Advertisement

ಬಿಜೆಪಿ ಜನ ವಿರೋಧಿ ನೀತಿಗೆ ಜನಾಕ್ರೋಶ

03:17 PM Oct 12, 2021 | Team Udayavani |

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿಹಾಗೂ ಬಿಜೆಪಿಯ ಜನ ವಿರೋಧಿನೀತಿಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ದೇಶಾದ್ಯಂತ ಕಾಂಗ್ರೆಸ್‌ ಪರವಾದ ಅಲೆಏಳುತ್ತಿದೆ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಹೇಳಿದರು.

ತಾಲೂಕಿನ ಗೊಡಬನಾಳ್‌ನಲ್ಲಿ ಸೋಮವಾರ ಗ್ರಾಮಾಂತರ ಬ್ಲಾಕ್‌ಕಾಂಗ್ರೆಸ್‌ ಆಯೋಜಿಸಿದ್ದ ಕಾಂಗ್ರೆಸ್‌ಸಭೆ ಹಾಗೂ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮೋತ್ಸವದಲ್ಲಿ ಅವರು ಮಾತನಾಡಿದರು.

ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರೆ ದೇಶದ ಸಮಗ್ರಅಭಿವೃದ್ಧಿ ಮಾಡುವುದಾಗಿ ಜನರನ್ನುನಂಬಿಸಿದ ಮೋಸ ಮಾಡಿ ದೇಶದಜನರ ಬಗ್ಗೆ ಉದಾಸೀನ ಮಾಡುತ್ತಿದ್ದಾರೆ.ಬೆಂಗಳೂರು, ಹುಬ್ಬಳ್ಳಿ ವಿಮಾನ ನಿಲ್ದಾಣ ಕಟ್ಟಿದ್ದು ಬಿಜಪಿಯವರಾ?, ರೈಲ್ವೆ ಹಳಿಬ್ರಾಡ್‌ ಗೆàಜ್‌ ಸೇರಿದಂತೆ ದೇಶದ ಎಲ್ಲ ರೈಲು ನಿಲ್ದಾಣ, ಜಲಾಶಯ, ವಿದ್ಯುತ್‌ಸ್ಥಾವರ ನಿರ್ಮಿಸಿದರು ‌ ಕಾಂಗ್ರೆಸ್‌, ನಿಮ್ಮಕೊಡುಗೆ ಏನು ಎಂದು ಪ್ರಶ್ನಿಸಿದರು.

ಶ್ರೀಮಂತರ ಕೈಯಲ್ಲಿ ಬ್ಯಾಂಕ್‌ ಇದ್ದರೆ ಬಡವರು, ರೈತರು ಸೇವೆ ಪಡೆಯಲುಸಾಧ್ಯವಿಲ್ಲ ಎಂದು ಅರಿತ ಇಂದಿರಾಗಾಂಧಿಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿಸರ್ಕಾರ, ಜ®ರ ‌ ಆಸ್ತಿಯನ್ನಾಗಿಮಾಡಿದರು.

Advertisement

ಆದರೆ ಇಂದು ಎಚ್‌ಎಎಲ್‌ಸೇರಿದಂತೆ ಸಾರ್ವಜನಿಕ ಉದ್ಯಮಗಳನ್ನುಮಾರಾಟ ಮಾಡುವ ಮೂಲಕ ಪ್ರಧಾನಿನರೇಂದ್ರ ಮೋದಿ ದೇಶದ ಆರ್ಥಿಕತೆಹಾಳು ಮಾಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಬಿ.ಎಸ್‌. ಯಡಿಯೂರಪ್ಪಅವರನ್ನು ಮುಖ್ಯಮಂತ್ರಿ ಮಾvಬೇ ‌ ಕುಎಂಬ ಕಾÃಣಕೆ ‌ R ನನ್ನನ್ನೂ ಹಾಗೂÖನ ‌ ುಮಲಿ ಷಣ್ಮುಖಪ್ಪ ಅವರನ್ನೂಚುನಾÊಣೆ¿‌ ುಲ್ಲಿ ಸೋಲಿಸಲಾಯಿತು.ನಾವು ಸಾಕಷ್ಟು ಅಭಿವೃದ್ಧಿ ಕೆಲಸಮಾಡಿದ್ದೇವೆ. ಯಾವುದಕ್ಕೂ ನಾವು ಫಿಕ್ಸ್‌ಮಾಡಿಕೊಂಡಿರಲಿಲ್ಲ. ಜನರಿಗೆ ಕೆಲಸಮಾಡಲು ಬಂದಿರುವ ಜನಸೇವಕರುಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷಭೀಮಸಮುದ್ರದ ಜಿ.ಎಸ್‌.ಮಂಜುನಾಥ್‌ ಮಾತನಾಡಿ, ಕಾಂಗ್ರೆಸ್‌ಸರ್ಕಾರದ ಅವಧಿಯಲ್ಲಿ ಅನೇಕ ಜನಪರಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಮಾಡಲಾಗಿದೆ.

ಮುಂಬರುವ 2023ಚುನಾವಣೆಗೆ ಪಕ್ಷವನ್ನು ಅಧಿಕಾಕ್ಕೆ  ತರಲು ಪ್ರತಿಯೊಬ್ಬ ಕಾರ್ಯಕರ್ತರು ಸಂಘಟಿಸಬೇಕಾಗಿದೆ ಎಂದು ಕರೆ ನೀಡಿದರು.

ಇದನ್ನೂ ಓದಿ:ಗ್ರಾಮೀಣ ಸಮಸ್ಯೆಗಳಿಗೆ ಶಾಶತ ಪರಿಹಾರ

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ. ತಾಜ್‌ಪೀರ್‌,ಕೆಪಿಸಿಸಿ ಕಾರ್ಯದರ್ಶಿಹನುಮಲಿಷಣ್ಮುಖಪ್ಪ, ಹೊಳಲ್ಕೆರೆ ಪಿಎಲ್‌ಡಿಬ್ಯಾಂಕ್‌ ಅಧ್ಯಕ್ಷ ಕಾಟೀಹಳ್ಳಿ ಶಿವಣ್ಣ,ಎಪಿಎಂಸಿ ಮಾಜಿ ಅಧ್ಯಕ್ಷ ಸಿ¨ಲಿಂœ ‌ ಗಪ್ಪ,ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಗೀತಾನಂದಿನಿಗೌಡ, ಜಿಪಂ ಮಾಜಿ ಸದಸ್ಯೆ ಆರತಿಮಹಡಿ ಶಿವಮೂರ್ತಿ ಮಾತನಾಡಿದರು.

ಸಭೆಯಲ್ಲಿ ಲಿvÃR‌ … ಮಾಜಿ ಅಧ್ಯಕ್ಷಓ.ಶಂಕರ್‌, ಜಿಪಂ ಮಾಜಿ ಸದಸ್ಯ ಆರ್‌.ನರಸಿಂಹರಾಜು, ಬ್ಲಾಕ್‌  ಕಾಂಗ್ರೆಸ್‌ ಅಧ್ಯಕ್ಷಪ್ರಕಾಶ್‌, ಯೂತ್‌ ಕಾಂಗ್ರೆಸ್‌ ಅಧ್ಯಕ್ಷರಂಗಸ್ವಾಮಿ ಸೇರಿದಂತೆ ಅನೇಕ ಕಾಂಗ್ರೆಸ್‌ಮುಖಂಡರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next