Advertisement

ಬೆಳೆ ಸಮೀಕ್ಷೆ APP ಬಳಕೆಗೆ ರೈತರ ನಿರಾಸಕ್ತಿ

04:28 PM Sep 20, 2021 | Team Udayavani |

ಚಿತ್ರದುರ್ಗ: ಕೃಷಿ ಇಲಾಖೆಯನ್ನು ತಾಂತ್ರಿಕತೆಯಕಡೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರ ರೈತತನ್ನ ಜಮೀನಿನಲ್ಲಿ ಬೆಳೆದ ಬೆಳೆಯನ್ನು ತಾನೇಸಮೀಕ್ಷೆ ನಡೆಸಿ ಇಲಾಖೆ ನಿಗ ದಿ ಮಾಡಿರುವಆ್ಯಪ್‌ಗೆ ಅಪ್ಲೋಡ್‌ ಮಾಡುವ ಹೊಸತನರೂಪಿಸಿದೆ. ಆದರೆ, ಈ ತಂತ್ರಜ್ಞಾನ ಅನುಷ್ಠಾನಕ್ಕೆಬಂದು ಎರಡು ವರ್ಷಗಳಾದರೂ ರೈತರಲ್ಲಿ ಈಬಗ್ಗೆ ನಿರಾಸಕ್ತಿ ಎದ್ದು ಕಾಣಿಸುತ್ತಿದೆ.

Advertisement

ಇದಕ್ಕೆ ಸರ್ಕಾರರೂಪಿಸಿರುವ ಮೊಬೈಲ್‌ ಆ್ಯಪ್‌ನಲ್ಲಿರುವ ಕೆಲಸಮಸ್ಯೆಗಳೂ ಕಾರಣವಾಗಿವೆ.ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಜಮೀನಿನಲ್ಲಿರುವಪ್ರಮುಖ ಬೆಳೆ ನಮೂದಿಸಿದ ನಂತರ, ಅಲ್ಲಿರುವಮಿಶ್ರ ಬೆಳೆಗಳನ್ನು ದಾಖಲಿಸಲು ಆಯ್ಕೆಯೇಇಲ್ಲವಾಗಿದೆ. ಉದಾಹರಣೆಗೆ 2 ಎಕರೆಪ್ರದೇಶದಲ್ಲಿ ಅಡಕೆ ನಾಟಿ ಮಾಡಿದ್ದು, ಮಧ್ಯದಲ್ಲಿಮಿಶ್ರ ಬೆಳೆಯಾಗಿ ಬಾಳೆ ಅಥವಾ ಪಪ್ಪಾಯಿನಾಟಿ ಮಾಡಿದ್ದರೆ, ಇಲ್ಲಿ 2 ಎಕರೆ ಅಡಕೆ ಮಾತ್ರದಾಖಲಾಗುತ್ತದೆ.

ಒಂದು ವೇಳೆ ಅಡಕೆ-ಬಾಳೆಎರಡನ್ನೂ ನಮೂದಿಸುವುದಾದರೆ ತಲಾಒಂದೊಂದು ಎಕರೆ ಎಂದು ದಾಖಲಿಸಬೇಕಿದೆ.ಅಪೂರ್ಣವಾಗಿರುವ ಆ್ಯಪ್‌ ಕಾರಣಕ್ಕೆಬೆಳೆ ಸಮೀಕ್ಷೆಗೆ ಮುಂದಾಗುವ ರೈತರು ಎಲ್ಲಬೆಳೆಗಳನ್ನು ನಮೂದಿಸಲಾಗದೆ ಅರ್ಧಕ್ಕೆ ನಿಲ್ಲಿಸಿಮನೆಗೆ ಮರಳುವಂತಾಗಿದೆ. ಇದರೊಟ್ಟಿಗೆಪೋಟೋ ಅಪ್‌ಲೋಡ್‌ ಆಗಲು ಸಾಕಷ್ಟುಸಮಯ ಹಿಡಿಯುವುದು ತಾಳ್ಮೆ ಪರೀಕ್ಷೆಮಾಡುತ್ತದೆ.ಶೇ.9.8ರಷ್ಟು ರೈತರಿಂದ ಸ್ವಯಂ ಸಮೀಕ್ಷೆ:ಚಿತ್ರದುರ್ಗ ಜಿಲ್ಲೆಯಲ್ಲಿ ಈ ವರ್ಷ ಬೆಳೆ ಸಮೀಕ್ಷೆಗೆ 6.2 ಲಕ್ಷ ತಾಕು (ಜಮೀನು)ಗಳಿದ್ದು, ಈವರೆಗೆ3.1 ಲಕ್ಷ ತಾಕುಗಳ ಅಂದರೆ ಶೇ.50ರಷ್ಟು ಸಮೀಕ್ಷೆಮುಗಿದು ಹೋಗಿದೆ.

ಆದರೆ, ಈ ಶೇ.50ರಲ್ಲಿಖುದ್ದು ರೈತರೇ ಬೆಳೆ ಸಮೀಕ್ಷೆ ಮಾಡಿರುವುದುಕೇವಲ 59 ಸಾವಿರ ತಾಕುಗಳು. ಒಟ್ಟಾರೆತಾಕುಗಳ ಪೈಕಿ ರೈತರೇ ಸಮೀಕ್ಷೆ ನಡೆಸಿರುವತಾಕುಗಳು ಶೇ.9.8ರಷ್ಟು ಮಾತ್ರ ಎನ್ನುವುದುಸೋಜಿಗದ ಸಂಗತಿಯಾಗಿದೆ.ರೈತರೇ ಬೆಳೆ ಸಮೀಕ್ಷೆ ಮಾಡಿಕೊಳ್ಳಲುಆಗದಿದ್ದರೆ ಅವರಿಗೆ ಪರಿಚಯದ ಮತ್ತೂಬ್ಬರೈತ ಅಥವಾ ಸಂಬಂ ಧಿಕರ ಮೊಬೈಲ್‌ನಿಂದಲೂಸಮೀಕ್ಷೆ ಮಾಡಿಸಬಹುದು. ಇದೂ ಆಗದಿದ್ದರೆಕೃಷಿ ಇಲಾಖೆ ಪ್ರತಿ ಹಳ್ಳಿಗಳಲ್ಲಿ ನಿಯೋಜಿಸಿರುವಖಾಸಗಿ ನಿವಾಸಿಗಳಿಂದ ಸಮೀಕ್ಷೆ ಮಾಡಿಸಲಿದೆ.

ತಿಪ್ಪೇಸ್ವಾಮಿ ನಾಕೀಕೆರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next