Advertisement

ವೈಚಾರಿಕ ಉತ್ಸವಕ್ಕೆ ಮುರುಘಾ ಮಠ ಸಜ್ಜು: ಶಿಮುಶ

04:09 PM Aug 18, 2019 | Team Udayavani |

ಚಿತ್ರದುರ್ಗ: 2019ನೇ ಸಾಲಿನ ಶರಣ ಸಂಸ್ಕೃತಿ ಉತ್ಸವವನ್ನು ಅಕ್ಟೋಬರ್‌ 2ರಿಂದ 11ರವರೆಗೆ ಆಯೋಜಿಸಲಾಗಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಮುರುಘಾ ಮಠದ ಅನುಭವ ಮಂಟಪದಲ್ಲಿ ಶನಿವಾರ ನಡೆದ ಶರಣ ಸಂಸ್ಕೃತಿ ಉತ್ಸವ-2019ರ ಪೂರ್ವಸಿದ್ಧತಾ ಸಭೆಯಲ್ಲಿ ಶರಣರು ಮಾತನಾಡಿದರು.

ಶರಣ ಸಂಸ್ಕೃತಿ ಉತ್ಸವ ವಿಚಾರಗಳ ಹಬ್ಬ. ಮಾನವೀಯತೆಯನ್ನು ಕ್ರಿಯಾಶೀಲಗೊಳಿಸುವ, ಬಸವಣ್ಣನವರ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದೆ. ಮಧ್ಯಕರ್ನಾಟಕ ಭಾಗದಲ್ಲಿ ಮಳೆ ಇಲ್ಲದೆ ಅನಾವೃಷ್ಟಿಯಾಗಿದೆ. ಆದ್ದರಿಂದ ಸರ್ಕಾರ ಈ ಭಾಗದಲ್ಲಿ ಮೋಡ ಬಿತ್ತನೆಗೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಹಾಗೂ ನೀರಾವರಿ ಯೋಜನೆಗಳ ಕುರಿತು ಉತ್ಸವದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಪ್ರತಿ ವರ್ಷ ಉತ್ಸವದಲ್ಲಿ ಕುಸ್ತಿ ಜೊತೆಗೆ ಮತ್ತೂಂದು ಕ್ರೀಡೆ ನಡೆಸುತ್ತ ಬರಲಾಗಿದೆ. ಈ ಬಾರಿ ಬಾಸ್ಕೆಟ್ಬಾಲ್ ನಡೆಸುತ್ತಿರುವುದು ಸಂತಸ ತಂದಿದೆ. ಮುಖ್ಯಮಂತ್ರಿ, ಸಚಿವರನ್ನು ಕರೆಸಿ ನಮ್ಮ ಜಿಲ್ಲೆಯ ಅಗತ್ಯತೆಗಳನ್ನು ಚರ್ಚಿಸಿ ಕಾರ್ಯಗತವಾಗುವಂತೆ ನೋಡಿಕೊಳ್ಳೋಣ ಎಂದು ಹೇಳಿದರು.

ಜಿಪಂ ಸಿಇಒ ಸತ್ಯಭಾಮ ಮಾತನಾಡಿ, ಚಿತ್ರದುರ್ಗ ಎಂದರೆ ನೆನಪಾಗುವುದೇ ಮುರುಘಾ ಮಠ. ಜಿಪಂ ಕಾರ್ಯವ್ಯಾಪ್ತಿಯಲ್ಲಿ ಉತ್ಸವಕ್ಕೆ ಹೇಗೆ ನೆರವಾಗಬಹುದೋ ಅದೆಲ್ಲವನ್ನು ನೀಡುತ್ತೇವೆ. ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆಗೆ ಹೆಚ್ಚಿನ ಗಮನಹರಿಸಲಾಗುವುದು ಎಂದರು.

Advertisement

ಶ್ರೀಮಠದ ಶಾಖಾ ಮಠದ ಚರಮೂರ್ತಿಗಳು, ವೇದಿಕೆಯಲ್ಲಿದ್ದ ಫಾದರ್‌ ರಾಜು, ಪಟೇಲ್ ಶಿವಕುಮಾರ್‌ ಉತ್ಸವಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಭಾಗವಹಿಸಿದ್ದ ಜಿತೇಂದ್ರ, ಶರಣ ಸಂಸ್ಕೃತಿ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿ ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ನೇರ ರೈಲು ಮಾರ್ಗ ಸೇರಿದಂತೆ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ, ಹೆಬ್ಟಾಳು ರುದ್ರೇಶ್ವರ ಸ್ವಾಮೀಜಿ, ಅಥಣಿಯ ಶಿವಬಸವ ಸ್ವಾಮಿಗಳು, ಸರ್‌ ಖಾಜಿ ಸೈಯ್ಯದ್‌ ಶಂಶುದ್ದೀನ್‌ ಹುಸೇನಿ, ಎಂ.ಎನ್‌. ಜಯಕುಮಾರ್‌, ದಯಾನಂದ್‌ ಕಡೂರು, ಪಟೇಲ್ ಶಿವಕುಮಾರ್‌, ತಾಪಂ ಅಧ್ಯಕ್ಷ ಲಿಂಗರಾಜು, ಎಲ್.ಬಿ. ರಾಜಶೇಖರ್‌, ಹೊಳಲ್ಕೆರೆಯ ಮುರುಘೇಶ್‌, ರಾಮಗಿರಿ ರಾಮಣ್ಣ, ಲೋಕೇಶಪ್ಪ, ಕವಾಡಿಗರಹಟ್ಟಿ ಮುರುಗೇಶ್‌, ತುಮಕೂರು ಸಿದ್ಧಗಂಗಮ್ಮ, ಬುಕ್ಕಾಂಬೂದಿ ಅಕ್ಕನಾಗಮ್ಮ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next