Advertisement

ಅಪರಾಧ ಪತ್ತೆಗೆ ವಿದ್ಯುನ್ಮಾನ ಸಾಕ್ಷಿ ಪ್ರಮುಖ ಅಸ್ತ್ರ

06:56 PM Sep 29, 2019 | Team Udayavani |

ಚಿತ್ರದುರ್ಗ: ಅಪರಾಧ ಪ್ರಕರಣಗಳ ಪೈಕಿ ಬಹುಪಾಲು ಪ್ರಕರಣಗಳಿಗೆ ವಿದ್ಯುನ್ಮಾನ ಸಾಕ್ಷಿಗಳೇ ಅಸ್ತ್ರವಾಗಲಿವೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಹೇಳಿದರು.

Advertisement

ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಶನಿವಾರ ರಾಜ್ಯ ನ್ಯಾಯಾಂಗ ಅಕಾಡೆಮಿ,
ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಪೊಲೀಸ್‌ ಇಲಾಖೆ ಸಹಯೋಗದಲ್ಲಿ ನ್ಯಾಯಾಂಗ, ಪೊಲೀಸ್‌ ಅಧಿಕಾರಿಗಳು ಹಾಗೂ ಸರ್ಕಾರಿ ಅಭಿಯೋಜಕರಿಗಾಗಿ ಹಮ್ಮಿಕೊಂಡಿದ್ದ ವಿದ್ಯುನ್ಮಾನ ಸಾಕ್ಷ್ಯಾಧಾರಗಳ ಬಳಕೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸದ್ಯ ಹಾಗೂ ಭವಿಷ್ಯದಲ್ಲಿ ಸೈಬರ್‌ ಸೇರಿದಂತೆ ಯಾವುದೇ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಿಗೆ ಸಾಕ್ಷಿ ಒದಗಿಸಲು ವಿದ್ಯುನ್ಮಾನ ಬಳಕೆ ಅನಿವಾರ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಅವುಗಳ ಬಳಕೆ, ದೂರು ದಾಖಲಿಸುವ ವಿಧಾನವನ್ನು ತಿಳಿದುಕೊಳ್ಳಬೇಕು ಎಂದರು.

ಯಾವ ಅಪಘಾತ ಪ್ರಕರಣವನ್ನೂ ನಿರ್ಲಕ್ಷಿಸುವಂತಿಲ್ಲ. ಕಂಪ್ಯೂಟರ್‌, ಮೊಬೈಲ್‌ ಮತ್ತಿತರೆ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಕೃತ್ಯ ಎಸಗಿರುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ತನಿಖೆ ನಡೆಸುವಾಗ ಹಲವು ಸಂ ದಿಗ್ಧತೆ ಎದುರಾಗುತ್ತವೆ. ವಿದ್ಯುನ್ಮಾನ ಸಾಕ್ಷ್ಯಾ ಗಳ ಪತ್ತೆಗಾಗಿ  ತನಿಖಾಧಿಕಾರಿಗಳು ತಮ್ಮ ಪರಿಣಿತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು
ಸಲಹೆ ನೀಡಿದರು.

ದೋಷಾರೋಪ ಪಟ್ಟಿ ಸಲ್ಲಿಸುವುದಕ್ಕಷ್ಟೇ ಪೊಲೀಸರ ಕೆಲಸ ಸೀಮಿತವಾಗಬಾರದು. ಸೈಬರ್‌ ಅಪರಾಧಗಳ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಬೇಕು. ಚಾರ್ಜ್‌ಶೀಟ್‌ ಹಾಕಿದ ನಂತರ ಸರ್ಕಾರಿ ಅಭಿಯೋಜಕರ ಜತೆಗೆ ತನಿಖಾಧಿಕಾರಿ ನಿರಂತರವಾಗಿ ಸಮಾಲೋಚನೆ ನಡೆಸಬೇಕು.

Advertisement

ಸಾಕ್ಷ್ಯಾ ಧಾರಗಳನ್ನು ಸಂಗ್ರಹಿಸಿ ಸಂರಕ್ಷಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದಾಗ ತನಿಖೆ ಹಾಗೂ ಪ್ರಕರಣ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ ಎಂದು ತಿಳಿಸಿದರು.

ಹೈಕೋರ್ಟ್‌ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹಾ ಮಾತನಾಡಿ, ಯಾವುದೇ ಪ್ರಕರಣಗಳಲ್ಲಿ ತನಿಖೆ ನಡೆಸಿದ ನಂತರ ವ್ಯಕ್ತಿ, ವಾಹನ, ಮೊಬೈಲ್‌ ಯಾವ ಪುರಾವೆಯಾದರೂ ಪರವಾಗಿಲ್ಲ. ಅವೆಲ್ಲವೂ ಒಂದೇ. ನ್ಯಾಯಾಲಯದ ಮುಂದೆ ಬಲವಾದ ಸಾಕ್ಷ್ಯಾಧಾರ ಒದಗಿಸುವುದು ಮುಖ್ಯ ಎಂದರು.

ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಮಾತನಾಡಿ, ಮಾಹಿತಿ ತಂತ್ರಜ್ಞಾನ ಬೆಳೆದಂತೆಲ್ಲ ಅನುಕೂಲದ ಜತೆಗೆ ಅನಾನೂಕೂಲವೂ ಸೃಷ್ಟಿಯಾಗುತ್ತಿದೆ. ಮೊಬೈಲ್‌ಗ‌ಳಲ್ಲಿ ಆಟವಾಡಲು ಹೋದ ಮಕ್ಕಳು ಮೃತಪಟ್ಟಿದ್ದಾರೆ. ಇತ್ತೀಚೆಗೆ ಇ-ಟೆಂಡರ್‌ ಪ್ರಕ್ರಯೆಯನ್ನೇ ಹ್ಯಾಕ್‌ ಮಾಡಲಾಗುತ್ತಿದೆ. ಅಪರಾಧ ಪತ್ತೆಗೆ ತನಿಖಾ ಧಿಕಾರಿಗಳು ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿದರೆ ನ್ಯಾಯಾಲಯಕ್ಕೆ ಸುಲಭವಾಗಿ ಸಾಕ್ಷಿಗಳನ್ನು ಒದಗಿಸಬಹುದು ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್‌.ವೈ. ವಟವಟಿ, ಹೈಕೋರ್ಟ್‌ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಸಂದೇಶ್‌ ಜೆ. ಚೌಟ, ಹಿರಿಯ ಸಿವಿಲ್‌ ನ್ಯಾಯಾಧಿಧೀಶ ಟಿ. ಶಿವಣ್ಣ, ಜಿಪಂ ಸಿಇಒ ಸತ್ಯಭಾಮ, ಎಸ್ಪಿ ಡಾ| ಕೆ. ಅರುಣ್‌, ಸರ್ಕಾರಿ
ಅಭಿಯೋಜಕ ಎನ್‌.ಎಸ್‌. ಮಲ್ಲಯ್ಯ, ನ್ಯಾಯಾಂಗ ಅಕಾಡೆಮಿಯ ರವಿಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next