Advertisement

ಆರೋಗ್ಯ ಇಲಾಖೆ ಕೊಡುಗೆ ಸ್ಮರಣೀಯ: ಶಾಸಕ ತಿಪ್ಪಾರೆಡ್ಡಿ

01:51 PM Oct 26, 2021 | Team Udayavani |

ಚಿತ್ರದುರ್ಗ: ಕೋವಿಡ್‌-19 ಮೊದಲಮತ್ತು ಎರಡನೇ ಅಲೆಯ ಸಂದರ್ಭದಲ್ಲಿವೈದ್ಯರು, ಶುಶ್ರೂಷಕಿಯರು, ಆರೋಗ್ಯಸಹಾಯಕರು, ಆಶಾ ಕಾರ್ಯಕರ್ತೆಯರುಸೇರಿದಂತೆ ಆರೋಗ್ಯ ಇಲಾಖೆಯ ಎಲ್ಲಾಸಿಬ್ಬಂದಿಗಳ ಶ್ರಮ ಅಪಾರ ಎಂದು ಶಾಸಕಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

Advertisement

ಜಿಲ್ಲಾ ಆಸ್ಪತ್ರೆ ಆವರಣದಲ್ಲಿಸೋಮವಾರ ಜಿಲ್ಲಾಡಳಿತ, ಜಿಪಂ,ಆರೋಗ್ಯ ಇಲಾಖೆ ಸಹಯೋಗದಲ್ಲಿಆಯೋಜಿಸಿದ್ದ 100 ಕೋಟಿ ಲಸಿಕೆ-ಹೊಸದಾಖಲೆ ಸಂಭ್ರಮಾಚರಣೆ ಕಾರ್ಯಕ್ರಮಉದ್ಘಾಟಿಸಿ ಅವರು ಮಾತನಾಡಿದರು.ಆರೋಗ್ಯ ಇಲಾಖೆ ಸಿಬ್ಬಂದಿ ಶ್ರಮದಿಂದದೇಶದಲ್ಲಿ ಇಂದು 100 ಕೋಟಿ ಲಸಿಕೆನೀಡಲು ಸಾಧ್ಯವಾಗಿದೆ. ಅವರ ಈ ಸೇವೆಶ್ಲಾಘನೀಯ ಎಂದರು.

