Advertisement

ಎಚ್‌.ಡಿ. ಪುರ ಗ್ರಾಮದಲ್ಲಿ ಸ್ವಯಂಪ್ರೇರಿತ ಲಾಕ್‌ಡೌನ್‌

12:10 PM Jul 09, 2020 | Naveen |

ಚಿತ್ರದುರ್ಗ: ದಿನದಿಂದ ದಿನಕ್ಕೆ ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜನರು ಜಾಗೃತರಾಗುತ್ತಿದ್ದಾರೆ. ಹೊಳಲ್ಕೆರೆ ತಾಲೂಕು ಹೊರಕೆರೆದೇವರಪುರದಲ್ಲಿ ವ್ಯಾಪಾರಿಗಳು ಅರ್ಧ ದಿನ ಮಾತ್ರ ವ್ಯಾಪಾರ ನಡೆಸಿ ಅನಂತರ ಸ್ವಯಂಪ್ರೇರಿತರಾಗಿ ಲಾಕ್‌ಡೌನ್‌ ಮಾಡುತ್ತಿದ್ದಾರೆ.

Advertisement

ಈ ಕುರಿತು ಈಗಾಗಲೇ ಗ್ರಾಮಸ್ಥರೆಲ್ಲರೂ ತೀರ್ಮಾನ ಮಾಡಿದ್ದು, ಜು. 7 ರಿಂದ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ವ್ಯಾಪಾರ ನಡೆಸಿ ಆನಂತರ ಬಂದ್‌ ಮಾಡಲು ಎಲ್ಲ ವ್ಯಾಪಾರಿಗಳು ಹಾಗೂ ಗ್ರಾಮಸ್ಥರು ಒಪ್ಪಿದ್ದಾರೆ. ಹೊರಕೆರೆದೇವರಪುರದ ಪಕ್ಕದಲ್ಲೇ ಇರುವ ಕೆರೆಯಾಗಳಹಳ್ಳಿಯಲ್ಲಿ ಮಹಿಳೆಯೊಬ್ಬರಿಗೆ ಕೋವಿಡ್ ಪಾಸಿಟಿವ್‌ ಬಂದಿದ್ದು, 30 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. ಈ ಮಹಿಳೆ ಎಚ್‌.ಡಿ. ಪುರದ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದಿದ್ದರಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಈ ನಿಟ್ಟಿನಲ್ಲಿ ಸ್ವಯಂ ಲಾಕ್‌ಡೌನ್‌ ವಿಧಿಸಿಕೊಂಡಿದ್ದಾರೆ.

ಗ್ರಾಮಕ್ಕೆ ಸುತ್ತಲಿನ ಸುಮಾರು 30 ಹಳ್ಳಿಗಳ ಸಾವಿರಾರು ಜನತೆ ನಿತ್ಯ ಬಂದು ಹೋಗುವುದರಿಂದ ಕೋವಿಡ್ ಸೋಂಕು ಹರಡುವ ಸಾಧ್ಯತೆಯೂ ಹೆಚ್ಚಾಗಿದೆ. ಎಚ್‌ .ಡಿ. ಪುರ ಗ್ರಾಮದಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಕೂಡ ಇದ್ದು, ಅಲ್ಲಿಯೂ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ವೈನ್‌ಶಾಪ್‌, ದಿನಸಿ, ಬಟ್ಟೆ, ಸೈಬರ್‌, ತರಕಾರಿ, ಜ್ಯುವೆಲ್ಲರಿ ಸೇರಿದಂತೆ ಅನೇಕ ಬಗೆಯ ಅಂಗಡಿಗಳ ವಹಿವಾಟು ನಡೆಯುವುದರಿಂದ ಎಲ್ಲವನ್ನು 12 ಗಂಟೆಗೆ ಸೀಮಿತಗೊಳಿಸಿ ಗ್ರಾಮದ ಮುಖಂಡರು, ವ್ಯಾಪಾರಸ್ಥರು ಕೋವಿಡ್ ತಡೆಯಲು ಪಣ ತೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next