ಚಿತ್ರದುರ್ಗ: ಮನೆ ಗೋಡೆ ಕುಸಿದು ಮೂರುಜನ ಮೃತಪಟ್ಟಿದ್ದ ಹಿರಿಯೂರು ತಾಲೂಕುಚಿಕ್ಕಸಿದ್ದವ್ವನಹಳ್ಳಿ ಸಮೀಪದ ಹೋ.ಚಿ.ಬೋರಯ್ಯನಹಟ್ಟಿಗೆ ಕೇಂದ್ರ ಸಾಮಾಜಿಕ ನ್ಯಾಯಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವಎ. ನಾರಾಯಣಸ್ವಾಮಿ ಭೇಟಿ ನೀಡಿ ಮೃತರಕುಟುಂಬದವರಿಗೆ ಸಾಂತ್ವನ ಹೇಳಿದರು.
ಹೋ.ಚಿ. ಬೋರಯ್ಯ ಬಡಾವಣೆಯಲ್ಲಿವಾಸವಾಗಿರುವ ಜನರಿಗೆ ಮನೆ ನಿರ್ಮಿಸಲುಹೋ.ಚಿ. ಬೋರಯ್ಯ ಅರ್ಧ ಎಕರೆಜಮೀನನ್ನು ರಾಜ್ಯಪಾಲರ ಹೆಸರಿಗೆ ನೋಂದಣಿಮಾಡಿಕೊಟ್ಟಿದ್ದಾರೆ. ಈಗಾಗಲೇ ನೋಂದಣಿಮಾಡಿಸಿರುವುದರಿಂದ 94ಸಿ ಅವಶ್ಯಕತೆಇರುವುದಿಲ್ಲ. ತಾಪಂ ಇಒ ಸರ್ವೇ ನಡೆಸಿಅನುಮೋದನೆ ಪಡೆದು ಖಾತೆ ಮಾಡಿ ಮನೆಮಂಜೂರು ಮಾಡಿಕೊಡಬೇಕಾಗಿತ್ತು. ಆದರೆ ಆಕೆಲಸ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹೋ.ಚಿ. ಬೋರಯ್ಯ ಬಡಾವಣೆಯಲ್ಲಿ ವಾಸಮಾಡುವ ಕುಟುಂಬಗಳಿಗೆ ತಕ್ಷಣ ಅವರ ಹೆಸರಿಗೆಖಾತೆ ಮಾಡಬೇಕು. ಮನೆ ಹಕ್ಕುಪತ್ರ ವಿತರಣೆಹಾಗೂ ಹೊಸ ಮನೆಗಳ ನಿರ್ಮಾಣ ಮಾಡಬೇಕುಎಂದು ಜಿಲ್ಲಾ ಪಂಚಾಯಿತಿ ಸಿಇಒಗೆ ದೂರವಾಣಿಮೂಲಕ ಸಚಿವರು ಸೂಚನೆ ನೀಡಿದರು.
ನೀತಿಸಂಹಿತೆ ನೆಪ ಹೇಳ್ಳೋದೇಕೆ?: ಮಳೆಯಿಂದಗೋಡೆ ಕುಸಿದು ಒಂದೇ ಕುಟುಂಬದಮೂರು ಜನ ಮƒತಪಟ್ಟಿದ್ದರೂ ಅಧಿಕಾರಿಗಳುಚುನಾವಣೆ ನೀತಿಸಂಹಿತೆ ನೆಪ ಹೇಳಿಕೊಂಡುಮಾನವೀಯತೆಯನ್ನೇ ಮರೆತಿದ್ದಾರೆ ಎಂದುಸಚಿವ ನಾರಾಯಣಸ್ವಾಮಿ ಹರಿಹಾಯ್ದರು.
ಮಳೆಯಿಂದ ಒದ್ದೆಯಾದ ಗೋಡೆ ಕುಸಿದುಅಪ್ಪ, ಮಗ ಹಾಗೂ ಸೊಸೆ ಮೃತಪಟ್ಟಿರುವದಾರುಣ ಘಟನೆ ನಡೆದಿದ್ದರೂ ಅಧಿಕಾರಿಗಳುನೀತಿಸಂಹಿತೆ ನೆಪ ಹೇಳುತ್ತಿರುವುದು ಬೇಸರದಸಂಗತಿ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಪಂಸಿಇಒಗೆ ಸೂಚಿಸಿದ ಸಚಿವರು, ಹಿರಿಯೂರುತಾಪಂ ಇಒಗೆ ದೂರವಾಣಿ ಮೂಲಕವೇ ಕ್ಲಾಸ್‌ತೆಗೆದುಕೊಂಡರು.
ನಿಯಮಗಳ ಬಗ್ಗೆ ನನಗೆ ಹೇಳಲು ಬರಬೇಡಿ,ಮೃತರ ಕುಟುಂಬಕ್ಕೆ ಪರಿಹಾರ ನೀಡುವುದಷ್ಟೇಮುಖ್ಯ ಅಲ್ಲ. ಇಲ್ಲಿಗೆ ಬಂದು ಸಮಸ್ಯೆ ಆಲಿಸಿ.ಹೋ.ಚಿ. ಬೋರಯ್ಯನಹಟ್ಟಿಯಲ್ಲಿರುವಎಲ್ಲರಿಂದಲೂ ಅರ್ಜಿ ಪಡೆದು ಲೇಔಟ್ ನಿರ್ಮಿಸಿಮನೆಗಳನ್ನು ಮಂಜೂರು ಮಾಡಿ. ಮತ್ತೆ ನಾನುಇಲ್ಲಿಗೆ ಭೇಟಿ ನೀಡುವಷ್ಟರಲ್ಲಿ ಕಾಮಗಾರಿಆರಂಭವಾಗಿರಬೇಕು ಎಂದು ತಾಕೀತುಮಾಡಿದರು.