Advertisement

ನೀತಿ ಸಂಹಿತೆ: ಒನಕೆ ಓಬವ್ವಜಯಂತಿ ಮುಂದೂಡಿಕೆ

03:41 PM Nov 11, 2021 | Team Udayavani |

ಚಿತ್ರದುರ್ಗ: ವೀರವನಿತೆ ಒನಕೆ ಓಬವ್ವಜಯಂತಿಯನ್ನು ಚುನಾವಣಾ ನೀತಿಸಂಹಿತೆಹಿನ್ನೆಲೆಯಲ್ಲಿ ಮುಂದೂಡಿ ಸರ್ಕಾರ ಆದೇಶ ಹೊರಡಿಸಿದೆ.

Advertisement

ರಾಜ್ಯಾದ್ಯಂತ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ನ. 11 ರಂದುಸರ್ಕಾರದಿಂದ ಒನಕೆ ಓಬವ್ವ ಜಯಂತಿಆಚರಣೆ ಮಾಡುವಂತೆ ಆದೇಶಹೊರಡಿಸಲಾಗಿತ್ತು. ಆದರೆ ವಿಧಾನ ಪರಿಷತ್‌ಚುನಾವಣೆಗೆ ದಿನಾಂಕ ನಿಗದಿಯಾಗಿ ಮಾದರಿನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿಜಯಂತಿಯನ್ನು ಮುಂದೂಡಿ ಸರ್ಕಾರಮರು ಆದೇಶ ಹೊರಡಿಸಿದೆ. ಒನಕೆ ಓಬವ್ವಜಯಂತಿ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆಅಪರ ಜಿಲ್ಲಾ ಧಿಕಾರಿ ಇ. ಬಾಲಕೃಷ್ಣ ಅವರನೇತೃತ್ವದಲ್ಲಿ ಜಿಲ್ಲಾ ಧಿಕಾರಿ ಕಚೇರಿಯಲ್ಲಿಪೂರ್ವಭಾವಿ ಸಭೆ ನಡೆದಿತ್ತು.

ಸರಳ ಹಾಗೂಅರ್ಥಪೂರ್ಣವಾಗಿ ಒನಕೆ ಓಬವ್ವ ಜಯಂತಿಆಚರಿಸಲು ತೀರ್ಮಾನಿಸಲಾಗಿತ್ತು. ಆದರೆಸಂಜೆ ಹೊತ್ತಿಗೆ ಜಯಂತಿ ಮುಂದೂಡಿಆದೇಶ ಹೊರಡಿಸಲಾಗಿದೆ. ಸಿಎಂ, ಸಚಿವರಿಗೆ ಅಭಿನಂದನೆ: ವೀರವನಿತೆಒನಕೆ ಓಬವ್ವ ಜಯಂತಿಯನ್ನು ರಾಜ್ಯಸರ್ಕಾರದಿಂದ ಆಚರಣೆ ಮಾಡಲು ಸರ್ಕಾರಅ ಕೃತ ಆದೇಶ ಮಾಡಿದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಛಲವಾದಿ ಸಮುದಾಯದ ಮುಖಂಡರು ಹಾಗೂ ಹಾವೇರಿ ಶಾಸಕನೆಹರು ಓಲೆಕಾರ್‌ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಸಚಿವ ವಿ. ಸುನೀಲ್‌ಕುಮಾರ್‌ ಅವರನ್ನುಅಭಿನಂದಿಸಿದರು. ಸರ್ಕಾರದ ಆದೇಶಒನಕೆ ಓಬವ್ವಳ ಅಭಿಮಾನಿಗಳು ಹಾಗೂಆಕೆಯ ಸಮುದಾಯದವರಿಗೆ ಸಂತೋಷ ತಂದಿದೆ.

ಈ ದಿನಕ್ಕಾಗಿ ಬಹಳ ದಿನಗಳಿಂದಕಾಯುತ್ತಿದ್ದೆವು. ಇದಕ್ಕಾಗಿ ಹೋರಾಟವನ್ನೂಮಾಡಿದ್ದೆವು ಎಂದು ಧನ್ಯವಾದ ಅರ್ಪಿಸಿದರು.ಈ ವೇಳೆ ಸಿದ್ದಯ್ಯನಕೋಟೆ ಶ್ರೀ ವಿಜಯಮಹಾಂತೇಶ್ವರ ಸ್ವಾಮೀಜಿ, ಛಲವಾದಿಸಮುದಾಯದ ಎನ್‌.ಬಿ. ಭಾರ್ಗವಿದ್ರಾವಿಡ್‌, ವಕೀಲರಾದ ಕೇಶವಮೂರ್ತಿ,ಗೋವರ್ಧನ, ಮುತ್ತಣ್ಣ ಕಹಳೆ, ನಾಗರಾಜ್‌,ಎಚ್‌.ಡಿ. ನವೀನ, ದೀಪು, ಮಂಜುಳಾದೇವಿಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next