ನಾಯಕನಹಟ್ಟಿ: ರೈತರು ಖರೀದಿಸಿದ ರಾಸಾಯನಿಕ ಗೊಬ್ಬರದಲ್ಲಿ ಕಲ್ಲುಗಳು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆಅಧಿಕಾರಿಗಳು ಮಂಗಳವಾರ ಫರ್ಟಿಲೈಸರ್ ಅಂಗಡಿಗೆ ಭೇಟಿ ಉಳಿದ ಗೊಬ್ಬರ ಮಾರಾಟ ಮಾಡದಂತೆ ನೋಟಿಸ್ ಜಾರಿ ಮಾಡಿದ್ದಾರೆ.
ನಲಗೇತನಹಟ್ಟಿ ಗ್ರಾಮದ ರೈತ ಕೆ.ಬಿ.ಬೋರಯ್ಯ ಹಾಗೂ ಅಜ್ಜಪ್ಪ ಪಟ್ಟಣದಲ್ಲಿನಗುರುಕೃಪ ಫರ್ಟಿಲೈಜರ್ನಲ್ಲಿ 1,380 ರೂ.ನೀಡಿ ಜೈಕಿಸಾನ್‌ಕಂಪನಿಯ ಸಮರ್ಥ ಎನ್‌ಪಿಕೆ ರಾಸಾಯನಿಕ ಗೊಬ್ಬರ ಖರೀದಿಸಿದ್ದರು.
ಆದರೆ ಗೊಬ್ಬರ ನೀರಲ್ಲಿ ಕರಗದೇ ಕಲ್ಲುಗಳುಉಳಿದಿವೆ. ಕಲ್ಲಿನ ಚೂರುಗಳ ಸುತ್ತಲೂ ಗೊಬ್ಬರ ಅಂಟಿಸಿದಂತೆ ಕಾಣುತ್ತಿತ್ತು.ಇದರಿಂದ ಅನುಮಾನಗೊಂಡ ರೈತರು ಗೊಬ್ಬರವನ್ನುನೀರಿನಲ್ಲಿ ಹಾಕಿದರು. ಆದರೆ ಗೊಬ್ಬರಕರಗದೆ ಕಲ್ಲುಗಳು ಉಳಿದುಕೊಂಡಿವೆ.
ಸಾಮಾನ್ಯವಾಗಿ ರಾಸಾಯನಿಕ ಗೊಬ್ಬರನೀರಿನಲ್ಲಿ ಸಂಪೂರ್ಣವಾಗಿ ಕರಗುತ್ತದೆ.ರಾಸಾಯನಿಕ ಗೊಬ್ಬರ ಸ್ವಲ್ಪ ಪ್ರಮಾಣದಲ್ಲಿಕರಗಿದ್ದು, ತಳ ಭಾಗದಲ್ಲಿ ಕಲ್ಲುಗಳು ಹಾಗೆಯೇ ಉಳಿದುಕೊಂಡವು. ರೈತರಾದಕೆ.ಬಿ. ಬೋರಯ್ಯ ಹಾಗೂ ಅಜ್ಜಪ್ಪ ಖರೀದಿಸಿದ್ದ ಗೊಬ್ಬರವನ್ನು ಚೀಲಗಳ ಸಮೇತ ರಶೀದಿಯೊಂದಿಗೆ ಕೃಷಿ ಇಲಾಖೆ ಅಧಿಕಾರಿಗಳಿಗೆ ನೀಡಿ ನಕಲಿ ಗೊಬ್ಬರಮಾರಾಟದ ಅನುಮಾನದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುವಂತೆ ಒತ್ತಾಯಿಸಿದರು.
ರೈತರ ದೂರಿನ ಹಿನ್ನೆಲೆಯಲ್ಲಿ ಕೃಷಿಅಧಿಕಾರಿ ಎನ್. ಹೇಮಂತ ನಾಯ್ಕಹಾಗೂ ಸಿಬ್ಬಂದಿ ಶ್ರೀನಿವಾಸ್ ಗೊಬ್ಬರವನ್ನುಪರಿಶೀಲಿಸಿದ್ದಾರೆ. ನಂತರ ಫರ್ಟಿಲೈಜರ್‌ಅಂಗಡಿಗೆ ಭೇಟಿ ನೀಡಿದ್ದಾರೆ. ಇನ್ನೂಮಾರಾಟವಾಗದೇ ಇರುವ ಗೊಬ್ಬರದ ಚೀಲಗಳಿಂದ ಸ್ಯಾಂಪಲ್‌ಗಳನ್ನು ಪಡೆದು ಇಲಾಖೆಯ ಪ್ರಯೋಗ ಶಾಲೆಗೆ ರವಾನಿಸಿದ್ದಾರೆ. ಪ್ರಯೋಗ ಶಾಲೆಯಿಂದವರದಿ ಬರುವವರೆಗೆ ಸ್ಟಾಕ್‌ನಲ್ಲಿರುವ ಗೊಬ್ಬರವನ್ನು ಮಾರಾಟ ಮಾಡದಂತೆ ತಡೆನೋಟಿಸ್ ಜಾರಿ ಮಾಡಿದ್ದಾರೆ.