ಚಳ್ಳಕೆರೆ: ತಾಲೂಕಿನ ತಳಕು ಹೋಬಳಿಯಲಂಬಾಣಿಹಟ್ಟಿಯ ರೈತ ಶಿವಕುಮಾರ್ ತಮ್ಮ ನಾಲ್ಕುಎಕರೆ ಜಮೀನಲ್ಲಿ ಶೇಂಗಾ ಮತ್ತು ಈರುಳ್ಳಿ ಬೆಳೆಯ ಜೊತೆಗೆ ತೊಗರಿಯನ್ನು ಸಹ ಬಿತ್ತಿದ್ದು, ತೊಗರಿಯೂ ಸಹ ಸಂಪೂರ್ಣವಾಗಿ ನಾಶವಾಗುತ್ತಿದೆ. ಈ ಬಗ್ಗೆಪತ್ರಿಕಾ ವರದಿ ಹಿನ್ನೆಲೆಯಲ್ಲಿ ಕೃಷಿ, ತೋಟಗಾರಿಕೆಇಲಾಖೆ ಅ ಧಿಕಾರಿಗಳು ಶುಕ್ರವಾರ ರೈತನ ಜಮೀನಿಗೆಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಹಾಯಕ ಕೃಷಿ ನಿದೇಶಕ ಅಶೋಕ್ ಪರಿಶೀಲನೆನಡೆಸಿದ ನಂತರ ಮಾತನಾಡಿ, ಬೆಳೆ ಬಿತ್ತುವ ಸಮಯಮತ್ತು ಅದರ ಬೆಳವಣಿಗೆಯ ಬಗ್ಗೆ ಇಲಾಖೆಗೆ ಮಾಹಿತಿನೀಡಿಲ್ಲ. ಆದರೂ ಸಹ ಒಟ್ಟಾರೆ ಬೆಳೆ ನಷ್ಟಕ್ಕೆ ಬೆಳೆ ಆ್ಯಪ್‌ನಲ್ಲಿ ನಮೂದಿಸಿದ್ದರೆ ಮಾತ್ರ ಪರಿಹಾರ ದೊರಕಿಸಿಕೊಡಲು ಸಾಧ್ಯ. ಪ್ರಸ್ತುತ ತೊಗರಿಬೆಳೆಯ ವೈಫಲ್ಯದ ಬಗ್ಗೆಯೂ ಸಹ ಬೆಳೆಆ್ಯಪನಲ್ಲಿ ನೋಂದಾಯಿಸಬೇಕಿತ್ತು.
ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆಚರ್ಚಿಸುವುದಾಗಿ ಭರವಸೆ ನೀಡಿದರು.ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕನಿರ್ದೇಶಕ ವಿರೂಪಾಕ್ಷಪ್ಪ ಮಾಹಿತಿ ನೀಡಿ, ತಾಲೂಕಿನಾದ್ಯಂತ ತೋಟಗಾರಿಕೆ ಇಲಾಖೆಗೆ ಸಂಬಂಧಪಟ್ಟಬೆಳೆಗಳು ನಷ್ಟವಾದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ.
]ಮಳೆಯಿಂದ ಕೊಚ್ಚಿಹೋದ ಬೆಳೆಯಬಗ್ಗೆಯೂ ವರದಿ ಸಲ್ಲಿಸಿದ್ದು ಸರ್ಕಾರದಿಂದ ಯಾವರೀತಿ ಪರಿಹಾರ ದೊರೆಯುತ್ತದೆ ಎಂಬ ಬಗ್ಗೆ ಕಾದುನೋಡಬೇಕಿದೆ ಎಂದರು. ರೈತ ಶಿವಕುಮಾರ್‌ಮಾತನಾಡಿ, ಜಮೀನಲ್ಲಿದ್ದ ಮೂರು ಬೆಳೆಗಳು ಸಹನಾಶವಾಗಿವೆ. ಕಳೆದ ಎರಡು ವರ್ಷಗಳಿಂದ ಇದೇಪರಿಸ್ಥಿತಿ ಮುಂದುವರೆದಿದೆ.
ನಿರಂತರ ಬೆಳೆ ನಷ್ಟಹಿನ್ನೆಲೆಯಲ್ಲಿ ನನ್ನ ಬದುಕು ಅತಂತ್ರವಾಗಿದೆ.ಕೂಡಲೇ ಹೆಚ್ಚಿನ ಪರಿಹಾರವನ್ನುದೊರಕಿಸಿಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಸಹಾಯ ನೀಡಬೇಕೆಂದುಮನವಿ ಮಾಡಿದರು. ತಳಕು ಕೃಷಿಅ ಧಿಕಾರಿ ಹೇಮಂತಕುಮಾರ್‌ಉಪಸ್ಥಿತರಿದ್ದರು.