Advertisement

ಜಮೀರ್‌ರನ್ನು ಬಂಧಿಸಿದರೆ ಸತ್ಯ ಹೊರ ಬರುತ್ತೆ

12:59 PM Jul 01, 2019 | Team Udayavani |

ಚಿತ್ರದುರ್ಗ: ಐಎಂಎ ಪ್ರಕರಣದಲ್ಲಿ ಸಚಿವ ಜಮೀರ್‌ ಅಹಮ್ಮದ್‌ ಹೆಸರು ಕೇಳಿ ಬಂದಿದ್ದು, ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್‌ ನೀಡಿದೆ. ಪಿಕ್‌ಪಾಕೆಟ್ ಮಾಡುವವರನ್ನು ಲಾಕಪ್‌ ನಲ್ಲಿ ಕೂಡಿ ಹಾಕಿ ಹೊಡೆದು ಬಾಯಿ ಬಿಡಿಸುವಂತೆ ಜಮೀರ್‌ ಅವರನ್ನೂ ಬಂಧಿಸಿ ಲಾಕಪ್‌ನಲ್ಲಿ ಹಾಕಿದರೆ ಸತ್ಯ ಹೊರ ಬರುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಐಎಂಎ ಜ್ಯುವೆಲರ್ಸ್‌ ಹಗರಣದಲ್ಲಿ ಜನರಿಂದ ಹಣವನ್ನು ಲೂಟಿ ಮಾಡಿ ಎಲ್ಲಿ ಇಟ್ಟಿ ದ್ದೀರಿ ಎಂದು ಇಡಿಯವರು ಸತ್ಯ ಹೊರ ಹಾಕಿಸುತ್ತಾರೆ. ಎಸ್‌ಐಟಿ ತನಿಖೆಯಿಂದ ಸತ್ಯ ಹೊರಬರಲ್ಲ. ಈ ವಂಚನೆಯಲ್ಲಿ ಹೆಸರು ಕೇಳಿಬಂದಿರುವುದರಿಂದ ಜಮೀರ್‌ ಅಹಮ್ಮದ್‌ರನ್ನು ಸಂಪುಟದಿಂದ ಕೂಡಲೇ ಕೈ ಬಿಡಬೇಕೆಂದು ಆಗ್ರಹಿಸಿದರು.

ರಾಜ್ಯದ ಜನ ಕುಡಿಯುವ ನೀರು, ಉದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಹರಿಸಬೇಕು ಎಂದ ಈಶ್ವರಪ್ಪ, ನಾವು ಸರ್ಕಾರ ಬೀಳಿಸುವ ಪ್ರಶ್ನೆಯೇ ಇಲ್ಲ. ಏಕೆಂದರೆ ಅವರವರೇ ಬಡಿದಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡುತ್ತೇವೆ. ಒಂದು ವೇಳೆ ಕಾಂಗ್ರೆಸ್‌-ಜೆಡಿಎಸ್‌ ಶಾಸಕರು ಬಿಜೆಪಿಗೆ ಬಂದರೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು.

ಅಹಿಂದ ನೆಪದಲ್ಲಿ ಬಹಳ ಬಾರಿ ಮೋಸ ಮಾಡಲು ಆಗಲ್ಲ. ವಿಶ್ವನಾಥ್‌, ಶ್ರೀನಿವಾಸ್‌ ಪ್ರಸಾದ್‌ ಸೇರಿ ಅನೇಕರಿಗೆ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ. ಮತ್ತೆ ಇದೇ ಕಾರ್ಡ್‌ ಮುಂದುವರಿಸಿದ್ದಾರೆ. ಆದರೆ ಇದರಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧವೂ ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next