Advertisement

ಚಿತ್ರದುರ್ಗದಲ್ಲಿ ಭೀಕರ ಸರಣಿ ಅಪಘಾತ: 14 ಸಾವು;15 ಮಂದಿಗೆ ಗಾಯ

12:12 PM Mar 18, 2017 | |

ಮೊಳಕಾಲ್ಮೂರು: ತಾಲೂಕಿನ ರಾಮಪುರ ಎಂಬಲ್ಲಿ  ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ  14 ಮಂದಿ ದಾರುಣವಾಗಿ ಸಾವನ್ನಪ್ಪಿ, 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

ಲಾರಿಯೊಂದರ ಚಕ್ರ ಸಿಡಿದು 2 ಆಟೋ ರಿಕ್ಷಾಗಳು ಮತ್ತು ಟೆಂಪೋ ಟ್ರಾವೆಲರ್‌ಗೆ ಢಿಕ್ಕಿಯಾಗಿ ಅವಘಡ ಸಂಭವಸಿದೆ . ಅಪಘಾತದ ತೀವ್ರತೆಗೆ ಆಟೋಗಳಲ್ಲಿದ್ದ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರು ಬಳ್ಳಾರಿಯ ವಿಮ್ಸ್‌  ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.ಟಿಟಿ ವಾಹನದಲ್ಲಿದ್ದ 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಮೃತರಲ್ಲಿ 7 ಪುರುಷರು ,4 ಮಹಿಳೆಯರು ಮತ್ತು 3 ಬಾಲಕಿಯರು ಎಂದು ತಿಳಿದು ಬಂದಿದೆ. 

ಬಳ್ಳಾರಿ ಕಡೆಗೆ ತೆರಳುತ್ತಿದ್ದ ಲಾರಿಯ ಟಯರ್‌ ಸ್ಫೋಟಗೊಂಡು  ಶಹಾಪುರದತ್ತ ತೆರಳುತ್ತಿದ್ದ ಟಿಟಿಗೆ ಢಿಕ್ಕಿಯಾಗಿದೆ. ಬಳಿಕ ರಿಕ್ಷಾಗಳಿಗೆ ಢಿಕ್ಕಿಯಾಗಿ ಅವಘಡ ಸಂಭವಸಿದೆ ಎಂದು ವರದಿಯಾಗಿದೆ. 

ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next