Advertisement

ದೀಕ್ಷೆ ಬದ್ದತೆಯ ಬದುಕಿಗೆ ದಾರಿದೀಪ: ಮುರುಘಾ ಶರಣರು

04:45 PM Oct 15, 2021 | Team Udayavani |

ಚಿತ್ರದುರ್ಗ: ಹಳೆಯ ಸಂಪ್ರದಾಯಗಳಿಗೆಸತ್‌ಸಂಪ್ರದಾಯದ ಸ್ಪರ್ಶ ನೀಡುವುದುಮುರುಘಾ ಮಠದ ಆಶಯವಾಗಿದೆ ಎಂದುಡಾ|ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ಅನುಭವ ಮಂಟಪದಲ್ಲಿನಡೆದ ಸಹಜ ಶಿವಯೋಗ ಕಾರ್ಯಕ್ರಮದಸಾನ್ನಿಧ್ಯ ವಹಿಸಿ ಮಾತನಾಡಿದರು.ಸಹಜ ಶಿವಯೋಗ ವಿಸ್ತಾರವಾದಲೋಕವಾಗಿದೆ. ಅನೇಕ ಜನ ಲೌಕಿಕಜೀವನದ ಪ್ರವೇಶ ಪಡೆಯುತ್ತಾರೆ.ದೀಕ್ಷೆ ಬದ್ಧತೆಯ ಬದುಕಿಗೆ ದಾರಿದೀಪ.ಪ್ರಬುದ್ಧತತೆಗೆ ದೀಕ್ಷೆ. ಅಧ್ಯಾತ್ಮ ಬದುಕಿಗೆಸೈದ್ಧಾಂತಿಕವಾಗಿ ಪಡೆದುಕೊಳ್ಳಲಾಗದವರುಸಹ ಪಡೆದುಕೊಳ್ಳಬಹುದಾದ ದೀಕ್ಷೆಯೇಸಹಜ ಶಿವಯೋಗ. ಪರಿಣಾಮವಿಲ್ಲದಪೂಜೆ ಮಾಡಿದರೆ ಪ್ರಯೋಜನವಿಲ್ಲ.ಪರಿಣಾಮವಿರುವ ಪೂಜೆ ಅಗತ್ಯ.ಸದ್ಭಾವನೆಯಿಂದ ಕೂಡಿದ ಸಹಜಶಿವಯೋಗ ಅತಿ ಅಗತ್ಯ.

Advertisement

ಶಿವಯೋಗವನ್ನುಏಕಾಂತದಲ್ಲಿ ಅಥವಾ ಸಾಮೂಹಿಕವಾಗಿಮಾಡಬಹುದು ಎಂದರು.ಶಿವಯೋಗವು ಅಭಿವೃದ್ಧಿಯಹಾದಿಯೆಡೆಗೆ ಪ್ರೇರಣೆ ನೀಡುತ್ತದೆ. ಶೀವಯೋಗವು ಅಭಿವೃದ್ಧಿಯಪಥ, ಪ್ರಗತಿಯ ಪಥ. ಅಂತರಂಗದ ಶೋಧನೆಯಾಗಬೇಕು.

ಇದು ಸಾಧನೆಗೆ ಮಾರ್ಗ. ಮನುಷ್ಯರಲ್ಲಿ ಸತ್‌ಚಿಂತನೆಗಳು,ಸಮಾಜಮುಖೀ ಯೋಜನೆಗಳಿರಬೇಕು.ಇವುಗಳು ಅನುಭವ ಮಂಟಪವನ್ನುಕಲ್ಯಾಣ ರಾಜ್ಯವನ್ನಾಗಿಸುತ್ತದೆ ಎಂದುಹೇಳಿದರು.

ಚಿಕ್ಕೋಡಿ ಶ್ರೀ ಸಂಪಾದನಾ ಸ್ವಾಮೀಜಿಮಾತನಾಡಿ, ಇತ್ತೀಚೆಗೆ ಎಲ್ಲೆಡೆ ಅನುಭವಮಂಟಪದ ಕಲ್ಪನೆಗಳನ್ನು ನಾವುಕಾಣುತ್ತಿದ್ದೇವೆ. ಇದಕ್ಕೆ ಬಸವತತ್ವವೇ ಕಾರಣ.

ಮುರುಘಾ ಮಠದಲ್ಲಿ ಸಾಮುಹಿಕಕಲ್ಯಾಣ ಕಾರ್ಯಕ್ರಮವು ಪ್ರತಿ ತಿಂಗಳುನಡೆಯುತ್ತಿದೆ. ಜನ ಅಮವಾಸ್ಯೆ, ಹುಣ್ಣಿಮೆಯಾವುದನ್ನು ನೋಡದೇ ಸಾಮೂಹಿಕವಿವಾಹಗಳಲ್ಲಿ ಮದುವೆಗಳನ್ನುಮಾಡುತ್ತಿದ್ದಾರೆ. ಜನ ಮೂಢನಂಬಿಕೆಗಳಿಂದ ಹೊರಬರಲು ಮುರುಘಾ ಶ್ರೀಗಳೇ ಮುಖ್ಯಕಾರಣ ಎಂದು ತಿಳಿಸಿದರು.

Advertisement

ರಾಯಚೂರು ಬಸವಕೇಂದ್ರದಸಿ.ಬಿ.ಪಾಟೀಲ್‌ ಮಾತನಾಡಿದರು.ಯಡ್ರಾಮಿ ವಿರಕ್ತಮಠದ ಶ್ರೀಸಿದ್ಧಲಿಂಗಸ್ವಾಮಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next