ಚಿತ್ರದುರ್ಗ: ಕೊನೆಯ ಉಸಿರಿರುವ ತನಕ ರೈತರಿಗಾಗಿಹೋರಾಟ ಮಾಡಿದ ಎನ್.ಡಿ. ಸುಂದರೇಶ್ ಹೆಸರಿನಲ್ಲಿಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಪೀಠರಚಿಸಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷಬಡಗಲಪುರ ನಾಗೇಂದ್ರ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದಿಂದ ನಗರದ ಎಪಿಎಂಸಿ ರೈತ ಭವನದಲ್ಲಿ ಮಂಗಳವಾರಹಮ್ಮಿಕೊಂಡಿದ್ದ ರೈತ ನಾಯಕ ಎನ್.ಡಿ. ಸುಂದರೇಶ್‌ಒಂದು ನೆನಪು ಹಾಗೂ ವಿಚಾರಗೋಷ್ಟಿ ಉದ್ಘಾಟಿಸಿಅವರು ಮಾತನಾಡಿದರು. ಎನ್.ಡಿ. ಸುಂದರೇಶ್‌ಉತ್ತಮ ವಿದ್ಯಾಭ್ಯಾಸ ಮಾಡಿದ್ದರು.
ಕುವೆಂಪು ಅವರಸಂಬಂಧಿ ಯೂ ಆಗಿದ್ದರು. ಸಮಾಜವಾದಿ ನಾಯಕರಒಡನಾಟದಲ್ಲಿ ಬೆಳೆದವರು. ರಾಜಕಾರಣಿ, ಸರ್ಕಾರಿನೌಕರ ಆಗುವ ಎಲ್ಲಾ ಅರ್ಹತೆಗಳಿದ್ದರೂ ಅವರುಆಯ್ಕೆ ಮಾಡಿಕೊಂಡಿದ್ದು ಕೃಷಿ ಬದುಕು ಎಂದುಸ್ಮರಿಸಿದರು.ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳುಹಿಂದೆ ಸಮಾಜವಾದಿ ನೆಲೆಗಳಾಗಿದ್ದವು. ಆದರೆ ಈಗಕೋಮುವಾದಿಗಳ ನೆಲವಾಗಿವೆ. ಇಂದು ದೇಶ,ಸಮಾಜಕ್ಕಾಗಿ ದುಡಿದವರನ್ನು ಮರೆಯುತ್ತಿದ್ದೇವೆ.ನಿಜವಾದ ದೇಶಪ್ರೇಮಿಗಳನ್ನು ಮರೆಮಾಚಿ ಇತಿಹಾಸತಿರುಚುವ ಕಾಲಘಟ್ಟದಲ್ಲಿದ್ದೇವೆ.
ಅಂಬೇಡ್ಕರ್‌ಸ್ಮಾರಕಕ್ಕೆ ಜಾಗ ಕೊಟ್ಟು, ಅವರು ಲಂಡನ್‌ನಲ್ಲಿವಾಸಿಸುತ್ತಿದ್ದ ಮನೆಯನ್ನು ಮ್ಯೂಸಿಯಂ ಮಾಡಿಅಂಬೇಡ್ಕರ್ ವಾದ ಒಪ್ಪಿದ್ದೇವೆ ಎಂದು ದಲಿತರದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು.ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಮಾತನಾಡಿ, ಸ್ವಾಮಿನಾಥನ್‌ಆಯೋಗದ ವರದಿ ಜಾರಿ ಮಾಡುತ್ತೇವೆ ಎಂದುಅ ಧಿಕಾರಕ್ಕೆ ಬಂದ ನರೇಂದ್ರ ಮೋದಿ, ಜಾರಿ ಮಾಡಲುಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ನಲ್ಲಿಅμಡವಿಟ್ ಸಲ್ಲಿಸಿದ್ದಾರೆ.
