ದಿನ ದಿಂದಲೂ ಉತ್ತಮ ಲಾಭದ ಕನಸು ಕಾಣುತ್ತಿದ್ದ ರೈತರಿಗೆ ಕೋವಿಡ್ ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿಸಿತು. ಇದರಿಂದ ಕಂಗೆಟ್ಟಿದ್ದ ಆನಂದ್ ಹಾಗೂ ಕಾಂತರಾಜು ಪತ್ರಿಕೆಯನ್ನು ಸಂಪರ್ಕಿಸಿ ತಮ್ಮ ಬೆಳೆ ವಿವರಗಳನ್ನು ನೀಡಿದ್ದರು.
Advertisement
ಪತ್ರಿಕೆಯಲ್ಲಿ ರೈತರ ಊರು, ಬೆಳೆದಿರುವ ಬೆಳೆಯ ಹೆಸರು, ಅದರ ಪ್ರಮಾಣ ಹಾಗೂ ರೈತ ಅದಕ್ಕೆ ನಿಗ ದಿ ಮಾಡಿರುವ ಬೆಲೆ ಅವರ ಮೊಬೈಲ್ ಸಂಖ್ಯೆಯನ್ನು ರೈತಸೇತು ಅಂಕಣದಲ್ಲಿ ಪ್ರಕಟಿಸಿತ್ತು. ಈ ವಿಷಯವನ್ನು ಗಮನಿಸಿದ ಬೆಂಗಳೂರು ಮೂಲದ ಶರತ್ ಎಂಬುವವರು ಪ್ರತಿ ವಾರ ಮೂರು ಟನ್‌ನಂತೆ ಇಬ್ಬರೂ ರೈತರಿಂದ ಸಿಹಿ ಕುಂಬಳ ಖರೀದಿ ಮಾಡಿ ತಮ್ಮ ಹಂದಿ ಫಾರಂಗೆ ಬಳಕೆ ಮಾಡಿಕೊಳ್ಳಲು ಮುಂದೆ ಬಂದಿದ್ದಾರೆ. ಹೊಸದುರ್ಗ ತಾಲೂಕಿನ ಮಲ್ಲಪ್ಪನಹಳ್ಳಿ ರೈತರು ಪ್ರತಿ ವರ್ಷವೂ ಸಿಹಿಕುಂಬಳ ಬೆಳೆಯುತ್ತಾರೆ. ಎಕರೆಗೆ 25 ರಿಂದ 30 ಸಾವಿರ ಖರ್ಚು ಬರುತ್ತದೆ. ಇದರಿಂದ ಒಂದು ಲಕ್ಷದವರೆಗೆ ಲಾಭ ಸಿಗುತ್ತದೆ. ಪ್ರತಿ ಎಕರೆಗೆ 6 ರಿಂದ 7 ಟನ್ ಇಳುವರಿ ಬಂದರೆ ಪ್ರತಿ ಕೆಜಿಗೆ 15 ರೂ.ವರೆಗೆ ಬೆಲೆ ಇರುತ್ತದೆ. ಮಲ್ಲಪ್ಪನಹಳ್ಳಿ ರೈತ ಆನಂದ್ ಮೂರು ಎಕರೆಯಲ್ಲಿ ಬೆಳೆ ಬೆಳೆದಿದ್ದಾರೆ. ಕಾಂತರಾಜು ಎರಡು ಎಕರೆಯಲ್ಲಿ ಬೆಳೆದಿದ್ದಾರೆ. ಸದ್ಯ 6 ರೂ.ನಂತೆ ಪ್ರತಿ ಕೆಜಿ ಸಿಹಿ ಕುಂಬಳ ಖರೀದಿಯಾಗುತ್ತಿದೆ.
ಬಾರದಿದ್ದರೂ ಪರವಾಗಿಲ್ಲ, ನಷ್ಟವಾಗದಂತೆ ಕಾಪಾಡಿದೆ. ರೈತರು ಮಾರಾಟಗಾರರ ನಡುವಿನ ಸೇತುವೆಯಾದ ಪತ್ರಿಕೆಗೆ ಆಭಾರಿ.
ಎಂ.ಕೆ. ಕಾಂತರಾಜು,
ಮಲ್ಲಪ್ಪನಹಳ್ಳಿ ರೈತ