Advertisement

ಮಹಿಳಾ ಸ್ವಾಸಹಾಯ ಸಂಘಗಳ ಪಾತ್ರ ಮಹತ್ವದ್ದು

06:09 PM Jun 29, 2022 | Team Udayavani |

ಚಿತ್ರದುರ್ಗ: ಗ್ರಾಮೀಣ ಭಾಗದಲ್ಲಿಮಹಿಳಾ ಸ್ವಸಹಾಯ ಸಂಘಗಳು ಸಣ್ಣಪುಟ್ಟಉಳಿತಾಯದ ಮೂಲಕ ಉತ್ತಮ ಆರ್ಥಿಕಚಟುವಟಿಕೆಗಳನ್ನು ನಿರ್ವಹಣೆ ಮಾಡುತ್ತಿವೆ.ಇದು ಉತ್ತಮ ಬೆಳವಣಿಗೆ ಎಂದು ಶಾಸಕಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

Advertisement

ನಗರದ ತರಾಸು ರಂಗಮಂದಿರದಲ್ಲಿಮಂಗಳವಾರ ಮಹಿಳಾ ಮತ್ತು ಮಕ್ಕಳಅಭಿವೃದ್ಧಿ ಇಲಾಖೆ, ಚಿತ್ರದುರ್ಗ ಮತ್ತುಭರಮಸಾಗರ ಶಿಶು ಅಭಿವೃದ್ಧಿ ಯೋಜನೆಅಧಿ ಕಾರಿಗಳ ಕಚೇರಿ ವತಿಯಿಂದ ಸ್ವಸಹಾಯಗುಂಪುಗಳಿಗೆ ಬೀಜಧನದ ಚೆಕ್‌ ವಿತರಣೆಮತ್ತು ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರಮಿಶ್ರಣ ವಿತರಣಾ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.ಸ್ವಸಹಾಯ ಗುಂಪುಗಳ ಮಹಿಳೆಯರುಬ್ಯಾಂಕಿಂಗ್‌ ಮೂಲಕ ಆರ್ಥಿಕಚಟುವಟಿಕೆಗಳನ್ನು ನಿರ್ವಹಿಸಲು ಸಹಾಯಮಾಡಿದ್ದಾರೆ.

ಮಹಿಳಾ ಸಂಘಗಳಿಗೆ ಸಾಲನೀಡಲು ಬ್ಯಾಂಕುಗಳು ಸಹ ಮುಂದೆಬರುತ್ತವೆ. ಯಾವುದೇ ಕಷ್ಟ ಹಾಗೂಅಲೆದಾಟವಿರದೆ ಸಾಲ ದೊರೆಯುತ್ತಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಮಹಿಳಾ ಸ್ವಸಹಾಯ ಸಂಘಗಳ ನೆರವಿಗೆನಿಂತಿವೆ ಎಂದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next