ಚಿತ್ರದುರ್ಗ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಕಾರ್ಯಕ್ರಮ ಸೇರಿದಂತೆ ಎಲ್ಲಾ ಖರ್ಚು ವೆಚ್ಚಗಳಮಾಹಿತಿಯನ್ನು ಕೇಂದ್ರ ಸಮಿತಿಗೆ ಸಲ್ಲಿಸಿದ್ದೇನೆ ಎಂದು ಕಸಾಪಮಾಜಿ ಅಧ್ಯಕ್ಷ ಹಾಗೂ ಮರು ಆಯ್ಕೆ ಬಯಸಿರುವ ಡಾ|ದೊಡ್ಡಮಲ್ಲಯ್ಯ ಹೇಳಿದರು.
ಶನಿವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೆಕ್ಕಪತ್ರ ಹಾಗೂ ಚುನಾವಣೆಘೋಷಣೆಯಾಗುವ ಹೊತ್ತಿನಲ್ಲಿ ಕಾರ್ಯಕ್ರಮ ಮಾಡಿದ್ದಾರೆಎಂದು ಕೆಲವರು ಆರೋಪ ಮಾಡಿದ್ದಾರೆ. ಆದರೆ ಸಾಹಿತ್ಯಚಟುವಟಿಕೆ ನಡೆಸಲು ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸತತ ಎರಡನೇ ಬಾರಿ ಕಸಾಪ ಅಧ್ಯಕ್ಷ ಸ್ಥಾನಕ್ಕೆಸ್ಪರ್ಧೆ ಮಾಡುವಂತಿಲ್ಲ ಎಂಬ ನಿಯಮ ರಾಜ್ಯಾಧ್ಯಕ್ಷರಿಗೆಮಾತ್ರ ಇದೆ. ಒಂದು ವೇಳೆ ಜಿಲ್ಲಾಧ್ಯಕ್ಷರಿಗೂ ನಿಯಮ ಇದ್ದರೆಚುನಾವಣಾಧಿ ಕಾರಿಗಳು ಬೈಲಾ ನೋಡಿ ನನ್ನ ನಾಮಪತ್ರತೆಗೆದುಕೊಳ್ಳುತ್ತಿರಲಿಲ್ಲ. ನಿಯಮ ಇದ್ದೂ ಪರಿಗಣಿಸಿದ್ದರೆಚುನಾವಣಾ ಧಿಕಾರಿಗಳ ತಪ್ಪಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆಪ್ರತಿಕ್ರಿಯಿಸಿದರು.
ಕನ್ನಡ ಭವನ ನಿರ್ಮಾಣಕ್ಕೆ ನಿವೇಶನಕೇಂದ್ರ ಸಮಿತಿ ಹೆಸರಿಗೆ ಇರಬೇಕಾಗಿತ್ತು. ಅದನ್ನು ವರ್ಗಾವಣೆಮಾಡುವುದು ಸೇರಿ ಕೆಲ ತಾಂತ್ರಿಕ ಸಮಸ್ಯೆಗಳಿದ್ದವು. ಈಹಿನ್ನೆಲೆಯಲ್ಲಿ ಭವನ ನಿರ್ಮಿಸಲು ಆಗಿಲ್ಲ. ಮುಂದಿನದಿನಗಳಲ್ಲಿ ಇದಕ್ಕೆ ಆದ್ಯತೆ ನೀಡುತ್ತೇವೆ ಎಂದರು.
ಡಾ| ದೊಡ್ಡಮಲ್ಲಯ್ಯ ಬೈಲಾ ಮೀರಿ ಎರಡನೇ ಅವ ಧಿಗೆಸ್ಪರ್ಧೆ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲೇ ಕೆಲವರುಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ವಾಗ್ವಾದವೂ ನಡೆಯಿತು.