ಚಿತ್ರದುರ್ಗ: ಬೆಸ್ಕಾಂ ಹಾಗೂ ಲೋಕೋಪಯೋಗಿಇಲಾಖೆಗಳ ನಡುವೆ ಹೊಂದಾಣಿಕೆ ಇಲ್ಲದ್ದರಿಂದವಿದ್ಯುತ್ ಕಂಬಗಳು ಇರುವಂತೆಯೇ ರಸ್ತೆಮಾಡುತ್ತಿದ್ದಾರೆ. ಮೊದಲು ಆರ್‌ಟಿಒ ಕಚೇರಿ ರಸ್ತೆಕಾಮಗಾರಿ ಸರಿಪಡಿಸಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅ ಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರನಡೆದ ತಾಲೂಕು ಪಂಚಾಯಿತಿ ತ್ತೈಮಾಸಿಕ ಕೆಡಿಪಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಎಲ್ಲಾ ಇಲಾಖೆಗಳಿಗೆ ಕೇಳಿದಷ್ಟು ಅನುದಾನನೀಡಿದ್ದೇನೆ. ಆದರೆ ಬಹುತೇಕ ಅ ಧಿಕಾರಿಗಳಿಗೆ ತಮ್ಮಇಲಾಖೆಗೆ ಎಷ್ಟು ಅನುದಾನ ಬಂದಿದೆ ಎನ್ನುವುದೂಗೊತ್ತಿಲ್ಲ.
ಸರಿಯಾಗಿ ಕೆಲಸ ಮಾಡಲು ನಿಮಗೆಇರುವ ಸಮಸ್ಯೆಯಾದರೂ ಏನು ಎಂದು ಗರಂಆದರು. ಕಾಟಾಚಾರಕ್ಕೆ ಕೆಲಸ ಮಾಡುವುದು, ಸುಳ್ಳುಹೇಳುವುದನ್ನು ನಾನು ಸಹಿಸುವುದಿಲ್ಲ ಎಂದುಎಚ್ಚರಿಸಿದರು.ತಾಲೂಕಿನ ಗ್ರಾಮೀಣ ಭಾಗದ ಆಸ್ಪತ್ರೆಕಾಮಗಾರಿಗಳು ಎಲ್ಲಿಗೆ ಬಂದಿದೆ ಎಂದು ತಾಲೂಕುಆರೋಗ್ಯಾಧಿಕಾರಿ ಡಾ| ಗಿರೀಶ್ ಅವರನ್ನು ಶಾಸಕತಿಪ್ಪಾರೆಡ್ಡಿ ಪ್ರಶ್ನಿಸಿದರು.
ತಾಲೂಕು ಆರೋಗ್ಯಾಧಿಕಾರಿನನಗೆ ಅದರ ಮಾಹಿತಿ ಇಲ್ಲ ಎನ್ನುತ್ತಿದ್ದಂತೆ ಗರಂ ಆದಶಾಸಕರು, ಅಲ್ಲಪ್ಪ, ನೀನು ಬಂದು ಎಷ್ಟು ವರ್ಷಆಯ್ತು, ಆಸ್ಪತ್ರೆಗಳ ಹೊಸ ಕಟ್ಟಡ ನಿರ್ಮಾಣಕ್ಕೆಕೋಟಿಗಟ್ಟಲೆ ಹಣ ನೀಡಿ ಆರು ತಿಂಗಳು ಕಳೆದಿದೆ.ಮೊದಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಜತೆ ಮಾತನಾಡಿ ಅಭಿವೃದ್ಧಿ ಕೆಲಸ ಮಾಡು ಎಂದುಸೂಚಿಸಿದರು.ನಗರದ ಹೊರವಲಯದ ತಿಮ್ಮಣ್ಣ ನಾಯಕನ ಕೆರೆಸಮೀಪ 9 ಎಕರೆ 7 ಗುಂಟೆ ಜಾಗದಲ್ಲಿ ವಿಶಾಲವಾದ”ಟ್ರೀ ಗಾರ್ಡನ್’ ನಿರ್ಮಿಸಲು ಅನುದಾನ ನೀಡಿಹಲವು ವರ್ಷ ಕಳೆದಿದೆ, ಅಲ್ಲಿನ ಕಾಮಗಾರಿಯಪ್ರಗತಿ ಏನಾಗಿದೆ ಎಂದು ತೋಟಗಾರಿಕೆ ಇಲಾಖೆಅ ಧಿಕಾರಿಯನ್ನು ಪ್ರಶ್ನಿಸಿದರು.
ಈಗಾಗಲೇ ತಡೆಗೋಡೆ ನಿರ್ಮಾಣ ಕಾಮಗಾರಿನಡೆಯುತ್ತಿದೆ. ಬಳಿಕ ವಿವಿಧ ಅಭಿವೃದ್ಧಿ ಕಾಮಗಾರಿನಡೆಸಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆಅಧಿ ಕಾರಿ ನೀಡಿದ ಮಾಹಿತಿಗೆ ಪ್ರತಿಕ್ರಿಯಿಸಿದ ಶಾಸಕರು, ತಡೆಗೋಡೆ ಕಾಮಗಾರಿ ಕಳಪೆಯಾಗಿದೆಎಂದು ವಾಯುವಿಹಾರಿಗಳು ದೂರಿದ್ದಾರೆ. ಶೀಘ್ರಸಂಬಂಧಪಟ್ಟ ಇಲಾಖೆ ಅ ಧಿಕಾರಿಗಳ ಜತೆ ಸ್ಥಳಪರಿಶೀಲನೆ ನಡೆಸಲಾಗುವುದು ಎಂದರು.ಸಭೆಯಲ್ಲಿ ತಾಲೂಕು ಪಂಚಾಯಿತಿಕಾರ್ಯನಿರ್ವಹಣಾ ಧಿಕಾರಿ ಹನುಮಂತಪ್ಪಸೇರಿದಂತೆ ತಾಲೂಕು ಮಟ್ಟದ ಅಧಿ ಕಾರಿಗಳುಭಾಗವಹಿಸಿದ್ದರು