Advertisement

ನಟಿ ಸುಪ್ರಿಯಾ ಸರಳ ವಿವಾಹ

04:46 PM May 16, 2020 | Naveen |

ಚಿತ್ರದುರ್ಗ: “ಮಗಳು ಜಾನಕಿ’ ಧಾರಾವಾಹಿಯ ನಟಿ ಸುಪ್ರಿಯಾ ಹಾಗೂ ಸಾಫ್ಟ್‌ವೇರ್‌ ಇಂಜಿನಿಯರ್‌ ವಿಜಯ್‌ ಅವರು ಗುರುವಾರ ತಾಲೂಕಿನ ಜಾನುಕೊಂಡ ಸಮೀಪದ ಶ್ರೀಲಕ್ಷ್ಮೀ ರಂಗನಾಥಸ್ವಾಮಿ ದೇವಸ್ಥಾನ ಆವರಣದಲ್ಲಿ ಸರಳವಾಗಿ ವಿವಾಹವಾದರು.

Advertisement

ವಧು ಹಾಗೂ ವರ ಇಬ್ಬರ ಕುಟುಂಬದಿಂದ ಸುಮಾರು 20 ಜನ ಮದುವೆಗೆ ಆಗಮಿಸಿದ್ದರು. ಮದುವೆ ನಂತರ ಉಪ್ಪಿಟ್ಟು, ಕೇಸರಿಬಾತ್‌ ಸವಿದು ಅಲ್ಲಿಂದ ತೆರಳಿದರು. “ಮಗಳು ಜಾನಕಿ’ ಧಾರಾವಾಹಿಯಲ್ಲಿ ಸಂಜನಾ ಪಾತ್ರಧಾರಿಯಾಗಿ ನಟಿಸುತ್ತಿದ್ದ ಶಿವಮೊಗ್ಗ ಮೂಲದ ಸುಪ್ರಿಯಾ, ಚಿತ್ರದುರ್ಗ ಜಿಲ್ಲೆ ಬಿ.ಜಿ. ಕೆರೆಯ ಸಾಫ್ಟ್‌ ವೇರ್‌ ಇಂಜಿನಿಯರ್‌ ವಿಜಯ್‌ ಅವರನ್ನು ಬಾಳಸಂಗಾತಿಯಾಗಿ ಸ್ವೀಕರಿಸಿದರು. ಈ ವಿವಾಹಕ್ಕೆ ಎರಡೂ ಕುಟುಂಬಗಳ ಒಪ್ಪಿಗೆ ಇತ್ತು. ರಂಗನಾಥಸ್ವಾಮಿ ದೇವಸ್ಥಾನದ ಅರ್ಚಕರು ಮದುವೆಗೆ ಪೌರೋಹಿತ್ಯ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next