ಚಿತ್ರದುರ್ಗ: ಭಾರತದ 75ನೇ ಸ್ವಾತಂತ್ರ ಅಮೃತ ಮಹೋತ್ಸವದಪ್ರಯುಕ್ತ ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರ, ವಕೀಲರ ಸಂಘ,ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆ ಆಶ್ರಯದಲ್ಲಿ ಬುಧವಾರಸ್ವತ್ಛತಾ ಅರಿವು ಹಾಗೂ ಜಾಗೃತಿ ಜಾಥಾ ಆಯೋಜಿಸಲಾಗಿತ್ತು.ನಗರದ ಆರ್‌ಟಿಒ ಕಚೇರಿ ಬಳಿ ಅಪರ ಎರಡನೇ ಹಿರಿಯ ಸಿವಿಲ್‌ನ್ಯಾಯಾ ಧೀಶ ಟಿ.ದೇವರಾಜ್ ಅವರು ಜಾಥಾಕ್ಕೆ ಚಾಲನೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾ ಧೀಶ ಬಿ.ಕೆ. ಗಿರೀಶ್, ವಕೀಲರ ಸಂಘದಉಪಾಧ್ಯಕ್ಷ ಜಿ.ಸಿ. ದಯಾನಂದ, ಕಾರ್ಯದರ್ಶಿ ಮೂರ್ತಿ, ಪ್ಯಾನಲ್‌ವಕೀಲ ವೀರಭದ್ರಪ್ಪ, ವಕೀಲ ಮಹೇಶ್ವರಪ್ಪ, ಎಂ.ಎಚ್. ಜಯಣ್ಣ,ನಗರಸಭೆ ಆರೋಗ್ಯ ನಿರೀಕ್ಷಕರು ಮತ್ತಿತರರು ಉಪಸ್ಥಿತರಿದ್ದರು.
ಬಸವೇಶ್ವರ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್‌ನ್ಯಾಯಾಧಿಧೀಶ ಟಿ. ದೇವರಾಜ್ ಮಾತನಾಡಿ, ನಮ್ಮ ಪರಿಸರವನ್ನುಸ್ವತ್ಛವಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರೂ ಸಹಕರಿಸಬೇಕು. ಕೇವಲಸಂಬಂಧಿ ಸಿದ ಇಲಾಖೆಯವರ ಕೆಲಸ ಎಂದು ನಿರ್ಲಕ್ಷ್ಯ ತೋರದೆನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವತ್ಛ ಹಾಗೂ ಸುಂದರವಾಗಿ ಇಟ್ಟುಕೊಳ್ಳಬೇಕು.
ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲುಸಾಧ್ಯ. ಅಲ್ಲದೆ ಉತ್ತಮ ಸಮಾಜ ಕಟ್ಟಲು ನೆರವಾಗಲಿದೆ. ಸಾಂಕ್ರಾಮಿಕರೋಗ ತಡೆಗಟ್ಟಲು ಶುಚಿತ್ವ ವಾತಾವರಣವೂ ಕಾರಣ. ಹಾಗಾಗಿಸುಂದರ ಪರಿಸರಕ್ಕೆ ಎಲ್ಲರೂ ಆದ್ಯತೆ ನೀಡಬೇಕು ಎಂದು ಕರೆನೀಡಿದರು.
ವಕೀಲರ ಸಂಘದ ಉಪಾಧ್ಯಕ್ಷ ಜಿ.ಸಿ. ದಯಾನಂದ, ಕಾನೂನಿನಬಗ್ಗೆ ಅರಿವು ನೆರವು ಕಾರ್ಯಕ್ರಮವನ್ನು ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಇದರ ನಡುವೆ ನಮ್ಮ ಪರಿಸರವನ್ನುಸ್ವತ್ಛವಾಗಿ ಇಟ್ಟುಕೊಳ್ಳಲು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿಅರಿವು ಮೂಡಿಸಬೇಕಿದೆ. ಹಾಗಾಗಿ ನಾಲ್ಕು ದಿನಗಳ ಕಾಲ ನಗರದನಾನಾ ಕಡೆಗಳಲ್ಲಿ ಸ್ವತ್ಛತೆ ಹಾಗೂ ಜಾಗೃತಿ ಜಾಥಾ ಆಯೋಜಿಸಲಾಗಿದೆಎಂದು ತಿಳಿಸಿದರು.
ನಗರಸಭೆ ಪೌರ ಕಾರ್ಮಿಕರ ಕೋರ್ಟ್‌ಮುಂಭಾಗ, ಬಸವೇಶ್ವರ ಸರ್ಕಲ್, ಎಸ್‌ಪಿ ಕಚೇರಿ ರಸ್ತೆ ಸೇರಿದಂತೆಮತ್ತಿತರ ಕಡೆಗಳಲ್ಲಿ ಸ್ವತ್ಛತಾ ಕಾರ್ಯ ನಡೆಯಿತು.