ಚಿತ್ರದುರ್ಗ: ಕೋಲ್ಕತ್ತಾದ ರಾಜಾರಾಮ್ ಮೋಹನ್‌ರಾಯ್ ಗ್ರಂಥಾಲಯ ಪ್ರತಿಷ್ಠಾನದ ಅಧಿ ಕಾರಿಗಳುಶುಕ್ರವಾರ ನಗರದ ವಿವಿಧ ಗ್ರಂಥಾಲಯಗಳಿಗೆ ಭೇಟಿನೀಡಿ ಪರಿಶೀಲನೆ ನಡೆಸಿದರು.
ರಾಜಾರಾಮ್ ಮೋಹನ್‌ರಾಯ್ ಗ್ರಂಥಾಲಯಪ್ರತಿಷ್ಠಾನದಿಂದ ಗ್ರಂಥಾಲಯಗಳ ಅಭಿವೃದ್ಧಿಗೆಅನುದಾನ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿವಲಯ ಕ್ಷೇತ್ರ ಸಹಾಯಕ ಅಸೀಮ್‌ಕುಮಾರ್‌ಸೇನ್ ಭೇಟಿ ನೀಡಿ ಪರಿಶೀಲಿಸಿದರು.
ನಗರ ಜಿಲ್ಲಾ ಕೇಂದ್ರ ಗ್ರಂಥಾಲಯ ಸೇರಿದಂತೆ ಜಿಲ್ಲೆಯ ವಿವಿಧಗ್ರಂಥಾಲಯಗಳಿಗೆ ಭೇಟಿ ನೀಡಿ, ಕಟ್ಟಡ, ಪುಸ್ತಕಗಳು,ಕಂಪ್ಯೂಟರ್, ಪೀಠೊಪಕರಣ ವ್ಯವಸ್ಥೆ ಮತ್ತಿತರೆಅಂಶಗಳನ್ನು ವೀಕ್ಷಿಸಿದರು.
ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಅಡಿಯಲ್ಲಿ ರಾಜಾರಾಂ ಮೋಹನ್‌ರಾಯ್‌ಗ್ರಂಥಾಲಯ ಪ್ರತಿಷ್ಠಾನ ಕಾರ್ಯ ನಿರ್ವಹಿಸುತ್ತಿದ್ದುಗ್ರಂಥಾಲಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ.
ಗ್ರಂಥಾಲಯಗಳ ಕಟ್ಟಡ ನಿರ್ಮಾಣಕ್ಕೆ ಹಣಕಾಸಿನನೆರವು, ಗ್ರಂಥಾಲಯ ಸಿಬ್ಬಂದಿಗೆ ಕಾಲ ಕಾಲಕ್ಕೆಸೂಕ್ತ ತರಬೇತಿ, ಕಾರ್ಯಾಗಾರಗಳ ಆಯೋಜನೆ,ಓದುಗರ ಬೇಡಿಕೆಗೆ ಅನುಗುಣವಾಗಿ ಪುಸ್ತಕಗಳಕೊಡುಗೆ, ಗ್ರಂಥಾಲಯಗಳಿಗೆ ಕಂಪ್ಯೂಟರ್,ಪೀಠೊಪಕರಣ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಖಾಸಗಿಯವರುನಡೆಸುವ ಗ್ರಂಥಾಲಯಗಳ ಅಭಿವೃದ್ಧಿಗೂ ಅನುದಾನನೀಡುತ್ತಿದೆ.