ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರಿನಿಂದ ಕೋಟೆಹಾಳ್ ಕೊಡಗವಳ್ಳಿ ಚಿಕ್ಕಎಮ್ಮಿಗನೂರು ಹಿರೇಎಮ್ಮಿಗನೂರು ಮೂಲಕ ಕಕ್ಕನೂರು ಚನ್ನಗಿರಿ ಮತ್ತು ದಾವಣಗೆರೆ ಸಂಪರ್ಕ ಕಲ್ಪಿಸುವ ರಸ್ತೆ HS -47 ಈ ರಸ್ತೆಯಲ್ಲಿ ಚಿಕ್ಕಜಾಜೂರು ಬಳಿ ರೈಲ್ವೆ ಇಲಾಖೆ ಕೊಟ್ಟೆಹಾಳ್ ಬಳಿ ನಿರ್ಮಿಸಿರುವ ಅಂಡರ್ ಗ್ರೌಂಡ್ ಸೇತುವೆ ನಂಬರ್ 63 ದುಸ್ಥಿತಿ ಕಥೆ ಇದು.
ಸೇತುವೆ ಹಲವಾರು ಬಾರಿ ದುರಸ್ತಿಯಾಗಿರುವ ಕಾರಣ ಜನಸಾಮಾನ್ಯರಿಗೆ ಸಂಚಾರ ಮಾಡುವುದು ತುಂಬಾ ಕಷ್ಟವಾಗಿರುವ ಈ ರಸ್ತೆಯಲ್ಲಿ ಸುಮಾರು ಸಾವಿರಾರು ಜನ ಸಾರ್ವಜನಿಕರು ದಿನನಿತ್ಯ ಸಂಚರಿಸುತ್ತಿದ್ದು ಮತ್ತು ಚಿಕ್ಕಜಾಜೂರು ಸೇರಿದಂತೆ ಸುತ್ತ ಮುತ್ತ ಹತ್ತಾರು ಹಳ್ಳಿಯ ಗ್ರಾಮೀಣ ಭಾಗದಿಂದ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಇದರಿಂದ ಅಂಡರ್ ಗ್ರೌಂಡ್ ಬಳಿ ಎರಡುವರೆ ಮೂರು ಅಡಿಗಿಂತ ಹೆಚ್ಚು ನೀರು ನಿಂತಿರುವುದರಿಂದ ವಾಹನಗಳು ಸಂಚರಿಸಲು ತುಂಬಾ ಕಷ್ಟವಾಗಿದೆ. ಇದರಿಂದ ಸೂಕ್ತ ಅಧಿಕಾರಿಗಳ ಗಮನಕ್ಕೂ ಸಾರ್ವಜನಿಕರು ಮಾಹಿತಿ ನೀಡಿದ್ದರು, ಯಾವುದೇ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ಸೂಕ್ತವಾದ ಕ್ರಮ ಕೈಗೊಂಡಿಲ್ಲ. ಹಾಗೂ ಇದಕ್ಕೆ ಸಂಬಂಧಪಟ್ಟ ಇಂಜಿನಿಯರ್ ವಿಜಯ್ ಕುಮಾರ್ ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಇದಕ್ಕೆ ಶಾಶ್ವತ ಪರಿಹಾರವನ್ನು ನೀಡಬೇಕು.
ತಾಲೂಕಿನ ಶಾಸಕರು ಎಂ ಚಂದ್ರಪ್ಪ ಹಾಗೂ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಇವರಿಗೆ ಹಲವಾರು ಭಾರಿ ಮನವಿ ಮಾಡಿದರೂ ಇತ್ತ ಕಡೆಗೆ ತಿರುಗಿ ನೋಡಿಲ್ಲ.
ಆದಷ್ಟು ಬೇಗ ಸಾರ್ವಜನಿಕರ ಸಮಸ್ಯೆಯನ್ನು ಸಾವಿರಾರು ಸಂಖ್ಯೆಯ ರೈತರು ಹಾಗೂ ಸಾರ್ವಜನಿಕರು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ಕಂಡುಕೊಡದಿದ್ದಲ್ಲಿ ಈ ಮಾರ್ಗದ ರಸ್ತೆಯನ್ನು ಬಂದ್ ಮಾಡುವುದರ ಮೂಲಕ ಉಗ್ರವಾದ ಹೋರಾಟವನ್ನು ಮಾಡಲು ನಿರ್ಧರಿಸಿದ್ದಾರೆ. ಕೂಡಲೇ ಶಾಶ್ವತವಾದ ಪರಿಹಾರವನ್ನು ಮಾಡಿಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೈನ್ಯ ಜಿಲ್ಲಾ ಅಧ್ಯಕ್ಷರು ಕೇಶವಮೂರ್ತಿ ಕೊಡಗವಳ್ಳಿ ಅಟ್ಟಿ ಹಾಗೂ ರೈತ ಸಂಘದ ಅಧ್ಯಕ್ಷರಾಗಿರುವ ವಿರುಪಾಕ್ಷಪ್ಪ ಚಿಕ್ಕಎಮ್ಮಿಗನೂರ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೈನ್ಯದ ಗೌರವಾಧ್ಯಕ್ಷರಾದ ಚಂದ್ರಹಾಸ ಇನ್ನು ಹೆಚ್ಚಿನ ಸಾರ್ವಜನಿಕರು ರಸ್ತೆಯನ್ನು ಬಂದ್ ಮಾಡುವುದರ ಮೂಲಕ ಮನವಿ ಮಾಡಿಕೊಂಡರು.
ಇದನ್ನೂ ಓದಿ: ಪಿಂಕ್ ಬಾಲ್ ಟೆಸ್ಟ್: ಆಸ್ಟ್ರೇಲಿಯ ತಂಡಕ್ಕೆ ಲ್ಯಾನ್ಸ್ ಮಾರಿಸ್, ಮೈಕಲ್ ನೇಸರ್