Advertisement

ಕೊಳಚೆ ನೀರು ತೆರವುಗೊಳಿಸಲು ಒತ್ತಾಯ

03:11 PM Nov 07, 2021 | Team Udayavani |

ಹೊಳಲ್ಕೆರೆ: ಪಟ್ಟಣದಲ್ಲಿ ಅಡಿಕೆ ತೋಟನಾಶ ಮಾಡುತ್ತಿರುವ ಕೊಳಚೆ ನೀರುತೆರವುಗೊಳಿಸಲು ಆಗ್ರಹಿಸಿ ರೈತರಸಂಘದ ಪದಾ ಧಿಕಾರಿಗಳು ಆಗ್ರಹಿಸಿಪ್ರತಿಭಟನೆ ನಡೆಸಿದರು.ಪಟ್ಟಣದ ಗಣಪತಿ ದೇವಸ್ಥಾನದಹಿಂಭಾಗದಲ್ಲಿರುವ ಹಿರೆಕೆರೆಗೆಹೊಂದಿಕೊಂಡಿರುವ ತೋಟಗಳಿಗೆಪಟ್ಟಣದಿಂದ ಕೊಳಚೆ ನೀರು ಹರಿದುಅಡಿಕೆ ತೋಟಗಳು ನೀರಿನಲ್ಲಿ ನಿಂತುಕೊಳೆತು ಹೋಗುತ್ತಿವೆ. ತಕ್ಷಣವೇ ಇಲ್ಲಿನಿಂತಿರುವ ನೀರು ತೆರವುಗೊಳಿಸಲುಸರಕಾರ ಮುಂದಾಗಬೇಕು ಎಂದು ಆಗ್ರಹಿಸಿ ಸಣ್ಣ ನೀರಾವರಿ ಇಲಾಖೆ,ತಹಶೀಲ್ದಾರ್‌, ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಹೊಳಲ್ಕೆರೆ ಪಟ್ಟಣದ ಕೋಟೆಭಾಗ ಸೇರಿದಂತೆ ಹಲವಾರುಬಡಾವಣೆಗಳ ಚರಂಡಿಗಳ ನೀರುಹರಿದು ತೋಟಗಳನ್ನು ಸೇರುತ್ತಿವೆ.ಈ ಮೊದಲು ಕೆರೆ ಸೇರಿದ್ದ ಕೊಳಚೆನೀರು ಅಡಿಕೆ ತೋಟಗಳಲ್ಲಿ ನಿಲ್ಲುತ್ತಿವೆ.ಇತ್ತೀಚೆಗೆ ಚೀರನಹಳ್ಳಿ ಕಂಬದೇವರಹಟ್ಟಿರಸ್ತೆ ನಿರ್ಮಾಣ ಮಾಡುವಾಗ ಚರಂಡಿನೀರು ಹರಿಯಲು ಸೂಕ್ತ ಚರಂಡಿನಿರ್ಮಾಣ ಮಾಡಿಲ್ಲ. ಹಾಗಾಗಿ ಕೊಳಚೆನೀರು ತೋಟಗಳಲ್ಲಿ ನಿಂತುಕೊಳ್ಳುತ್ತಿದೆ.

ಇದರಿಂದಾಗಿ ತೋಟಕ್ಕೆ ಹೋಗವದಾರಿಯಲ್ಲಿ ನಾಲ್ಕೆçದು ಅಡಿಯಷ್ಠುನೀರು ನಿಲ್ಲುವುದರಿಂದ ರೈತರುತೋಟಕ್ಕೆ ನಡೆದಾಡಲು ಹಾಗೂ ಕೃಷಿಕಾಯಕ ಕೈಗೊಳ್ಳಲು ಸಾಧ್ಯವಾಗಿಲ್ಲಎಂದು ದೂರಿದರು.

ಬಸವನಕೋಟೆ ನಾಗರಾಜಪ್ಪ,ರೇಣು, ಸಿದ್ದರಾಮಪ್ಪ, ಮನ್ನಾನ್‌ಖಾನ್‌, ದುಕ್ಕಡ್ಲೆ ಮಲ್ಲಪ್ಪ, ಮುಸ್ತಾಕ್‌,ಭರತ್‌ ಜೈನ್‌, ಸಂಗನಗುಂಡಿ ಮಂಜಪ್ಪ,ಹಾಲೇಶ್‌, ತೇಜು, ಸೇರಿದಂತೆಹಲವಾರು ರೈತರ ತೋಟಗಳಲ್ಲಿ ನೀರುನಿಂತು ಕೊಳೆ ರೋಗಕ್ಕೆ ತೋಟದಲ್ಲಿದ್ದಅಡಿಕೆ ತೆಂಗಿನ ಕಾಯಿಗಳು ನಲೆಕ್ಕೆಬಿದ್ದಿರುವ ಪರಿಣಾಮ ರೈತರ ಲಕ್ಷ Âಂತರಮೌಲ್ಯದ ಬೆಳೆ ನಾಶವಾಗಿದೆ. ಹಾಗಾಗಿತಕ್ಷಣವೇ ತಾಲೂಕು ಆಡಳಿತ ಚರಂಡಿನೀರು ಹರಿಯಲು ಬೇಕಾದ ಸೇತುವೆನಿರ್ಮಾಣ ಮಾಡಬೇಕೆಂದು ರೈತರಸಂಘದ ನಗರ ಘಟಕದ ಅಧ್ಯಕ್ಷರಾದಲೋಕೇಶ್‌, ಕಾರ್ಯದರ್ಶಿ ಅಜ್ಜಯ್‌,ಸೇರಿದಂತೆ ಹಲವಾರು ರೈತರಮುಖಂಡರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.