ಚಿತ್ರದುರ್ಗ: ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರುಬುಧವಾರ ಜಿಲ್ಲಾ ಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿಮನವಿ ಸಲ್ಲಿಸಿದರು.
ಅತಿಥಿ ಉಪನ್ಯಾಸಕರ ಬೇಡಿಕೆಗಳು ಈಡೇರುವವರೆಗೆತರಗತಿಗಳನ್ನು ಬಹಿಷ್ಕರಿಸಿ ಕಾಲೇಜು ಮುಂಭಾಗದಲ್ಲಿಪ್ರತಿಭಟಿಸಲಾಗುವುದು ಎಂದು ಅತಿಥಿ ಉಪನ್ಯಾಸಕರು ತಿಳಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆ ಕುರಿತುಬೆಳಗಾವಿಯಲ್ಲಿ ನಡೆಯುತ್ತಿರುವ ಅ ಧಿವೇಶನದಲ್ಲಿವಿಷಯ ಪ್ರಸ್ತಾಪವಾಗಿದೆ. ಆದರೆ, ಸರ್ಕಾರ ಯಾವುದೇಸ್ಪಷ್ಟ ತೀರ್ಮಾನಕ್ಕೆ ಬಾರದೇ ಅತಂತ್ರ ಸ್ಥಿತಿಯಲ್ಲಿಟ್ಟಿದೆ. ಈನಿಟ್ಟಿನಲ್ಲಿ ಡಿ.10 ರಿಂದ ನಡೆಯುತ್ತಿರುವ ನಮ್ಮ ಪ್ರತಿಭಟನೆಮುಂದುವರೆಯಲಿದೆ ಎಂದು ತಿಳಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿಸಮಿತಿ ರಚಿಸಿ ಒಂದು ತಿಂಗಳೊಳಗೆ ವರದಿ ಪಡೆದ ನಂತರಕ್ರಮಕೈಗೊಳ್ಳುವುದಾಗಿ ಅಧಿ ವೇಶನದಲ್ಲಿ ತಿಳಿಸಲಾಗಿದೆ.ಆದರೆ ನಮ್ಮ ಸಂಘಟನೆಯು ಸ್ಪಷ್ಟ ಸಂದೇಶ ಬರುವವರೆಗೂಪ್ರತಿಭಟನೆ ಮುಂದುವರೆಸಲಿದೆ.
ನಮ್ಮ ಬೇಡಿಕೆಗಳನ್ನುಸರ್ಕಾರ ಅದಷ್ಟು ಬೇಗ ಪರಿಹರಿಬೇಕು ಎಂದುಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದಡಾ|ಬಿ.ಪಾಪಣ್ಣ, ವಿ.ಪಾರ್ವತಿ, ಎಸ್.ರಮ್ಯ, ಡಿ.ಎ.ಲತಾ,ಉಷಾ, ತಿಪ್ಪೇಸ್ವಾಮಿ, ರಾಜೇಶ್, ಮೋಟೇಶ್, ಅಭಿಷೇಕ್,ಪ್ರಶಾಂತ್ ಮತ್ತಿತರರಿದ್ದರು.