Advertisement

ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸಲಿ

05:35 PM Feb 23, 2022 | Team Udayavani |

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಶೇ.50ಕ್ಕಿಂತ ಹೆಚ್ಚು ಭೂಮಿ ಕಳೆದುಕೊಂಡ ರೈತರಿಗೆಭೂ ಪರಿಹಾರದ ಜೊತೆಗೆ ಪ್ರತ್ಯೇಕವಾಗಿ 5 ಲಕ್ಷ ರೂ.ನೀಡಲಾಗುವುದು ಎಂದು ಅಪರ ಜಿಲ್ಲಾ ಧಿಕಾರಿ ಇ.ಬಾಲಕೃಷ್ಣ ಹೇಳಿದರು.ಹೊಸದುರ್ಗ ತಾಲೂಕು ದೊಡ್ಡಕಿಟ್ಟದಹಳ್ಳಿಯಲ್ಲಿಮಂಗಳವಾರ ಆಯೋಜಿಸಿದ್ದ ಪುನರ್ವಸತಿ ಮತ್ತುಪುನರ್‌ ನಿರ್ಮಾಣ ಸಭೆ ಹಾಗೂ ಅಹವಾಲುಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರುಮಾತನಾಡಿದರು.
ದೊಡ್ಡಕಿಟ್ಟದಹಳ್ಳಿ ವ್ಯಾಪ್ತಿಯಲ್ಲಿಭದ್ರಾ ಮೇಲ್ದಂಡೆಗೆ ಯಾವ ರೈತರೂ ಶೇ. 50ಕ್ಕಿಂತಹೆಚ್ಚು ಭೂಮಿ ಕಳೆದುಕೊಂಡಿಲ್ಲ ಎಂಬ ಮಾಹಿತಿಇದೆ. ಈ ಸಂಬಂಧ ಯಾವುದಾದರೂ ಸಮಸ್ಯೆಹಾಗೂ ದೂರುಗಳಿದ್ದಲ್ಲಿ ಅ ಧಿಕಾರಿಗಳಿಗೆ ತಿಳಿಸಿ ಸೂಕ್ತಪರಿಹಾರ ಪಡೆದುಕೊಳ್ಳಬೇಕು ಎಂದರು.ಅ ಧಿಕಾರಿಗಳು ರೈತರ ಸಮಸ್ಯೆಗಳಿಗೆ ಜವಾಬ್ದಾರಿತೆಗೆದುಕೊಂಡು ಕೆಲಸ ಮಾಡಬೇಕು.

Advertisement

ವಿಶೇಷ ಭೂಸ್ವಾಧೀನಾಧಿಕಾರಿಗಳು ಭೂಸ್ವಾಧೀನ ಮಾಡುತ್ತಾರೆ.ಸಹಾಯಕ ಕಾರ್ಯಪಾಲಕ ಅಭಿಯಂತರರುಹಾಗೂ ಅವರ ಅ ಧಿ ವರ್ಗದವರು ಸ್ಥಳ ಪರಿಶೀಲನೆಮಾಡಬೇಕು. ಸಮಸ್ಯೆಗಳ ಪಟ್ಟಿ ಮಾಡಿಕೊಂಡುಪರಿಶೀಲಿಸಿ ಸಮಸ್ಯೆಗೆ ಪರಿಹಾರ ನೀಡಬೇಕು ಎಂದುಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next