Advertisement

ಎಸ್‌ಆರ್‌ಎಸ್‌ ಹೆರಿಟೇಜ್‌ ಶಾಲೆಯಲ್ಲಿ ರಂಜಾನ್‌ ಸಂಭ್ರಮ

11:54 AM Jun 05, 2019 | Naveen |

ಚಿತ್ರದುರ್ಗ: ನಗರದ ಹೊರವಲಯದ ಎಸ್‌ಆರ್‌ಎಸ್‌ ಹೆರಿಟೇಜ್‌ ಶಾಲೆಯಲ್ಲಿ ಮಂಗಳವಾರ ರಂಜಾನ್‌ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರೂ ಸಾಮೂಹಿಕವಾಗಿ ರಂಜಾನ್‌ ಹಬ್ಬ ಆಚರಿಸಿದರು.

Advertisement

ಶಾಲೆಯಲ್ಲಿ ಸಂಗ್ರಹಿಸಿದ 6,000 ರೂ ಮತ್ತು ದವಸ ಧಾನ್ಯವನ್ನು ಎಂ.ಕೆ. ಹಟ್ಟಿ ಬಸವೇಶ್ವರ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಯಾದ ಗಾಂಧಿ ಮತ್ತು ಅಂಬೇಡ್ಕರ್‌ ಅನಾಥಶ್ರಮಕ್ಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಆರ್‌ಎಸ್‌ ಶಿಕ್ಷಣ ಸಮೂಹ ಸಂಸ್ಥೆ

ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ರಂಜಾನ್‌ ಎಂದರೆ ಶಾಂತಿ, ಸಮೃದ್ಧಿಯ ವಾತಾವರಣ ನಿರ್ಮಾಣ ಮಾಡಲು ದೇವರಲ್ಲಿ ಹರಕೆ ಸಲ್ಲಿಸುವ ವಿಧಾನವಾಗಿದೆ. ಪ್ರತಿಯೊಬ್ಬ ಮನುಷ್ಯನ ಸಂಪಾದನೆಯಲ್ಲಿ ಕಾಲು ಭಾಗವನ್ನು ದೀನರು, ನಿರ್ಗತಿಕರಿಗೆ ಕೊಡುವ ಉದ್ದೇಶವನ್ನು ಸಾಕಾರಗೊಳಿಸುವ ಹಬ್ಬವಾಗಿದೆ. ರಂಜಾನ್‌ ಹಬ್ಬ ಏಕತಾ ಮನೋಭಾವನೆ ಬೆಳೆಸುವ ಧ್ಯೇಯೊದ್ದೇಶವನ್ನೊಳಗೊಂಡಿದೆ ಎಂದರು.

ಶಿಕ್ಷಣ ತಜ್ಞ ಕುದ್ರತ್‌ ಮಾತನಾಡಿ, ದೇಶದೆಲ್ಲೆಡೆ ಮುಸ್ಲಿಂ ಸಮುದಾಯದವರು ಸೌಹಾರ್ದತೆಯ ಪ್ರತೀಕವಾಗಿ ಶುಭಾಶಯಗಳ ಸಂದೇಶ ವಿನಿಮಯ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.

Advertisement

ಪ್ರಾಂಶುಪಾಲ ಎಂ.ಎಸ್‌. ಪ್ರಭಾಕರ್‌ ಮಾತನಾಡಿ, ಯಾಂತ್ರಿಕ ಬದುಕು ಸಾಗಿಸುವ ವೇಳೆ ಅನಿರೀಕ್ಷಿತವಾಗಿ ಬಂದೊದಗುವ ದುಃಖದಿಂದ ಪಾರಾಗಲು ಈ ಪವಿತ್ರ ಮಾಸದಲ್ಲಿ ರಂಜಾನ್‌ ಆಚರಿಸಲಾಗುತ್ತದೆ. ಕುರಾನ್‌ ಗ್ರಂಥ ಓದಿದರಷ್ಟೇ ಸಾಲದು, ಸತ್ಯದ ಸಾಕ್ಷಾತ್ಕಾರದಿಂದ ಆತ್ಮ ಸಂಸ್ಕಾರ ಹೊಂದುವ ಮೂಲಕ ಸಿದ್ಧಿ ಪಡೆಯಬೇಕು. ನಿರಂತರ ಒಂದು ತಿಂಗಳ ಕಾಲ ಉಪವಾಸವನ್ನು ಕಡ್ಡಾಯವಾಗಿ ಅನುಸರಿಸಬೇಕು. ಉಪ ಎಂದರೆ ಹತ್ತಿರ ವಾಸ ಎಂದರೆ ಇರುವುದು. ದೇವರನ್ನು ಆರಾಧಿಸುವ ಮೂಲಕ ದೇವರಿಗೆ ಹತ್ತಿರವಾಗುವುದು ಹಾಗೂ ದೇಹಕ್ಕೆ ಮತ್ತು ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳುವುದು ಎಂದರ್ಥ ಎಂದರು.

ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯೆ ಎಂ.ಎಸ್‌. ಅರ್ಪಿತಾ, ಕೆ.ಜೆ. ಪದ್ಮಾವತಮ್ಮ, ಈವೆಂಟ್ ಕೋ-ಆರ್ಡಿನೇಟರ್‌ ರಾಹುಲ್ ಬಿ., ಫರ್ಹಾ, ನಸೀಬಾ, ಲುಬ್ನ, ತಬುಸೂಮ್‌, ಫರೀನ್‌, ಬಿಸ್ಮಾ, ಮುಕ್ತಿಯಾರ್‌ ಮೊದಲಾದವರು ಪಾಲ್ಗೊಂಡಿದ್ದರು.

ಕುರಾನ್‌ ಗ್ರಂಥ ಓದಿದರಷ್ಟೇ ಸಾಲದು, ಸತ್ಯದ ಸಾಕ್ಷಾತ್ಕಾರದಿಂದ ಆತ್ಮ ಸಂಸ್ಕಾರ ಹೊಂದುವ ಮೂಲಕ ಸಿದ್ಧಿ ಪಡೆಯಬೇಕು. ನಿರಂತರ ಒಂದು ತಿಂಗಳ ಕಾಲ ಉಪವಾಸವನ್ನು ಕಡ್ಡಾಯವಾಗಿ ಅನುಸರಿಸಬೇಕು. ಈ ಮೂಲಕ ದೇಹಕ್ಕೆ ಮತ್ತು ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಬಹುದು.
ಎಂ.ಎಸ್‌. ಪ್ರಭಾಕರ್‌,
ಪ್ರಾಂಶುಪಾಲರು.

Advertisement

Udayavani is now on Telegram. Click here to join our channel and stay updated with the latest news.

Next