Advertisement

ಜಿಲ್ಲಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ

04:59 PM Jan 27, 2020 | Team Udayavani |

ಚಿತ್ರದುರ್ಗ: ನಗರ ಹಾಗೂ ಜಿಲ್ಲಾದ್ಯಂತ 71ನೇ ಗಣರಾಜ್ಯೋತ್ಸವವನ್ನು ಭಾನುವಾರ ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ನಗರದ ವಿದ್ಯಾವಿಕಾಸ ವಿದ್ಯಾ ಸಂಸ್ಥೆಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಬಿ. ವಿಜಯಕುಮಾರ್‌, ದೇಶದ ಬಗ್ಗೆ ಒಲವು, ಅಭಿಮಾನ ಕೇವಲ ಈ ದಿನಕ್ಕೆ ಸೀಮಿತವಾಗದೆ ಪ್ರತಿ ದಿನ- ಪ್ರತಿ ಕ್ಷಣ ನಮ್ಮಲ್ಲಿರಬೇಕು ಎಂದರು.

Advertisement

ಮಹೇಶ್‌ ಪಿಯು ಕಾಲೇಜಿನ ಪ್ರಾಚಾರ್ಯ ಯಶವಂತ್‌ ಶೆಟ್ಟಿ ಮಾತನಾಡಿ, ಭಾರತ 6 ಪ್ರಧಾನ ಧರ್ಮಗಳಿಗೆ ನೆಲೆಬೀಡಾಗಿ 1600ಕ್ಕೂ ಅಧಿಕ ಭಾಷೆಗಳಿಗೆ ತವರೂರಾಗಿದೆ. ಮುಂದೊಂದು ದಿನ ಸೂರ್ಯ ಮುಳುಗದ ಸಾಮ್ರಾಜ್ಯವಾದ ಬ್ರಿಟಿಷರಿಗೆ ಸಿಂಹಸ್ವಪ್ನವಾಗುವಲ್ಲಿ ಎರಡು ಮಾತಿಲ್ಲ ಎಂಬುದನ್ನು ಮನಗಂಡು ದೇಶವನ್ನು ಇಬ್ಭಾಗ ಮಾಡಿದ ಬ್ರಿಟಿಷರು ಸ್ವಾತಂತ್ರ್ಯ ನೀಡಿ ದೇಶದಿಂದ ಹೊರ ನಡೆದರು ಎಂದು ಹೇಳಿದರು.

ಸಂಸ್ಥೆಯ ಶಿಕ್ಷಕಿ ಅನಿತಾ ರಾಜ್‌, ಗಣರಾಜ್ಯೋತ್ಸವ ಹಾಗೂ ಸಂವಿಧಾನ ರಚನೆ, ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದವರನ್ನು ಸ್ಮರಿಸಿದರು. ಕ್ಯಾಂಪಸ್‌ ಮುಖ್ಯಸ್ಥ ಎಸ್‌. ಎಂ. ಪೃಥ್ವೀಶ್‌, ಮುಖ್ಯ ಶಿಕ್ಷಕ ಸಂಪತ್‌ ಕುಮಾರ್‌, ಸಂಯೋಜಕ ಪಿ. ಬಸವರಾಜಯ್ಯ ಮತ್ತಿತರರು ಉಪಸ್ಥಿತರಿದ್ದರು.

ಡಯಟ್‌: ರಾಷ್ಟ್ರ ಧರ್ಮ ಪಾಲನೆ ಮಾಡುವುದರಿಂದ ಸುಖೀ ಸಮಾಜ ನಿರ್ಮಾಣ ಸಾಧ್ಯ ಎಂದು ಡಯಟ್‌ ಪ್ರಭಾರಿ ಪ್ರಾಚಾರ್ಯ ಎಚ್‌. ಗಂಗಯ್ಯ ಹೇಳಿದರು. ಡಯಟ್‌ನಲ್ಲಿ ಆಯೋಜಿಸಿದ್ದ 71ನೇ ಗಣರಾಜ್ಯೋತ್ಸವದಲ್ಲಿ ಗಾಂಧಿಧೀಜಿ ಮತ್ತು ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಭಾರತ ಅನೇಕ ಸಂಸ್ಥಾನಗಳು ಒಗ್ಗೂಡಿರುವ ಏಕೀಕೃತ ರಾಷ್ಟ್ರವಾಗಿದೆ. ಬೃಹತ್‌ ಸಂವಿಧಾನ ಹೊಂದಿದ್ದು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ ಶಾಂತಿಯುತ ರಾಷ್ಟ್ರವಾಗಿದೆ ಎಂದರು. ಹಿರಿಯ ಉಪನ್ಯಾಸಕರಾದ ಡಿ. ಕೃಷ್ಣಮೂರ್ತಿ, ಪಿ. ರಾಜಣ್ಣ, ದೈಹಿಕ ಶಿಕ್ಷಕಿ ಶೋಭಾರಾಣಿ, ಉಪನ್ಯಾಸಕರು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

