Advertisement

ಆ.1ರಿಂದ ತಿಪಟೂರು-ಅರಸೀಕೆರೆ ತಾಲೂಕಲ್ಲಿ”ಮತ್ತೆ ಕಲ್ಯಾಣ’ಕಾರ್ಯಕ್ರಮ

07:08 PM Jul 29, 2022 | Team Udayavani |

ಹೊಸದುರ್ಗ: ಸಾಣೇಹಳ್ಳಿ ಮಠದವತಿಯಿಂದ ಆ.1ರಿಂದ 29ರವರೆಗೆತುಮಕೂರು ಜಿಲ್ಲೆಯ ತಿಪಟೂರುಮತ್ತು ಹಾಸನ ಜಿಲ್ಲೆಯ ಅರಸೀಕೆರೆತಾಲೂಕಿನ ಆಯ್ದ ಗ್ರಾಮಗಳಲ್ಲಿ “ಮತ್ತೆಕಲ್ಯಾಣ’ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀಮಠದ ಪೀಠಾಧ್ಯಕ್ಷಡಾ| ಪಂಡಿತಾರಾಧ್ಯ ಶಿವಾಚಾರ್ಯಸ್ವಾಮೀಜಿ ಈ ಕಾರ್ಯಕ್ರಮದ ನೇತೃತ್ವವಹಿಸಿದ್ದಾರೆ.

Advertisement

ಬಸವಾದಿ ಶಿವಶರಣರಆಶಯಗಳನ್ನು ಜನಮಾನಸದಲ್ಲಿ ಬಿತ್ತುವಉದ್ದೇಶದಿಂದ 2019ರಿಂದ “ಮತ್ತೆಕಲ್ಯಾಣ ಕಾರ್ಯಕ್ರಮ’ ನಡೆಯುತ್ತಿದೆ.ಆ.1ರಂದು ಬೆಳಗ್ಗೆ ಸಾಣೇಹಳ್ಳಿಯಲ್ಲಿಇಷ್ಟಲಿಂಗ ದೀûಾ ಕಾರ್ಯಕ್ರಮಮೂಲಕ ಈ ಬಾರಿಯ “ಮತ್ತೆ ಕಲ್ಯಾಣ’ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ಮಧ್ಯಾಹ್ನ 1 ಗಂಟೆಗೆ ಹೈಕೋರ್ಟ್‌ನಿವೃತ್ತ ನ್ಯಾಯಾಧೀಶ ಬಿಲ್ಲಲ್ಲ ಅವರುಶಿವ ಧ್ವಜಾರೋಹಣ ನೆರವೇರಿಸುವರು.ಸಾಣೇಹಳ್ಳಿಯ ಪ್ರಮುಖ ಬೀದಿಗಳಲ್ಲಿಆರಂಭಗೊಳ್ಳುವ ಮೆರವಣಿಗೆ ಸಂಜೆ4ಕ್ಕೆ ಅರಸೀಕೆರೆ ತಲುಪಲಿದೆ. ಅಲ್ಲಿಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿನಾಗಮೋಹನ ದಾಸ್‌ “ಮತ್ತೆ ಕಲ್ಯಾಣ’ಕಾರ್ಯಕ್ರಮ ಉದ್ಘಾಟಿಸುವರು.”ಕಲ್ಯಾಣ ದರ್ಶನ’ ವಿಷಯ ಕುರಿತುಜಾಗತಿಕ ಲಿಂಗಾಯತ ಮಹಾಸಭಾಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ ಉಪನ್ಯಾಸ ನೀಡುವರು.ಕೂಡಲಸಂಗಮ ಬಸವ ಧರ್ಮ ಪೀಠದಪೀಠಾಧ್ಯಕ್ಷರಾದ ಮಾತೆ ಗಂಗಾದೇವಿಸಾನ್ನಿಧ್ಯ ವಹಿಸುವರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next