Advertisement
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯಿಂದ ತರಾಸು ರಂಗಮಂದಿರದಲ್ಲಿ ಗುರುವಾರ ನಡೆದ ಕವಿ ಸರ್ವಜ್ಞ ಜಯಂತಿ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
Related Articles
Advertisement
ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ ಮಾತನಾಡಿ, ಕವಿ ಸರ್ವಜ್ಞ ತತ್ವಜ್ಞಾನಿ, ದಾರ್ಶನಿಕ, ಸನ್ಯಾಸಿ, ನಿಷ್ಠುರವಾದಿ, ವಾಸ್ತವವಾದಿ, ವಿರಾಗಿಯಾಗಿದ್ದಾರೆ. ಕವಿ ಸರ್ವಜ್ಞ ಕರ್ನಾಟಕದ ಮುಕುಟ. ಸಾಹಿತ್ಯದ ಶ್ರೇಷ್ಠತೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದ ಅವರು ತ್ರಿಪದಿಗಳ ಮೂಲಕ ಪ್ರತಿಯೊಂದು ವಿಷಯದ ಕುರಿತು ಪ್ರಸ್ತಾಪಿಸಿದ್ದಾರೆ. ಈ ನೆಲದಲ್ಲಿ ಸರ್ವಜ್ಞ ಬಾಳಿ ಬದುಕಿದ್ದು ಕರ್ನಾಟಕದ ಪುಣ್ಯ. ಸಮಾಜದ ಅಂಕುಡೊಂಕು ತಿದ್ದಿ ಸಮಾಜದ ಪ್ರಗತಿಗೆ ಶ್ರಮಿಸಿದ್ದಾರೆ ಎಂದು ಬಣ್ಣಿಸಿದರು.
ಸರ್ವಜ್ಞ ಏಕಾಂಗಿಯಾಗಿದ್ದು, ಈ ದೇಶ ಸುತ್ತಿ ನಮಗೆ ಅವರ ಅನುಭವ ಹಾಗೂ ಜ್ಞಾನವನ್ನು ನಮಗೆ ನೀಡಿದ್ದಾರೆ. ಅವರ ಆದರ್ಶಗಳು ಮಹತ್ವವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರಿ ದಾರಿಯಲ್ಲಿ ನಮ್ಮ ಯೋಚನೆಗಳು ಇರಬೇಕಾದರೆ ಸರ್ವಜ್ಞರ ಕುರಿತು ಅಭ್ಯಾಸ ಮಾಡಬೇಕು ಎಂದರು.
ಕುಂಬಾರ ಗುರುಪೀಠದ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮೂರ್ತಿ ಗುರೂಜಿ, ಎಎಸ್‌ಪಿ ಎಂ.ಬಿ.ನಂದಗಾವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಕುಂಬಾರ ಸಂಘದ ಜಿಲ್ಲಾಧ್ಯಕ್ಷ ನರಸಿಂಹಪ್ಪ, ಉಪಾಧ್ಯಕ್ಷ ಈರಯ್ಯ, ಕಾರ್ಯದರ್ಶಿ
ವೈ. ಮೃತ್ಯುಂಜಯ, ಕುಂಬಾರ ಮಹಿಳಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಬೈಲಮ್ಮ, ಸಮುದಾಯದ ಮುಖಂಡರಾದ ಪಿ. ತಿಪ್ಪೇಸ್ವಾಮಿ, ಹನುಮಂತಪ್ಪ ಮೊದಲಾದವರು ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮಕ್ಕೂ ನಗರದ ಹೊಳಲ್ಕೆರೆ ರಸ್ತೆಯ ಗೌರಸಂದ್ರ ಮಾರಮ್ಮ ದೇವಸ್ಥಾನದ ಮುಂಭಾಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ತಹಶೀಲ್ದಾರ್ ವೆಂಕಟೇಶಯ್ಯ ಅವರು ಕವಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೆರರವವಣಿಗೆಗೆ ಚಾಲನೆ ನೀಡಿದರು.