ಹೊಸದುರ್ಗ: ಕಳೆದ ಕೆಲವುದಿನಗಳಿಂದ ಸುರಿಯುತ್ತಿರುವಮಳೆಗೆ ತಾಲೂಕಿನ ಶ್ರೀರಾಂಪುರಹೋಬಳಿಯ ವೆಂಗಳಾಪುರ ಗ್ರಾಮದಸರಕಾರಿ ಹಿರಿಯ ಪ್ರಾಥಮಿಕಶಾಲಾ ಕೊಠಡಿಯ ಗೋಡೆ ಮತ್ತುಮೇಲ್ಛಾವಣಿ ಕುಸಿದು ಬಿದ್ದಿದೆ.
ಶಾಲಾ ಕಾಂಪೌಂಡ್ ಒಳಗೆಮಳೆ ನೀರು ಹೋಗಲು ಅವಕಾಶಕಲ್ಪಿಸದ್ದರಿಂದ ನೀರು ಗೋಡೆಯಸುತ್ತ ಸಂಗ್ರಹಗೊಂಡಿತ್ತು. ತೇವಾಂಶಜಾಸ್ತಿಯಾಗಿ ಗೋಡೆ ಕುಸಿದು ಬಿದ್ದಿದೆ.ಇದೇ ಸಮಯದಲ್ಲಿ ಮೇಲ್ಛಾವಣಿಯಹೆಂಚುಗಳು ಕೂಡ ಕೆಳಗೆ ಬಿದ್ದಿವೆ.ಪಕ್ಕದ ಕೊಠಡಿಗೂ ಹಾನಿಯಾಗಿದೆ.
ಬುಧವಾರ ರಾತ್ರಿ ಸಮಯದಲ್ಲಿಗೋಡೆ ಹಾಗೂ ಮೇಲ್ಛಾವಣಿಕುಸಿದು ಬಿದ್ದಿರುವುದರಿಂದವಿದ್ಯಾರ್ಥಿಗಳು ಅಪಾಯದಿಂದಪಾರಾಗಿದ್ದಾರೆ.ಮಳೆಯಿಂದ ಎರಡು ಕೊಠಡಿಗಳಗೋಡೆ ಕುಸಿತವಾಗಿರುವುದರಿಂದಶಾಲಾ ಆವರಣದ ಮರದಡಿಮೂರು ಮತ್ತು ನಾಲ್ಕನೇತರಗತಿ ಮಕ್ಕಳಿಗೆ ಪಾಠ ಪ್ರವಚನಮಾಡಲಾಯಿತು. ಶಾಲೆಯಲ್ಲಿಒಟ್ಟು ಏಳು ಕೊಠಡಿಗಳಿದ್ದು, ಎರಡುಕೊಠಡಿಗಳು ಹಾನಿಗೀಡಾಗಿವೆ.ಇನ್ನುಳಿದ ಐದು ಕೊಠಡಿಗಳಲ್ಲಿ ಒಂದರಲ್ಲಿ ಮಳೆ ನೀರು ನುಗ್ಗಿದೆ.ಹೀಗಾಗಿ ನಾಲ್ಕು ಕೊಠಡಿಗಳಲ್ಲಿತರಗತಿನಡೆಸಲಾಗುತ್ತಿದೆ.
ಮಕ್ಕಳತರಗತಿಗಳಿಗೆ ತೊಂದರೆಯಾಗಿದ್ದು,ಶಾಸಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದು ಗ್ರಾಮಸ್ಥರುಒತ್ತಾಯಿಸಿದ್ದಾರೆ.ಮಳೆಯಿಂದ ಶಾಲೆಯಕೊಠಡಿಗಳ ಮೇಲ್ಛಾವಣಿ ಹಾಗೂಗೋಡೆ ಕುಸಿತವಾಗಿರುವಹಿನ್ನೆಲೆಯಲ್ಲಿ ಹಳೆಯ ಕೊಠಡಿಗಳುಹಾಗೂ ಅಪಾಯದ ಅಂಚಿನಲ್ಲಿರುವಕೊಠಡಿಗಲ್ಲಿ ತರಗತಿ ನಡೆಸಬಾರದು.ಬದಲಾಗಿ ಬೇರೆ ಕೊಠಡಿಗಳಲ್ಲಿತರಗತಿಗಳನ್ನು ನಡೆಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಎಲ್. ಜಯಪ್ಪತಾಲೂಕಿನ ಎಲ್ಲಾ ಶಾಲೆಗಳಮುಖ್ಯಶಿಕ್ಷಕರಿಗೆಸೂಚನೆ ನೀಡಿದ್ದಾರೆ.