Advertisement

ಮನೆ ಮದ್ದಿನಿಂದ ರೋಗ ನಿರೋಧಕ ಶಕ್ತಿ

11:19 AM Apr 18, 2020 | Naveen |

ಚಿತ್ರದುರ್ಗ: ಮನೆ ಮದ್ದು ಬಳಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಿಂದ ವೈರಾಣುಗಳು ದೇಹ ಸೇರಿ ಅನಾರೋಗ್ಯ ಮಾಡುವುದನ್ನು ತಪ್ಪಿಸಬಹುದು ಎಂದು ಜಿಲ್ಲಾ ಆಯುಷ್‌ ವೈದ್ಯಾಧಿಕಾರಿ ಡಾ| ಕೆ.ಎಲ್‌. ವಿಶ್ವನಾಥ್‌ ಹೇಳಿದರು.

Advertisement

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಆಯುಷ್‌ ಇಲಾಖೆ ವತಿಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಸಲು ಮನೆಮದ್ದು ಕುರಿತು ವಾರ್ತಾ ಭವನದಲ್ಲಿ ನಡೆದ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈಗ ಜನರಲ್ಲಿ ಕೋವಿಡ್‌-19 ವೈರಸ್‌ ಆತಂಕ ಮನೆ ಮಾಡಿದೆ. ಈ ಸೋಂಕಿಗೆ ಲಸಿಕೆ ಲಭ್ಯವಿಲ್ಲ. ಆದರೆ ಕೆಲವರು ಆಯುರ್ವೇದಿಕ್‌ ಹೆಸರಿನಲ್ಲಿ ನಾನಾ ತರಹದ ಔಷಧ, ಗಿಡಮೂಲಿಕೆಗಳಿಂದ ವಾಸಿ ಮಾಡಬಹುದು ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ನಾಗರಿಕರು ಕಿವಿಗೊಡಬಾರದು ಎಂದರು.

ಪೌಷ್ಟಿಕಾಂಶ, ನಾರಿನಾಂಶ, ವಿಟಮಿನ್‌-ಸಿ ಯುಕ್ತ ಆಹಾರ ಪದಾರ್ಥಗಳನ್ನು ಹೆಚ್ಚು ಬಳಸಬೇಕು. ತುಳಸಿ, ದಾಲಿcನ್ನಿ, ಮೆಣಸು, ಅರಿಶಿನ, ಕರಿಬೇವು, ಶುಂಠಿಯನ್ನು ಆಹಾರದಲ್ಲಿ ಹೆಚ್ಚು ಉಪಯೋಗಿಸಬೇಕು. ಪಾಲಕ್‌, ನುಗ್ಗೆ, ನೆಲ್ಲಿಕಾಯಿ, ಹಣ್ಣುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ವಾರ್ತಾಧಿಕಾರಿ ಬಿ. ಧನಂಜಯಪ್ಪ ಮಾತನಾಡಿ, ಮನೆ ಮದ್ದು ಒಂದು ಸರಳ ಔಷಧ . ಮನೆ ಮದ್ದನ್ನು ನಿತ್ಯ ಆಹಾರದಲ್ಲಿ ಬಳಸಿ ಉತ್ತಮವಾಗಿ ಆರೋಗ್ಯ ಕಾಪಾಡಿಕೊಳ್ಳಬಹುದು. ಕೋವಿಡ್‌-19 ನಿಯಂತ್ರಣಕ್ಕಾಗಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.

ಹಿರಿಯೂರು ಸರ್ಕಾರಿ ಆಯುರ್ವೇದಿಕ್‌ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಶಿವಕುಮಾರ್‌ ಮಾತನಾಡಿ, ಬಯಲುಸೀಮೆ ಚಿತ್ರದುರ್ಗದಲ್ಲಿ
ದೊರೆಯುವ ಔಷ ಧೀಯ ಸಸ್ಯಗಳು ಹೆಚ್ಚು ಶಕ್ತಿಶಾಲಿಯಾಗಿರುತ್ತವೆ. ಅವುಗಳ ಬಳಕೆಯಿಂದ ಬಹಳಷ್ಟು ರೋಗಗಳನ್ನು ನಿವಾರಿಸಲು ಸಾಧ್ಯವಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next