ಚಿತ್ರದುರ್ಗ: ಮಾತಾಡ್ ಮಾತಾಡ್‌ಕನ್ನಡ ಕಾರ್ಯಕ್ರಮ, ಕನ್ನಡ ಗೀತೆಗಳಗಾಯನ ರಾಜ್ಯಾದ್ಯಂತ ಎಲ್ಲಾಕಡೆ ನಡೆಯುತ್ತಿದ್ದು, ಅದರಂತೆಚಿತ್ರದುರ್ಗದಲ್ಲಿಯೂ ಕನ್ನಡಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ.
ಆದರೆ ಈಕನ್ನಡ ಕಾರ್ಯಕ್ರಮಗಳಿಗೆ ಕನ್ನಡಪರ ಹೋರಾಟಗಾರರನ್ನು ಆಹ್ವಾನಿಸದೆ ಕಡೆಗಣಿಸುತ್ತಿರುವುದನ್ನು ವಿರೋ ಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಕುಮಾರ್‌ಶೆಟ್ಟಿ ಬಣದ ಕಾರ್ಯಕರ್ತರು ಗುರುವಾರ ಜಿಲ್ಲಾ ಕಾರಿ ಕಚೇರಿ ಎದುರುಪ್ರತಿಭಟನೆ ನಡೆಸಿದರು.ಜಿಲ್ಲಾಡಳಿತದಿಂದ ಕಿತ್ತೂರುರಾಣಿ ಚನ್ನಮ್ಮ ಜಯಂತಿ ಆಚರಿಸಿ ಆ ಸಮಾಜದ ಮುಖಂಡರನ್ನು ನಿರ್ಲಕ್ಷಿಸಲಾಗಿದೆ.
ಅದೇ ರೀತಿ ಕನ್ನಡಪರ ಸಂಘಟನೆ, ಹೋರಾಟಗಾರರನ್ನುಯಾವುದೇ ಕನ್ನಡದ ಕಾರ್ಯಕ್ರಮಗಳಿಗೆ ಆಹ್ವಾನಿಸದೆ ಅವಮಾನಿಸಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಕನ್ನಡಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರನ್ನು ಪ್ರಶ್ನಿಸಿದರೆ ಉಡಾಫೆಉತ್ತರ ನೀಡುತ್ತಿದ್ದಾರೆ.
ಇಂತಹ ಅಧಿಕಾರಿಯನ್ನು ಸೇವೆಯಿಂದಅಮಾನತ್ತುಗೊಳಿಸಿ ಕನ್ನಡ ಪರಸಂಘಟನೆ, ಹೋರಾಟಗಾರರನ್ನುಗೌರವಿಸುವಂತೆ ಕರ್ನಾಟಕರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಕೆ.ಮಹಾಂತೇಶ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಸುರೇಶ್, ದಯಾನಂದ್, ಕೋಟೇಶ್,ಯತಿರಾಜ್, ಪದ್ಮ, ಜಿಲ್ಲಾಕಾರ್ಯಾಧ್ಯಕ್ಷ ಎನ್.ಸುರೇಶ್, ಜಿಲ್ಲಾಪ್ರಧಾನ ಕಾರ್ಯದರ್ಶಿ ರವಿಕುಮಾರ್,ಕೋದಂಡ, ಜಗದೀಶ್, ಗಿರೀಶ್,ತಿಪ್ಪೇಸ್ವಾಮಿ, ವೆಂಕಟೇಶ್, ಸೈಯದ್‌ಅಲಿ, ಶ್ರೀನಿವಾಸ್, ಅಶೋಕ್,ಪ್ರೇಮಾ, ಶಿವರುದ್ರಮ್ಮ, ಕಲಾವತಿ,ನೇತ್ರಾ ಮತ್ತಿತರರು ಇದ್ದರು.