ಸಿಪಿಐ ಕಚೇರಿ : ¬ನಗರದ ದಾವಣಗೆರೆ ರಸ್ತೆಯಲ್ಲಿರುವ ಸಿಪಿಐ ಕಚೇರಿ ಆವರಣದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ಸುರೇಶ್‌ಬಾಬು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಅಂಬೇಡ್ಕರ್‌ ಸಂವಿಧಾನ ರಚಿಸುವ ಮೂಲಕ ದೇಶದ ಪ್ರತಿಯೊಬ್ಬರಿಗೆ ಸಮಾನತೆ ಮತ್ತು ಹಕ್ಕು ನೀಡಿದ್ದಾರೆ. ಹಾಗಾಗಿ ಎಲ್ಲರೂ ಸಂವಿಧಾನವನ್ನು ಗೌರವಿಸಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಹಿರಿಯರನ್ನು ಗೌರವಿಸಬೇಕು ಎಂದರು.

Advertisement

ತಾಲೂಕು ಕಾರ್ಯದರ್ಶಿ ಟಿ.ಆರ್‌. ಉಮಾಪತಿ, ಸಹ ಕಾರ್ಯದರ್ಶಿ ಸತೀಶ್‌, ಎಪಿಎಂಸಿ ಹಮಾಲರ ಸಂಘದ ಉಪಾಧ್ಯಕ್ಷ ಚಂದ್ರಪ್ಪ, ಡಿ.ಸಿ. ಹಾಲಸ್ವಾಮಿ, ತಿರುಮಲೇಶ್‌ ಜಾಧವ್‌, ಕಾರ್ಮಿಕ ಮುಖಂಡರಾದ ತಿಪ್ಪೇಸ್ವಾಮಿ, ಜಾಕಿರ್‌ ಇದ್ದರು.

ಜಿಲ್ಲಾ ವಕ್ಫ್ ಬೋರ್ಡ್‌: ಜಿಲ್ಲಾ ವಕ್ಫ್ ಬೋರ್ಡ್‌ ನೂತನ ಅಧ್ಯಕ್ಷ ಅಸ್ಲಂ ಪಾಷಾ, ವಕ್ಫ್  ಮಂಡಳಿಯಲ್ಲಿ ಧ್ವಜಾರೋಹಣ ಮಾಡಿದರು. ಇದೇ ವೇಳೆ ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಮಾತನಾಡಿದ ಅವರು, ಹಲವು ಹಿರಿಯರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅದೇ ರೀತಿ ಅಂಬೇಡ್ಕರ್‌ ಹಲವು ದೇಶಗಳ ಸಂವಿಧಾನ ಅಧ್ಯಯನ ಮಾಡಿ ಭಾರತಕ್ಕೆ ಅತ್ಯುತ್ತಮ ಸಂವಿಧಾನ ಕೊಟ್ಟಿದ್ದಾರೆ. ಎಲ್ಲರನ್ನೂ ಸ್ಮರಿಸುವುದು ನಮ್ಮ ಕರ್ತವ್ಯ ಎಂದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ. ತಾಜ್‌ಪೀರ್‌ ಹಾಗೂ ವಕ್ಫ್ ಮಂಡಳಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಾರ್ತಾ ಇಲಾಖೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು. ಜಿಲ್ಲಾಧಿ ಕಾರಿ ಕಚೇರಿ ಹಿಂಭಾಗದ ವಾರ್ತಾ ಇಲಾಖೆಯಲ್ಲಿ ವಾರ್ತಾಧಿಕಾರಿ ಬಿ. ಧನಂಜಯ ಧ್ವಜರೋಹಣ ನೆರವೇರಿಸಿದರು. ಸಹಾಯಕ ವಾರ್ತಾಧಿಕಾರಿ ಬಿ.ವಿ. ತುಕಾರಾಂ ರಾವ್‌, ಸಿನಿ ಚಾಲಕ ತಿಪ್ಪಯ್ಯ, ತುಮಕೂರು ಸಹಾಯಕ ವಾರ್ತಾ ಧಿಕಾರಿ ಕೃಷ್ಣನಾಯ್ಕ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next