Advertisement

ಭಾರತ ವಿಶ್ವ ನಾಯಕನಾಗಲಿ: ರೆಡ್ಡಿ

05:12 PM Aug 08, 2019 | Naveen |

ಚಿತ್ರದುರ್ಗ: ವಿಶ್ವದಲ್ಲೇ ಅತ್ಯಂತ ಶಾಂತಿಯುತ ರಾಷ್ಟ್ರ ಎಂದು ಹೆಸರಾಗಿರುವ ಭಾರತ, ಜಗತ್ತಿನ ಜನರು ನೆಮ್ಮದಿಯಿಂದ ಬದುಕಲು ನಾಯಕತ್ವ ವಹಿಸಿಕೊಳ್ಳುವ ತುರ್ತು ಅಗತ್ಯವಿದೆ ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ. ಯಾದವ ರೆಡ್ಡಿ ಅಭಿಪ್ರಾಯಪಟ್ಟರು.

Advertisement

ಚಿತ್ರದುರ್ಗ ವಿಜ್ಞಾನ ಕೇಂದ್ರ, ರೋಟರಿ ಕ್ಲಬ್‌ ಹಾಗೂ ವಿದ್ಯಾವಿಕಾಸ ವಿದ್ಯಾಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಣ್ವಸ್ತ್ರ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆಗಸ್ಟ್‌ 6, 1945 ರಂದು ಅಮೆರಿಕ, ಜಪಾನ್‌ನ ಹಿರೋಶಿಮಾ ಮತ್ತು ನಾಗಾಸಾಕಿ ನಗರಗಳ ಮೇಲೆ ಅಣು ಬಾಂಬ್‌ ಹಾಕಿ ಲಕ್ಷಾಂತರ ಜನ, ಜೀವ ಸಂಕುಲಗಳ ಮಾರಣಹೋಮ ಮಾಡಿತು. ವಿಶ್ವದ ಇತಿಹಾಸದಕ್ಕೇ ಇದು ಅತ್ಯಂತ ಕರಾಳ ದಿನ ಎಂದರು.

ವಿಶ್ವಸಂಸ್ಥೆ ಪ್ರಕಾರ ಇದುವರೆಗೆ 15,513 ಯುದ್ಧಗಳು ನಡೆದಿದ್ದು, ಒಂದು ಮತ್ತು ಎರಡನೇ ಮಹಾಯುದ್ಧಗಳು ಅತ್ಯಂತ ಭೀಕರವಾಗಿದ್ದವು. ಈ ಯುದ್ಧಗಳು ಮಾನವ ಕುಲಕ್ಕೆ ಕಪ್ಪುಚುಕ್ಕೆಗಳಾಗಿವೆ. ಅಮೇರಿಕಾ ಹಾಕಿದ ಅಣುಬಾಂಬ್‌ನಿಂದ ಹಿರೋಶಿಮಾದ ಮಕ್ಕಳು, ಕಂದಮ್ಮಗಳು ಸೇರಿದಂತೆ 80 ಸಾವಿರ ಜನರು ಯಾತನೆ ಅನುಭವಿಸಿ ಸಾವನ್ನಪ್ಪಿದ್ದಾರೆ. ಕೆಲವರು ಮಾನಸಿಕ ಒತ್ತಡದಿಂದ ಯಾತನೆ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು. ರಾಜಕೀಯ ಕಾರಣಕ್ಕಾಗಿ ವಿಶ್ವದ ಕೆಲವು ರಾಷ್ಟ್ರಗಳು ಸಂಗ್ರಹಿಸಿಟ್ಟಿರುವ ನ್ಯೂಕ್ಲಿಯರ್‌ ಬಾಂಬ್‌ಗಳ ಸಂಖ್ಯೆ 50 ಸಾವಿರ ದಾಟಿದೆ. ಸಂಗ್ರಹ ಮಾಡಿದವರು ಸೇರಿದಂತೆ ಎಲ್ಲರಲ್ಲೂ ಇದು ಆತಂಕ ಸೃಷ್ಟಿಸಿದೆ. ಭಾರತ ಇದುವರೆಗೆ ಯಾರ ಮೇಲೂ ಆಕ್ರಮಣ ಮಾಡಿಲ್ಲ. ಈ ದೇಶಕ್ಕೆ ನೈತಿಕ ಶಕ್ತಿ ಇದ್ದು, ವಿಶ್ವ ಶಾಂತಿಯ ನಾಯಕತ್ವ ವಹಿಸಿಕೊಳ್ಳುವ ಎಲ್ಲಾ ಅರ್ಹತೆಗಳೂ ಇವೆ ಎಂದರು.

ವಿಜ್ಞಾನ ಕೇಂದ್ರದ ಕಾರ್ಯದರ್ಶಿ ನವೀನ್‌ ಪಿ. ಆಚಾರ್‌, ವಿವೇಕ್‌ ಮಧುರೆ, ರಾಜ್‌ಕುಮಾರ್‌, ಮಹೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next