ಚಿತ್ರದುರ್ಗ: ವಿಧಾನ ಪರಿಷತ್ ಚುನಾವಣೆಯಲ್ಲಿಬಿಜೆಪಿ 13 ರಿಂದ 15 ಸ್ಥಾನಗಳನ್ನು ಗೆಲ್ಲಲಿದೆಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಮಹೇಶ್ ಟೆಂಗಿನಕಾಯಿ ವಿಶ್ವಾಸವ್ಯಕ್ತಪಡಿಸಿದರು.ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರನಡೆದ ಜನಸ್ವರಾಜ್ ಯಾತ್ರೆಯ ಪೂರ್ವಭಾವಿಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸದ್ಯ ವಿಧಾನ ಪರಿಷತ್‌ನಲ್ಲಿ 6ಸದಸ್ಯರಿದ್ದು, ಅದನ್ನು 15 ಕ್ಕೆ ಹೆಚ್ಚಿಸಲು ಚಿಂತನೆನಡೆಸಿದ್ದೇವೆ. ಈ ನಿಟ್ಟಿನಲ್ಲಿ ಜನ ಸ್ವರಾಜ್ ಯಾತ್ರೆಆಯೋಜಿಸುತ್ತಿದ್ದು, 4 ತಂಡಗಳು ರಾಜ್ಯಾದ್ಯಂತಪ್ರವಾಸ ಮಾಡಲಿವೆ ಎಂದರು.ಬಿಜೆಪಿ ಎಲ್ಲ ಚುನಾವಣೆಗಳನ್ನು ಅಭಿಯಾನದರೂಪದಲ್ಲಿ ನಡೆಸುತ್ತದೆ. ಹಿಂದೆ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಗ್ರಾಮ ಸ್ವರಾಜ್‌ಯಾತ್ರೆ ನಡೆಸಲಾಗಿತ್ತು.
ಚಿನ್ಹೆ ಇಲ್ಲದಿದ್ದರೂಪಕ್ಷಕ್ಕಾಗಿ ಬೆವರು, ಕೆಲವೊಮ್ಮೆ ರಕ್ತ ಹರಿಸುವಕಾರ್ಯಕರ್ತರಿಗಾಗಿ ಕೆಲಸ ಮಾಡಿದ್ದೇವೆ. ಇದರಪರಿಣಾಮ ರಾಜ್ಯದಲ್ಲಿ 45 ಸಾವಿರ ಬಿಜೆಪಿಕಾರ್ಯಕರ್ತರು ಗ್ರಾಮ ಪಂಚಾಯಿತಿಗಳಲ್ಲಿಗೆದ್ದಿದ್ದಾರೆ ಎಂದು ತಿಳಿಸಿದರು.ಈಗ ವಿಧಾನಪರಿಷತ್ ಚುನಾವಣೆ ಆರಂಭವಾಗಿದ್ದು, ನ. 18 ರಿಂದ ಬಿಜೆಪಿನಾಲ್ಕು ತಂಡಗಳಲ್ಲಿ ರಾಜ್ಯಾದ್ಯಂತ ಯಾತ್ರೆಆರಂಭಿಸಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪ, ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಮಾಜಿ ಸಿಎಂ ಜಗದೀಶ್‌ಶೆಟ್ಟರ್ ನೇತೃತ್ವದ ನಾಲ್ಕು ತಂಡಗಳಲ್ಲಿ ಜನಸ್ವರಾಜ್ ನಡೆಯಲಿದೆ. ಮಾಜಿ ಮುಖ್ಯಮಂತ್ರಿಜಗದೀಶ್ ಶೆಟ್ಟರ್ ನೇತƒತ್ವದ ತಂಡ ಚಿತ್ರದುರ್ಗ,ದಾವಣಗೆರೆ, ತುಮಕೂರು, ಬೆಂಗಳೂರುಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ. ಚಿತ್ರದುರ್ಗಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ನ. 18ರಂದು ಸಮಾವೇಶ ಆಯೋಜಿಸಲಾಗುವುದು.
ಈ ತಂಡದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವ ಅಶ್ವತ್ಥನಾರಾಯಣ,ಬೈರತಿ ಬಸವರಾಜ್, ಗೋಪಾಲಯ್ಯ, ಬಿ.ವೈ.ವಿಜಯೇಂದ್ರ, ಎನ್. ರಾಜೇಂದ್ರ, ಮಹೇಶ್‌ತೆಂಗಿನಕಾಯಿ, ಮುನಿರಾಜು ಗೌಡ ಇರುತ್ತಾರೆಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ರಾಜ್ಯ ಕಾರ್ಯದರ್ಶಿಕೆ.ಎಸ್. ನವೀನ್, ಜಿಲ್ಲಾಧ್ಯಕ್ಷ ಎ. ಮುರಳಿ,ರಾಜ್ಯ ಉಪಾಧ್ಯಕ್ಷ ನಂದೀಶ್, ಟಿ.ಜಿ. ನರೇಂದ್ರಇತರರು ಇದ್ದರು.