Advertisement

ಹೆಲಿಕಾಪ್ಟರ್‌ ದುರಂತದಲ್ಲಿ ಮಡಿದ ಸೈನಿಕರಿಗೆ ಶ್ರದ್ದಾಂಜಲಿ

07:36 PM Dec 11, 2021 | Team Udayavani |

ಚಿತ್ರದುರ್ಗ: ಹೆಲಿಕಾಪ್ಟರ್‌ ದುರಂತದಲ್ಲಿಮೃತಪಟ್ಟ ಭಾರತದ ಮೂರು ಸೇನಾಪಡೆಗಳ ಮುಖ್ಯಸ್ಥರಾಗಿದ್ದ ಜನರಲ್‌ಬಿಪಿನ್‌ ರಾವತ್‌ ಹಾಗೂ ಸೇನಾ ಅ ಧಿಕಾರಿಗಳಿಗೆ ನಗರದ ವೀರಯೋಧಚೈತನ್ಯ ವೃತ್ತದಲ್ಲಿ ಶ್ರದ್ಧಾಂಜಲಿಸಲ್ಲಿಸಲಾಯಿತು.

Advertisement

ನ್ಯಾಯವಾದಿ ಪ್ರತಾಪ್‌ ಜೋಗಿಮಾತನಾಡಿ ಭೂಸೇನೆ, ನೌಕಾಪಡೆ,ವಾಯುಪಡೆಯ ಮುಖ್ಯಸ್ಥರಾಗಿದ್ದ ಜನರಲ್‌ ಬಿಪಿನ್‌ ರಾವತ್‌ ನಿಧನಇಡೀ ವಿಶ್ವಕ್ಕೆ ಅಘಾತ ತಂದಿದೆ. ಈದುರಂತವನ್ನು ವಿಶೇಷ ಪ್ರಕರಣವನ್ನಾಗಿಪರಿಗಣಿಸಿ ತನಿಖೆ ಮಾಡಿಸಿ ಸತ್ಯ ಬಯಲಿಗೆಳೆಯಬೇಕು ಎಂದು ಒತ್ತಾಯಿಸಿದರು.

ಲೆಪ್ಟಿನೆಂಟ್‌ ಡಾ| ಎಸ್‌.ಆರ್‌. ಲೇಪಾಕ್ಷಿಮಾತನಾಡಿ, ಜನರಲ್‌ ಬಿಪಿನ್‌ ರಾವತ್‌ಮೃತಪಟ್ಟಿರುವುದು ದೇಶಕ್ಕೆ ಆಗಿರುವಅಘಾತವಾಗಿದೆ. ದಕ್ಷ, ಪ್ರಾಮಾಣಿಕ,ಧೈರ್ಯವಂತಿಕೆ, ಸಾಹಸಕ್ಕೆ ಹೆಸರುವಾಸಿಯಾಗಿದ್ದರು. ದೇಶವೇಇವರ ಸೇವೆಯನ್ನು ಶ್ಲಾಘಿಸುತ್ತದೆ.ಅವರ ಆದರ್ಶಗಳನ್ನು ತತ್ವಗಳನ್ನುವಿದ್ಯಾರ್ಥಿಗಳು ಮೈಗೂಢಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ 33ಕರ್ನಾಟಕ ಬ್ಯಾಟಲಿಯನ್‌ ಎನ್‌ಸಿಸಿದಾವಣಗೆರೆ ಸರ್ಕಾರಿ ಕಲಾ ಕಾಲೇಜುಮತ್ತು ಸರ್ಕಾರಿ ವಿಜ್ಞಾನ ಕಾಲೇಜು,ಎನ್‌ಸಿಸಿ ವಿದ್ಯಾರ್ಥಿಗಳು ಮತ್ತು ಯುವಮಿತ್ರರು ಪುಷ್ಪನಮನ ಸಲ್ಲಿಸಿದರು. ಸತ್ಯಮೇವ ಜಯತೆ ಯುವಶಕ್ತಿಸಂಘದ ಕಾರ್ಯದರ್ಶಿಯಾದಅಶೋಕ್‌ ಬೆಳಗಟ್ಟ, ನಗರಸಭೆ ಮಾಜಿಸದಸ್ಯ ತಿಪ್ಪೇಸ್ವಾಮಿ, ರಾಘವೇಂದ್ರರೆಡ್ಡಿ, ಮಹಂತೇಶ್‌ ರೆಡ್ಡಿ, ಸುರೇಶ್‌,ಚಿದಾನಂದಪ್ಪ, ಡಿ.ಎ. ರವಿಕುಮಾರ್‌,ತಿಪ್ಪೇಸ್ವಾಮಿ, ಶರತ್‌, ರಾಹುಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next