Advertisement

ಚುನಾವಣೆ ಹಬ್ಬದಲ್ಲಿ ಪಾಲ್ಗೊಳ್ಳಿ: ಶಿಮುಶ

03:18 PM Apr 11, 2019 | Team Udayavani |

ಚಿತ್ರದುರ್ಗ: ಲೋಕಸಭೆಯ ಚುನಾವಣೆ ಮತದಾನ ಏ. 18 ರಂದು ನಡೆಯಲಿದ್ದು, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವುದರ ಮುಖಾಂತರ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ಮತ್ತು ಚುನಾವಣೆ ಎಂಬ
ಹಬ್ಬದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು.

Advertisement

ಇಲ್ಲಿನ ಗಾಂಧಿ ವೃತ್ತ, ತರಕಾರಿ, ಹೂ ಮಾರುಕಟ್ಟೆ, ವಿವಿಧ ರಸ್ತೆಯಲ್ಲಿ ಮುರುಘಾ ಮಠದ ಬಸವ ಕೇಂದ್ರದ ವತಿಯಿಂದ ಬುಧವಾರ ಆಯೋಜಿಸಿದ್ದ ‘ನಮ್ಮ ನಡಿಗೆ ಮತದಾನ ಜಾಗೃತಿ ಕಡೆಗೆ’ ಜಾಥಾದ ನೇತೃತ್ವ ವಹಿಸಿ ಶರಣರು ಮಾತನಾಡಿದರು. ಮತದಾನ ನಮ್ಮ ಹಕ್ಕು. ಆ ಹಕ್ಕನ್ನು ಅರ್ಹರಿಗೆ ಚಲಾಯಿಸುವ ಮೂಲಕ ಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು
ಎಂದರು.

ಮಿಂಚಿನ ಸಂಚಾರ: ಡಾ| ಶಿವಮೂರ್ತಿ ಮುರುಘಾ ಶರಣರು ನಗರದ ವಿವಿಧ
ಕಡೆಗಳಲ್ಲಿ ಮಿಂಚಿನ ಸಂಚಾರ ಮಾಡಿ ಜನರಲ್ಲಿ ಮತದಾನ ಜಾಗೃತಿ ಮೂಡಿಸಿದರು. ಬೆಳಿಗ್ಗೆ 7:30ಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ
ಆರಂಭವಾದ ಜಾಗೃತಿ ಜಾಥಾ, ಗಾಂಧಿ  ವೃತ್ತ, ಸಂತೆಹೊಂಡ ರಸ್ತೆ, ಮೆದೇಹಳ್ಳಿ ರಸ್ತೆ, ಬಂಬೂ ಡಿಪೋವರೆಗೆ ಸಾಗಿತು. ವಿದ್ಯಾರ್ಥಿಗಳಿಗೆ,
ಯುವ ಮತದಾರರಿಗೆ, ಸಾರ್ವಜನಿಕರಿಗೆ, ಅಂಗಡಿ ಮುಂಗಟ್ಟುಗಳಲ್ಲಿದ್ದ ವರ್ತಕರು ಮತ್ತು ಗ್ರಾಹಕರಿಗೆ, ಮಾರುಕಟ್ಟೆಯಲ್ಲಿದ್ದ ವ್ಯಾಪಾರಸ್ಥರಿಗೆ, ಕಾರ್ಮಿಕರಿಗೆ, ಪ್ರಯಾಣಿಕರಿಗೆ, ಮಹಿಳೆಯರಿಗೆ ಇನ್ನು ಇತರರಿಗೆ ಕರಪತ್ರ ನೀಡಲಾಯಿತು. ತಪ್ಪದೇ ಮತ ಚಲಾಯಿಸುವಂತೆ ಕೋರಲಾಯಿತು.

ಜಾಥಾದಲ್ಲಿ ಭಾಗವಹಿಸಿದ್ದ ಎಸ್‌.ಜೆ.ಎಂ ದಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೈಯಲ್ಲಿ ಹಿಡಿದಿದ್ದ ‘ಎಲ್ಲವನ್ನೂ ಬದಿಗಿಡಿ, ಮೊದಲು ಮತದಾನ ಮಾಡಿ, ‘ಮತವನ್ನು ಚಲಾಯಿಸಿ ಮತದ ಮೌಲ್ಯ ಉಳಿಸಿ’, “ನನ್ನ
ಮತ-ನನ್ನ ಹಕ್ಕು’ ಜಾತಿ ಧರ್ಮ ಬೇಡ, ‘ಯೋಗ್ಯರಿಗೆ ಮತ ಚಲಾಯಿಸಿ’ ಎಂಬ
ಘೋಷ ವಾಕ್ಯಗಳು ಗಮನ ಸೆಳೆದವು. ಅಥಣಿಯ ಶ್ರೀ ಶಿವಬಸವ ಸ್ವಾಮಿಗಳು,
ಹಾವೇರಿಯ ಶ್ರೀ ಬಸವ ಶಾಂತಲಿಂಗ ಸ್ವಾಮಿಗಳು, ಚಳ್ಳಕೆರೆಯ ಶ್ರೀ ಬಸವ ಕಿರಣ ಸ್ವಾಮಿಗಳು, ಎಸ್‌.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ|
ಜಿ.ಎನ್‌. ಮಲ್ಲಿಕಾರ್ಜುನಪ್ಪ, ಡಾ| ಈ. ಚಿತ್ರಶೇಖರ್‌, ಕಾರ್ಯನಿರ್ವಹಣಾಧಿ ಕಾರಿ ಎಂ.ಜಿ. ದೊರೆಸ್ವಾಮಿ, ನಿರಂಜನಮೂರ್ತಿ, ರುದ್ರಾಣಿ ಗಂಗಾಧರ, ವೀರಶೈವ ಸಮಾಜದ ಕಾರ್ಯದರ್ಶಿ ಶಿವಕುಮಾರ್‌ ಪಟೇಲ್‌,
ಕೆಇಬಿ ಷಣ್ಮುಖಪ್ಪ, ನಾಗರಾಜ ಸಂಗಂ, ಮಹಲಿಂಗಪ್ಪ, ಗಾಯತ್ರಿ ಶಿವರಾಂ, ಎಸ್‌. ಜೆ.ಎಂ ಸಂಸ್ಥೆಗಳ ಮುಖ್ಯಸ್ಥರು ಜಾಥಾದಲ್ಲಿ ಭಾಗವಹಿಸಿದ್ದರು.

ಎಷ್ಟೇ ಕಷ್ಟ, ಒತ್ತಡಗಳಿರಲಿ, ಏ. 18ರಂದು ಯಾವುದೇ ಕಾರಣಕ್ಕೂ ಮತದಾನ
ಮಾಡುವುದನ್ನು ತಪ್ಪಿಸಬೇಡಿ. ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯೊಳಗೆ ನಿಮಗೆ
ಸೂಕ್ತ ಎನ್ನಿಸುವ ಸಮಯದಲ್ಲಿ ಹೋಗಿ ಯೋಗ್ಯರಿಗೆ ಮತ ಹಾಕಿ ಬನ್ನಿ.
ಡಾ| ಶಿವಮೂರ್ತಿ ಮುರುಘಾ ಶರಣರು.

Advertisement
Advertisement

Udayavani is now on Telegram. Click here to join our channel and stay updated with the latest news.

Next