯ. ಆದ್ದರಿಂದ ಈಗ ನೀವು ಶಿಕ್ಷಣ ಪಡೆದು ಗುರಿ ಸಾಧಿಸುವ ಕಡೆ ಗಮನ ಹರಿಸಬೇಕು. ಯಾವುದೇ ಅನಾವಶ್ಯಕ ವಿಷಯಗಳಿಗೆ ಕಿವಿಗೊಡಬೇಡಿ ಎಂದು ತಿಳಿಸಿದರು.

ಯುವ ಪರಿವರ್ತಕಿ ಗೀತಾ, ಕಾಲೇಜಿನ ಉಪನ್ಯಾಸಕರಾದ ಕೇಶವಮೂರ್ತಿ, ಕಾವ್ಯಶ್ರೀ ಇತರರು ಇದ್ದರು. ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರಜ್ವಲ್ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next