ಚಳ್ಳಕೆರೆ: ತಾಲೂಕಿನ ಸುಕ್ಷೇತ್ರ ಗೌರಸಮುದ್ರದಶ್ರೀ ಮಾರಮ್ಮದೇವಿ ಜಾತ್ರೆಯನ್ನು ಕೊರೊನಾಹಿನ್ನೆಲೆಯಲ್ಲಿ ಈ ವರ್ಷವೂ ರದ್ದುಪಡಿಸಿರುವುದಾಗಿಪ್ರಕಟಿಸಲಾಗಿದ್ದರೂ ಭಕ್ತರು ಮಂಗಳವಾರ ಅಪಾರಸಂಖ್ಯೆಯಲ್ಲಿ ಆಗ್ಮಿಸಿ ದೇವಿಯ ದರ್ಶನ ಪಡೆದರು.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಹೆಚ್ಚುವರಿಜಿಲ್ಲಾ ರಕ್ಷಣಾಧಿ ಕಾರಿ ಮಹಲಿಂಗ ನಂದಗಾವಿ,ಅಪರ ಜಿಲ್ಲಾ ಧಿಕಾರಿ ಬಾಲಕೃಷ್ಣ, ತಹಶೀಲ್ದಾರ್‌ಎನ್. ರಘುಮೂರ್ತಿ ಹಾಗೂ ತಾಲೂಕು ಮಟ್ಟದವಿವಿಧ ಅಧಿಕಾರಿಗಳು ಜಾತ್ರೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿಬಂದೋಬಸ್ತ್ ಮಾಡಿದ್ದರು. ಮೂರನೇ ಹಂತದಕೊರೋನಾ ವ್ಯಾಪಿಸಿದಲ್ಲಿ ಹೆಚ್ಚಿನ ಅನಾಹುತವಾಗುವಸಾಧ್ಯತೆ ಇದ್ದಿದ್ದರಿಂದ ಮಾರ್ಗಸೂಚಿ ಅನ್ವಯಜಾತ್ರೆಯನ್ನು ಸರಳವಾಗಿ ಆಚರಿಸುವಂತೆಸೂಚಿಸಲಾಗಿತ್ತು. ಆದರೂ ಸಾವಿರಾರು ಭಕ್ತರು ಜಮಾಯಿಸಿದ್ದರು.
ಹಲವಾರು ಭಕ್ತರು ಖಾಸಗಿ ಬಸ್, ವಾಹನಗಳಲ್ಲಿಆಗಮಿಸಿದರೆ, ಗ್ರಾಮೀಣ ಭಾಗದ ಭಕ್ತರುಎಂದಿನಂತೆತಮ್ಮ ಎತ್ತಿನಬಂಡಿಗಳಲ್ಲಿ ಆಗಮಿಸಿದರು.ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶ ಹೊಲ,ತೋಟಗಳಲ್ಲಿ ದೇವಿಯ ಸೇವೆ ಮಾಡುವ ಮೂಲಕಭಕ್ತಿ ಸಮರ್ಪಿಸಿದರು. ತುಮಲು ಪ್ರದೇಶದಲ್ಲಿರುವ ಗರುಡಗಂಬದ ಮೇಲೆ ದೀಪ ಹಚ್ಚುವ ಪದ್ಧತಿ ಇದೆ.
ಇದನ್ನೂ ಓದಿ:ಬೀದಿ ಬದಿ ವ್ಯಾಪಾರಸ್ಥರ ಕಲ್ಯಾಣ ಮಂಡಳಿ ಸ್ಥಾಪಿಸಿ
ಆದರೆ ಮೆರವಣಿಗೆ ನಡೆಯದ ಹಿನ್ನೆಲೆಯಲ್ಲಿ ದೀಪ ಹಚ್ಚಲಿಲ್ಲ.ಚಳ್ಳಕೆರೆ ತಾಲೂಕು, ರಾಜ್ಯದ ವಿವಿಧೆಡೆಗಳಿಂದಹಾಗೂ ಆಂಧ್ರಪ್ರದೇಶದಿಂದಲೂ ಭಕ್ತರುಆಗಮಿಸಿದ್ದರು. ಹೆಚ್ಚುವರಿ ರಕ್ಷಣಾಧಿ ಕಾರಿಮಹಲಿಂಗ ನಂದಗಾವಿ ನೇತೃತ್ವದಲ್ಲಿ ಡಿವೈಎಸ್ಪಿ ಕೆ.ವಿ.ಶ್ರೀಧರ್ ಹಾಗೂ ಸಿಬ್ಬಂದಿ ಬಂದೋಬಸ್ತ್ ಕಾರ್ಯನಿರ್ವಹಿಸಿದರು.