ರೈತ ದ್ರೋಹಿ ಪ್ರಧಾನಿನರೇಂದ್ರ ಮೋದಿಯನ್ನು ಎಂದೂ ಕ್ಷಮಿಸಬಾರದುಎಂದು ಗುಡುಗಿದರು.ಸ್ವಾಮಿನಾಥನ್ ಆಯೋಗದ ವರದಿಯಲ್ಲಿ ರೈತರುಬೆಳೆ ಬೆಳೆಯಲು ಈವರೆಗೆ ಹೂಡಿರುವ 6 ಲಕ್ಷ ಕೋಟಿರೂ. ಬಂಡವಾಳ ಮನ್ನಾ ಆಗಬೇಕು. ಸಾಲ ಮನ್ನಾಅಲ್ಲ. ರೈತರು ಬೀಜ, ಗೊಬ್ಬರ, ಬಿತ್ತನೆ ವೆಚ್ಚ, ಮನೆಮಂದಿಯೆಲ್ಲಾ ಮಾಡಿದ ಶ್ರಮ, ಕೃಷಿ ಭೂಮಿಗೆಬಾಡಿಗೆ ನಿಗದಿ ಮಾಡಿ ಎಲ್ಲವನ್ನೂ ಲೆಕ್ಕಾ ಹಾಕಿ ಇದಕ್ಕೆಶೇ. 50ರಷ್ಟನ್ನು ಸೇರಿಸಿ ಉತ್ಪನ್ನಗಳಿಗೆ ಮಾರುಕಟ್ಟೆ ಬೆಲೆನಿಗ ದಿ ಮಾಡಬೇಕು ಎಂದು ಉಲ್ಲೇಖೀಸಿದೆ.
ಆದರೆಸರ್ಕಾರ ಜಾತಿ, ಧರ್ಮ, ದೇವರ ಹೆಸರಿನಲ್ಲಿ ನಮ್ಮನ್ನುಒಡೆದು ಆಳುತ್ತಿದೆ ಎಂದು ದೂರಿದರು.ಮಾಜಿ ಶಾಸಕ, ಜೆಡಿಯು ರಾಜ್ಯಾಧ್ಯಕ್ಷ ಮಹಿಮಾಪಟೇಲ್ ಮಾತನಾಡಿ, ರೈತ ಪರವಾಗಿರುವ, ಕೃಷಿಬದುಕಿನಲ್ಲಿರುವ ಸರಳ ರಾಜಕಾರಣಿಗಳನ್ನು ರೈತಸಂಘಟನೆಗಳು ಒಂದೆಡೆ ಸೇರಿಸಬೇಕಾಗಿದೆ. ಇಂದುಜೀವನಕ್ಕಾಗಿ ಕೃಷಿ ಮಾಡುವ ಬದಲು ಹಣಕ್ಕಾಗಿಕೃಷಿ ಮಾಡುತ್ತಿದ್ದೇವೆ.
ಎಲ್ಲದಕ್ಕೂ ಹಣದ ಹಿಂದೆಹೋಗಬಾರದು ಎಂದರು.ರೈಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನಕಾರ್ಯದರ್ಶಿ ನುಲೇನೂರು ಶಂಕ್ರಪ್ಪ, ಹಿರಿಯಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಮುಖಂಡರಾದಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಎ. ಗೋವಿಂದರಾಜು,ಬಲ್ಲೂರು ರವಿಕುಮಾರ್, ಅರುಣ್‌ಕುಮಾರ್‌ಕುರುಡಿ, ಮಂಜುನಾಥ ಗೌಡ, ಶಿವಾನಂದ ಕುಗ್ವೆ,ಗೋಣಿ ಬಸಪ್ಪ, ಹಾವೇರಿ ಸ್ವಾಮಿ, ಕೆ. ಮಲ್ಲಯ್ಯ,ಎನ್.ಡಿ. ವಸಂತಕುಮಾರ್, ಚಿಂತಕ ಶಿವಸುಂದರ್,ನಾಗರತ್ನಮ್ಮ ಪಾಟೀಲ್, ಮಂಜುಳ ಅಕ್ಕಿ, ವನಶ್ರೀ,ಆರ್. ಲಕ್ಷ್ಮೀ ವೇದಿಕೆಯಲ್ಲಿದ್ದರು.