ಚಿತ್ರದುರ್ಗ: ಮಹಿಳೆ ಎಂಬ ಶಬ್ದ ಅತ್ಯಂತ ಸಾರ್ಥಕವಾದದ್ದು. ಇದರಲ್ಲಿ ಮಳೆ ಮತ್ತುಇಳೆ ಎರಡೂ ಜೋಡಣೆಯಾಗಿದೆ. ಈ ಎರಡೂ ಇಲ್ಲದೆ ಜಗತ್ತಿನ ಅಸ್ತಿತ್ವವೇ ಇಲ್ಲ ಎಂದುಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಮುರುಘಾ ಮಠದ ಅನುಭವ ಮಂಟಪದಲ್ಲಿ ಮಂಗಳವಾರ ನಡೆದಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಸವಣ್ಣಹೆಣ್ಣುಮಕ್ಕಳಿಗೆ ಎಲ್ಲ ರೀತಿಯ ಸ್ವಾತಂತ್ರÂ ಕೊಟ್ಟರು. ನೀಲಾಂಬಿಕೆ, ಬಸವಣ್ಣನವರಿಗೆವಿಚಾರಪತ್ನಿಯಾದೆನು ಎಂದು ಹೇಳುತ್ತಾರೆ ಎಂದರು. ಮಹಿಳೆಯರು ಹೆಚ್ಚು ಏಕಾಗ್ರತೆವಹಿಸುತ್ತಾರೆ. ಈ ಕಾರಣಕ್ಕೆ ಪರೀûಾ ಫಲಿತಾಂಶಗಳಲ್ಲಿ ಮಹಿಳೆಯರದ್ದು ಮೇಲುಗೈ.ಮಹಿಳೆಯರಲ್ಲಿ ಮಮತೆ ಎದ್ದು ಕಾಣುತ್ತದೆ. ಪುರುಷ ಜಗತ್ತನ್ನು ಆಳಬಹುದು, ಆದರೆಜಗತ್ತನ್ನು ಆಳುವಂತಹ ವ್ಯಕ್ತಿಯನ್ನು ಮಹಿಳೆ ಆಳುತ್ತಾಳೆ ಎಂದು ತಿಳಿಸಿದರು.
ಪದ್ಮಶ್ರೀ ಪುರಸ್ಕೃತ ವೈದ್ಯೆ ಡಾ| ಕಾಮಿನಿ ರಾವ್ ಮಾತನಾಡಿ, ಈ ಹಿಂದೆಗಂಡುಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದರು. ಈಗ ಹೆಣ್ಣುಮಕ್ಕಳಿಗೆ ಹೆಚ್ಚುಪ್ರೋತ್ಸಾಹ ನೀಡುತ್ತಿದ್ದಾರೆ. ಇಂದು ಹೆಣ್ಣುಮಕ್ಕಳು ಹೆಚ್ಚು ವಿದ್ಯಾರ್ಜನೆ ಮಾಡುತ್ತಿದ್ದಾರೆ.ಒಂದು ಹೆಣ್ಣು ನೌಕರಿಗೆ ಸೇರಿಕೊಂಡರೆ ಇಡೀ ಕುಟುಂಬ ಸುಶಿಕ್ಷಿತವಾಗುತ್ತದೆ ಎಂದರು.ಜಿಲ್ಲಾ ಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ಮೊದಲು ನಾವು ಹೆಣ್ಣುಮಕ್ಕಳನ್ನುಗೌರವಿಸಬೇಕಿದೆ. ಹೆಣ್ಣನ್ನು ಎಲ್ಲರು ಗೌರವದಿಂದ ಕಂಡಾಗ ಸಮಾಜದಲ್ಲಿ ಅಪರಾಧಗಳುಕಡಿಮೆಯಾಗುತವೆ ಎಂದು ಅಭಿಪ್ರಾಯಪಟ್ಟರು. ಎಸ್.ಜೆ.ಎಂ ಪಾಲಿಟೆಕ್ನಿಕ್ ಕಾಲೇಜಿನಪ್ರಾಧ್ಯಾಪಕಿ ಸವಿತಾ ಎಸ್. ಮಾತನಾಡಿ, ಪ್ರಪಂಚದ ಕ್ರಾಂತಿಗಳಲ್ಲಿ ಮಹಿಳಾ ಕ್ರಾಂತಿಯೂಒಂದು. ಅಮೆರಿಕ ಇನ್ನೂ ಸಹ ಮಹಿಳಾ ಅಧ್ಯಕ್ಷರನ್ನು ಕಂಡಿಲ್ಲ. ಆದರೆ ಭಾರತದಲ್ಲಿಮಹಿಳೆಯರಿಗೆ ಅನೇಕ ಸ್ಥಾನಮಾನಗಳನ್ನು ಕೊಡಲಾಗಿದೆ. ಇಂದಿರಾ ಗಾಂಧಿ , ಪ್ರತಿಭಾಪಾಟೀಲ್ ಮೊದಲಾದವರು ಭಾರತದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಎಲ್ಲಕ್ಷೇತ್ರಗಳಲ್ಲಿ ಮಹಿಳೆ ಮುಂದೆ ಬರುತ್ತಿದ್ದಾಳೆ ಎಂದು ತಿಳಿಸಿದರು.