ಆರೋಗ್ಯ ಇಲಾಖೆಯ ಎಲ್ಲಾಸಿಬ್ಬಂದಿಗಳು ಕೋವಿಡ್‌-19ಸಂದರ್ಭದಲ್ಲಿ ತಮ್ಮ ಮನೆಗಳಿಗೆತೆರಳದೆ ಕಾರ್ಯ ನಿರ್ವಹಿಸಿ ನಿಸ್ವಾರ್ಥಸೇವೆ ಸಲ್ಲಿಸಿದ್ದಾರೆ. ರಾಷ್ಟ್ರದ ಸೇವೆಮಾಡುವಲ್ಲಿ ತಮ್ಮ ಜೀವದ ಅಂಗುತೊರೆದು ಕೆಲಸ ಮಾಡಿದ್ದಾರೆ. ಆರೋಗ್ಯಇಲಾಖೆಯ ಸೇವೆಯನ್ನು ಮರೆಯಲುಯಾರಿಂದಲೂ ಸಾಧ್ಯವಿಲ್ಲ. ಸರ್ಕಾರದಮಾರ್ಗಸೂಚಿಯಂತೆ ಇಂದು ಕೋವಿಡ್‌ವಾರಿಯರ್ಸ್‌ಗೆ ಸನ್ಮಾನ ಮಾಡಲಾಗುತ್ತಿದೆ.ಕೋವಿಡ್‌ನಿಂದಾಗಿ ಅನೇಕ ಮಕ್ಕಳುತಮ್ಮ ತಂದೆ-ತಾಯಿಯರನ್ನು ಕಳೆದುಕೊಂಡಿದ್ದಾರೆ ಅಂತಹ ಮಕ್ಕಳಿಗೆಸರ್ಕಾರದ ವತಿಯಿಂದ ಪ್ರಾಥಮಿಕಶಿಕ್ಷಣದಿಂದ ಉನ್ನತ ಶಿಕ್ಷಣದವರಗೆ ಶಿಕ್ಷಣ ನೀಡಲು ಮುಂದಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರು ಕೋವಿಡ್‌ ಲಸಿಕೆಪಡೆದಿದ್ದೇವೆ, ನಮಗೆ ಕೊರೋನಾಬರುವುದಿಲ್ಲ ಎಂದು ಉದಾಸೀನಮಾಡದೆ ಎಲ್ಲರೂ ಮಾಸ್ಕ್ ಧರಿಸುವುದು,ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು,ಸ್ಯಾನಿಟೈಸರ್‌ ಬಳಕೆ ಮಾಡುವುದನ್ನುಮರೆಯಬಾರದು. ಈಗಾಗಲೇ ಕೋವಿಡ್‌ಮೊದಲ ಲಸಿಕೆ ಪಡೆದವರೂ ತಪ್ಪದೇಎರಡನೇ ಲಸಿಕೆ ಪಡೆಯಿರಿ ಎಂದು ಸಲಹೆನೀಡಿದರು.ಡಿಎಚ್‌ಒ ಡಾ| ಆರ್‌. ರಂಗನಾಥ್‌ಮಾತನಾಡಿ, ಕೋವಿಡ್‌-19 ಇಡೀಪ್ರಪಂಚಕ್ಕೆ ಆವರಿಸಿದಾಗ ಕೋವಿಡ್‌ಲಸಿಕೆಯನ್ನು ಬಹಳ ಪರಿಣಾಮಕಾರಿಯಾಗಿಕೊಡಬೇಕು ಎಂದು ಸರ್ಕಾರ ಪಣತೊಟ್ಟು ತ್ವರಿತವಾಗಿ ಇಡೀ ದೇಶದಲ್ಲಿಲಸಿಕೆ ನೀಡಿ ಸಾಧನೆ ಮಾಡಿದೆ.ಇದಕ್ಕೆ ಆರೋಗ್ಯ ಇಲಾಖೆಯಸಿಬ್ಬಂದಿ ಕಾರಣರಾಗಿದ್ದಾರೆ.

ಜಿಲ್ಲೆಯಲ್ಲಿ ಲಸಿಕೆ ವಿತರಿಸಲು12 ಲಕ್ಷ ಗುರಿ ನಿಗ ದಿಪಡಿಸಲಾಗಿತ್ತು.ಅದರಲ್ಲಿ 9.80 ಲಕ್ಷ ಜನರಿಗೆಲಸಿಕೆ ನೀಡಲಾಗಿದೆ ಎಂದರು. ಚಿತ್ರದುರ್ಗತಾಲೂಕಿನ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.

Advertisement

ನಗರಾಭಿವೃದ್ಧಿಪ್ರಾ ಧಿಕಾರದ ಅಧ್ಯಕ್ಷ ಟಿ. ಬದರಿನಾಥ್‌,ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಸ್ಥಾಯಿಸಮಿತಿ ಅಧ್ಯಕ್ಷ ಎಚ್‌. ಶ್ರೀನಿವಾಸ್‌,ಡಿಸಿ ಕವಿತಾ ಎಸ್‌. ಮನ್ನಿಕೇರಿ,ಜಿಪಂ ಸಿಇಒ ಡಾ| ಕೆ. ನಂದಿನಿದೇವಿ, ಎಸ್ಪಿ ಜಿ.ರಾಧಿ ಕಾ, ಜಿಲ್ಲಾ ಶಸ್ತ್ರಚಿಕಿತ್ಸಕಡಾ| ಎಚ್‌.ಜೆ. ಬಸವರಾಜ್‌, ಆರ್‌ಸಿಎಚ್‌ಅ ಧಿಕಾರಿ ಡಾ| ಪಿ.ಸಿ. ಕುಮಾರಸ್ವಾಮಿ,ತಾಲೂಕು ಆರೋಗ್ಯಾಧಿಕಾರಿಡಾ| ಬಿ.ವಿ. ಗಿರೀಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next